+ -

عَنْ أُمِّ سَلَمَةَ أُمِّ المؤْمنينَ رَضيَ اللهُ عنها أَنَّهَا قَالَتْ: سَمِعْتُ رَسُولَ اللهِ صلى الله عليه وسلم يَقُولُ:
«مَا مِنْ مُسْلِمٍ تُصِيبُهُ مُصِيبَةٌ فَيَقُولُ مَا أَمَرَهُ اللهُ: {إِنَّا لِلهِ وَإِنَّا إِلَيْهِ رَاجِعُونَ} [البقرة: 156]، اللَّهُمَّ أْجُرْنِي فِي مُصِيبَتِي، وَأَخْلِفْ لِي خَيْرًا مِنْهَا، إِلَّا أَخْلَفَ اللهُ لَهُ خَيْرًا مِنْهَا»، قَالَتْ: فَلَمَّا مَاتَ أَبُو سَلَمَةَ قُلْتُ: أَيُّ الْمُسْلِمِينَ خَيْرٌ مِنْ أَبِي سَلَمَةَ؟ أَوَّلُ بَيْتٍ هَاجَرَ إِلَى رَسُولِ اللهِ صلى الله عليه وسلم، ثُمَّ إِنِّي قُلْتُهَا، فَأَخْلَفَ اللهُ لِي رَسُولَ اللهِ صلى الله عليه وسلم.

[صحيح] - [رواه مسلم] - [صحيح مسلم: 918]
المزيــد ...

ಸತ್ಯವಿಶ್ವಾಸಿಗಳ ಮಾತೆ ಉಮ್ಮ್ ಸಲಮಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದನ್ನು ಕೇಳಿದ್ದೇನೆ:
"ಯಾವುದೇ ಒಬ್ಬ ಮುಸ್ಲಿಮನಿಗೆ ಒಂದು ಆಪತ್ತು ಸಂಭವಿಸಿದಾಗ, ಅವನು ಅಲ್ಲಾಹು ಆದೇಶಿಸಿದಂತೆ: 'ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್' (ಖಂಡಿತವಾಗಿಯೂ ನಾವು ಅಲ್ಲಾಹನಿಗೆ ಸೇರಿದವರು ಮತ್ತು ನಾವು ಅವನ ಕಡೆಗೆ ಮರಳುವವರು) [ಸೂರ ಅಲ್-ಬಖರಾ: 156], 'ಅಲ್ಲಾಹುಮ್ಮ ಅ್‌ಜುರ್‌ನೀ ಫೀ ಮುಸೀಬತೀ, ವ ಅಖ್ಲಿಫ್ ಲೀ ಖೈರನ್ ಮಿನ್ಹಾ' (ಓ ಅಲ್ಲಾಹನೇ, ನನ್ನ ಆಪತ್ತಿನಲ್ಲಿ ನನಗೆ ಪ್ರತಿಫಲ ನೀಡು, ಮತ್ತು ನನಗೆ ಅದಕ್ಕಿಂತ ಉತ್ತಮವಾದುದನ್ನು ಬದಲಿಯಾಗಿ ನೀಡು) ಎಂದು ಹೇಳಿದರೆ, ಅಲ್ಲಾಹು ಅವನಿಗೆ ಅದಕ್ಕಿಂತ ಉತ್ತಮವಾದುದನ್ನು ಬದಲಿಯಾಗಿ ನೀಡದೇ ಇರಲಾರನು". ಅವರು (ಉಮ್ಮ್ ಸಲಮಾ) ಹೇಳಿದರು: "ಅಬೂ ಸಲಮಾ (ಅವರ ಪತಿ) ಮರಣ ಹೊಂದಿದಾಗ, ನಾನು (ಮನಸ್ಸಿನಲ್ಲಿ) ಅಂದುಕೊಂಡೆ: 'ಅಬೂ ಸಲಮಾಗಿಂತ ಉತ್ತಮ ಮುಸ್ಲಿಂ ಯಾರು? ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡೆಗೆ ಹಿಜ್ರತ್ (ವಲಸೆ) ಹೋದ ಮೊದಲ ಮನೆತನ (ಅವರದ್ದಾಗಿದೆ)'. ನಂತರ ನಾನು ಅದನ್ನು (ಆ ಪ್ರಾರ್ಥನೆಯನ್ನು) ಹೇಳಿದೆನು. ಆಗ ಅಲ್ಲಾಹು ನನಗೆ (ಅದಕ್ಕೆ ಬದಲಿಯಾಗಿ) ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಪತಿಯಾಗಿ) ನೀಡಿದನು".

