عَنْ حُذَيْفَةَ رضي الله عنه أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«لَا تَقُولُوا: مَا شَاءَ اللهُ وَشَاءَ فُلَانٌ، وَلَكِنْ قُولُوا: مَا شَاءَ اللهُ ثُمَّ شَاءَ فُلَانٌ».
[صحيح بمجموع طرقه] - [رواه أبو داود والنسائي في الكبرى وأحمد] - [السنن الكبرى للنسائي: 10755]
المزيــد ...
ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಲ್ಲಾಹು ಇಚ್ಛಿಸಿದ್ದು ಮತ್ತು ಇಂತಿಂತಹವನು ಇಚ್ಛಿಸಿದ್ದು ಎಂದು ಹೇಳಬೇಡಿ. ಬದಲಿಗೆ, ಅಲ್ಲಾಹು ಇಚ್ಛಿಸಿದ್ದು ನಂತರ ಇಂತಿಂತಹವನು ಇಚ್ಛಿಸಿದ್ದು ಎಂದು ಹೇಳಿರಿ."
[صحيح بمجموع طرقه] - [رواه أبو داود والنسائي في الكبرى وأحمد] - [السنن الكبرى للنسائي - 10755]
ಮುಸಲ್ಮಾನನು ತನ್ನ ಮಾತಿನಲ್ಲಿ ಈ ರೀತಿ ಹೇಳುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ: "ಅಲ್ಲಾಹು ಇಚ್ಛಿಸಿದ್ದು ಮತ್ತು ಇಂತಿಂತಹವನು ಇಚ್ಛಿಸಿದ್ದು." ಅಥವಾ "ಅಲ್ಲಾಹು ಮತ್ತು ಇಂತಿಂತಹವನು ಇಚ್ಛಿಸಿದ್ದು." ಅದೇಕೆಂದರೆ, ಅಲ್ಲಾಹನ ಇಚ್ಛೆ ಮತ್ತು ಇರಾದೆ ಸ್ವತಂತ್ರವಾಗಿದ್ದು ಯಾರೂ ಅದರಲ್ಲಿ ಪಾಲುದಾರರಲ್ಲ. "ವ" (ಮತ್ತು) ಎಂಬ ಪದಬಳಕೆಯು ಅಲ್ಲಾಹನೊಂದಿಗೆ ಇತರರ ಪಾಲುದಾರಿಕೆಯನ್ನು ಮತ್ತು ಇಬ್ಬರಲ್ಲಿರುವ ಸಮಾನತೆಯನ್ನು ಸೂಚಿಸುತ್ತದೆ. ಬದಲಿಗೆ, ಹೀಗೆ ಹೇಳಬೇಕಾಗಿದೆ: "ಅಲ್ಲಾಹು ಇಚ್ಛಿಸಿದ್ದು ನಂತರ ಇಂತಿಂತಹವನು ಇಚ್ಛಿಸಿದ್ದು." "ವ" (ಮತ್ತು) ಎಂಬ ಪದದ ಬದಲಿಗೆ "ಸುಮ್ಮ" (ನಂತರ) ಎಂಬ ಪದಬಳಕೆಯು ಮನುಷ್ಯರ ಇಚ್ಛೆ ಅಲ್ಲಾಹನ ಇಚ್ಛೆಯ ನಂತರ ಬರುತ್ತದೆ ಎಂದು ತಿಳಿಸುತ್ತದೆ. ಏಕೆಂದರೆ, "ಸುಮ್ಮ" (ನಂತರ) ಎಂಬ ಪದವು ಹಿಂಬಾಲಿಸುವುದನ್ನು ಮತ್ತು ನಂತರ ಬರುವುದನ್ನು ಸೂಚಿಸುತ್ತದೆ.