عَنْ أَبِي طَلْحَةَ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«لاَ تَدْخُلُ المَلاَئِكَةُ بَيْتًا فِيهِ كَلْبٌ وَلاَ صُورَةٌ».
[صحيح] - [متفق عليه] - [صحيح البخاري: 3322]
المزيــد ...
ಅಬೂ ತಲ್ಹ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಾಯಿ ಅಥವಾ ಚಿತ್ರವಿರುವ ಮನೆಗೆ ದೇವದೂತರು ಪ್ರವೇಶಿಸುವುದಿಲ್ಲ."
[صحيح] - [متفق عليه] - [صحيح البخاري - 3322]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನಾಯಿ ಅಥವಾ ಆತ್ಮವಿರುವ ಜೀವಿಯ ಚಿತ್ರವಿರುವ ಮನೆಗೆ ದೇವದೂತರುಗಳು ಪ್ರವೇಶಿಸುವುದಿಲ್ಲ. ಏಕೆಂದರೆ, ಆತ್ಮವಿರುವ ಜೀವಿಯ ಚಿತ್ರವು ಕೆಟ್ಟ ಪಾಪವಾಗಿದ್ದು, ಅದು ಅಲ್ಲಾಹನ ಸೃಷ್ಟಿಯನ್ನು ಅನುಕರಿಸುವುದಾಗಿದೆ. ಅಷ್ಟೇ ಅಲ್ಲದೆ, ಅದು ದೇವ ಸಹಭಾಗಿತ್ವಕ್ಕೆ ಸಾಗಿಸುವ ಮಾರ್ಗಗಳಲ್ಲಿ ಒಂದಾಗಿದೆ. ಅವುಗಳಲ್ಲಿ ಕೆಲವು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಚಿತ್ರಗಳಾಗಿವೆ. ನಾಯಿಯಿರುವ ಮನೆಗೆ ಅವರು ಪ್ರವೇಶಿಸದಿರಲು ಕಾರಣವೇನೆಂದರೆ, ಅವು ಅತಿ ಹೆಚ್ಚು ಹೊಲಸನ್ನು ಸೇವಿಸುತ್ತವೆ ಮತ್ತು ಅವುಗಳಲ್ಲಿ ಕೆಲವನ್ನು ಶೈತಾನ್ ಎಂದು ಕರೆಯಲಾಗಿದೆ. ಮತ್ತು ದೇವದೂತರುಗಳು ಶೈತಾನರಿಗೆ ತದ್ವಿರುದ್ಧವಾಗಿದ್ದಾರೆ. ಅದೇ ರೀತಿ ನಾಯಿಗಳಿಗೆ ಕೆಟ್ಟ ವಾಸನೆಯಿದೆ. ದೇವದೂತರುಗಳು ಕೆಟ್ಟ ವಾಸನೆಯನ್ನು ಅಸಹ್ಯಪಡುತ್ತಾರೆ. ಆದ್ದರಿಂದಲೇ ನಾಯಿಗಳನ್ನು ಸಾಕುವುದನ್ನು ನಿಷೇಧಿಸಲಾಗಿದೆ. ಅವುಗಳನ್ನು ಸಾಕುವವರಿಗೆ ದೊರೆಯುವ ಶಿಕ್ಷೆಯೇನೆಂದರೆ ಅವರ ಮನೆಗಳಿಗೆ ಕರುಣೆಯ ದೇವದೂತರುಗಳು ಪ್ರವೇಶಿಸುವುದಿಲ್ಲ, ಅಲ್ಲಿ ನಮಾಝ್ ಮಾಡುವುದಿಲ್ಲ, ಅವರಿಗಾಗಿ ಕ್ಷಮೆಯಾಚನೆ ಮಾಡುವುದಿಲ್ಲ, ಅವರ ಮತ್ತು ಅವರ ಮನೆಯ ಸಮೃದ್ಧಿಗಾಗಿ ಪ್ರಾರ್ಥಿಸುವುದಿಲ್ಲ ಮತ್ತು ಅವರ ಮನೆಯಿಂದ ಶೈತಾನನ ಉಪದ್ರವಗಳನ್ನು ತೊಲಗಿಸುವುದಿಲ್ಲ.