[صحيح] - [رواه مسلم] - [صحيح مسلم - 918]

ವಿವರಣೆ

ಸತ್ಯವಿಶ್ವಾಸಿಗಳ ಮಾತೆ ಉಮ್ಮ್ ಸಲಮಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಹೇಳುವುದೇನೆಂದರೆ, ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದರು: ಯಾವುದೇ ಮುಸ್ಲಿಮನಿಗೆ ಆಪತ್ತು ಸಂಭವಿಸಿದಾಗ, ಅಲ್ಲಾಹು ಅವನಿಗೆ ಹೇಳಲು ಅಪೇಕ್ಷಣೀಯಗೊಳಿಸಿದ್ದನ್ನು ಹೇಳಿದರೆ: “ಖಂಡಿತವಾಗಿಯೂ ನಾವು ಅಲ್ಲಾಹನಿಗೆ ಸೇರಿದವರು ಮತ್ತು ನಾವು ಅವನ ಕಡೆಗೆ ಮರಳುವವರು” [ಸೂರ ಅಲ್-ಬಖರಾ: 156], “ಓ ಅಲ್ಲಾಹನೇ, ನನ್ನ ಆಪತ್ತಿನಲ್ಲಿ ನನಗೆ ಪ್ರತಿಫಲ ನೀಡು” ಅಂದರೆ, ನನ್ನ ತಾಳ್ಮೆಗಾಗಿ ನನಗೆ ಪ್ರತಿಫಲವನ್ನು ಕೊಡು, ಮತ್ತು ನನಗೆ ಪರಿಹಾರವನ್ನು ನೀಡು “ಮತ್ತು ಅದಕ್ಕಿಂತ ಉತ್ತಮವಾದುದನ್ನು ನನಗೆ ಬದಲಿಯಾಗಿ ನೀಡು” ಅಂದರೆ, ಅದಕ್ಕೆ ಪ್ರತಿಯಾಗಿ ನೀಡು; ಆಗ ಅಲ್ಲಾಹು ಅವನಿಗೆ ಅದಕ್ಕಿಂತ ಉತ್ತಮವಾದುದನ್ನು ಪರಿಹಾರವಾಗಿ ನೀಡುತ್ತಾನೆ. ಅವರು (ಉಮ್ಮ್ ಸಲಮಾ) ಹೇಳುತ್ತಾರೆ: ಅಬೂ ಸಲಮಾ ಮರಣ ಹೊಂದಿದಾಗ ನಾನು (ಮನಸ್ಸಿನಲ್ಲಿ) ಹೇಳಿದೆ: ಮುಸ್ಲಿಮರಲ್ಲಿ ಅಬೂ ಸಲಮಾಗಿಂತ ಉತ್ತಮರು ಯಾರಿದ್ದಾರೆ?! ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡೆಗೆ ಹಿಜ್ರತ್ ಹೋದ ಮೊದಲ ಮನೆತನ ಅವರದ್ದಾಗಿದೆ. ನಂತರ ಅಲ್ಲಾಹು ನನಗೆ ಸಹಾಯ ಮಾಡಿದನು, ಮತ್ತು ನಾನು ಅದನ್ನು (ಆ ಪ್ರಾರ್ಥನೆಯನ್ನು) ಹೇಳಿದೆನು. ಆಗ ಅಲ್ಲಾಹು ನನಗೆ ಅಬೂ ಸಲಮಾಗಿಂತ ಉತ್ತಮರಾದ ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬದಲಿಯಾಗಿ ನೀಡಿದನು.

ಹದೀಸಿನ ಪ್ರಯೋಜನಗಳು

  1. ಆಪತ್ತುಗಳು ಸಂಭವಿಸಿದಾಗ ತಾಳ್ಮೆ ವಹಿಸಲು ಮತ್ತು ಆತಂಕ ಪಡದಿರಲು ಆದೇಶಿಸಲಾಗಿದೆ.
  2. ಕಷ್ಟದ ಸಂದರ್ಭಗಳಲ್ಲಿ ಪ್ರಾರ್ಥನೆಯ ಮೂಲಕ ಅಲ್ಲಾಹನ ಕಡೆಗೆ ಮುಖ ಮಾಡಬೇಕು; ಏಕೆಂದರೆ ಅವನ ಬಳಿ (ಎಲ್ಲದ್ದಕ್ಕೂ) ಪರಿಹಾರವಿದೆ.
  3. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶದ ಹಿಂದಿರುವ ವಿವೇಕವು ತಿಳಿಯದೇ ಹೋದರೂ ಸಹ, ಸತ್ಯವಿಶ್ವಾಸಿಯು ಅದನ್ನು ಪಾಲಿಸುವುದು ಅತ್ಯಗತ್ಯವಾಗಿದೆ.
  4. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶವನ್ನು ಸತ್ಯವಿಶ್ವಾಸಿ ಪಾಲಿಸುವುದರಲ್ಲಿಯೇ ಸಂಪೂರ್ಣ ಒಳಿತಿದೆ.
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ಸಿಂಹಳೀಯ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية الأمهرية الهولندية الغوجاراتية الدرية الرومانية المجرية الموري الولوف الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು