عَنْ أَنَسِ بْنِ مَالِكٍ رَضيَ اللهُ عنه قَالَ:
بَيْنَمَا نَحْنُ فِي الْمَسْجِدِ مَعَ رَسُولِ اللهِ صَلَّى اللهُ عَلَيْهِ وَسَلَّمَ إِذْ جَاءَ أَعْرَابِيٌّ، فَقَامَ يَبُولُ فِي الْمَسْجِدِ، فَقَالَ أَصْحَابُ رَسُولِ اللهِ صَلَّى اللهُ عَلَيْهِ وَسَلَّمَ: مَهْ مَهْ، قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ: «لَا تُزْرِمُوهُ، دَعُوهُ» فَتَرَكُوهُ حَتَّى بَالَ، ثُمَّ إِنَّ رَسُولَ اللهِ صَلَّى اللهُ عَلَيْهِ وَسَلَّمَ دَعَاهُ فَقَالَ لَهُ: «إِنَّ هَذِهِ الْمَسَاجِدَ لَا تَصْلُحُ لِشَيْءٍ مِنْ هَذَا الْبَوْلِ، وَلَا الْقَذَرِ إِنَّمَا هِيَ لِذِكْرِ اللهِ عَزَّ وَجَلَّ، وَالصَّلَاةِ وَقِرَاءَةِ الْقُرْآنِ» أَوْ كَمَا قَالَ رَسُولُ اللهِ صَلَّى اللهُ عَلَيْهِ وَسَلَّمَ قَالَ: فَأَمَرَ رَجُلًا مِنَ الْقَوْمِ فَجَاءَ بِدَلْوٍ مِنْ مَاءٍ فَشَنَّهُ عَلَيْهِ.
[صحيح] - [متفق عليه] - [صحيح مسلم: 285]
المزيــد ...
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ನಾವು ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿದ್ದಾಗ, ಒಬ್ಬ ಅಲೆಮಾರಿ ಅರಬ್ಬ ಬಂದನು. ಅವನು ಎದ್ದು ನಿಂತು ಮಸೀದಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಪ್ರಾರಂಭಿಸಿದನು. ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರು ಹೇಳಿದರು: "ನಿಲ್ಲಿಸು! ನಿಲ್ಲಿಸು!" ವರದಿಗಾರರು ಹೇಳುತ್ತಾರೆ: ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನಿಗೆ ಅಡ್ಡಿಪಡಿಸಬೇಡಿ, ಅವನನ್ನು ಬಿಡಿ". ಆಗ ಅವರು ಅವನನ್ನು ಮೂತ್ರ ವಿಸರ್ಜಿಸಿ ಮುಗಿಸುವವರೆಗೆ ಬಿಟ್ಟರು. ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು ಕರೆದು ಹೇಳಿದರು: "ಖಂಡಿತವಾಗಿಯೂ ಈ ಮಸೀದಿಗಳು ಇಂತಹ ಯಾವುದೇ ಮೂತ್ರಕ್ಕಾಗಲಿ, ಅಥವಾ ಹೊಲಸಿಗಾಗಲಿ ಇರುವಂಥದ್ದಲ್ಲ. ಅವು ಕೇವಲ ಅಲ್ಲಾಹನ ಸ್ಮರಣೆ (ಧಿಕ್ರ್), ನಮಾಝ್ ಮತ್ತು ಕುರ್‌ಆನ್ ಪಾರಾಯಣಕ್ಕಾಗಿ ಇರುವುದಾಗಿವೆ." ಅಥವಾ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದಂತೆ. ವರದಿಗಾರರು ಹೇಳುತ್ತಾರೆ: ನಂತರ ಅವರು (ಪ್ರವಾದಿ) ಜನರಲ್ಲೊಬ್ಬರಿಗೆ ಆದೇಶಿಸಿದರು. ಅವನು ಒಂದು ಬಕೆಟ್ ನೀರಿನೊಂದಿಗೆ ಬಂದು ಅದರ ಮೇಲೆ ಸುರಿದನು.
[صحيح] - [متفق عليه] - [صحيح مسلم - 285]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮಸೀದಿಯಲ್ಲಿ ತಮ್ಮ ಸಹಾಬಿಗಳೊಂದಿಗೆ ಇದ್ದಾಗ ಮರುಭೂಮಿಯಿಂದ ಒಬ್ಬ ಅಲೆಮಾರಿ ಅರಬ್ಬ ಬಂದು, ಮಸೀದಿಯ ಒಂದು ಮೂಲೆಯಲ್ಲಿ ಕುಳಿತು ಮೂತ್ರ ವಿಸರ್ಜನೆ ಮಾಡಲು ಪ್ರಾರಂಭಿಸಿದನು. ಆಗ ಸಹಾಬಿಗಳು ಅವನನ್ನು ಗದರಿಸಿ ಹೇಳಿದರು: ನಿಲ್ಲಿಸು ಮೂತ್ರ ಮಾಡುವುದನ್ನು ನಿಲ್ಲಿಸು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನನ್ನು ಬಿಡಿ, ಅವನ ಮೂತ್ರವನ್ನು ಮಧ್ಯದಲ್ಲಿ ತಡೆಯಬೇಡಿ. ಅವರು ಅವನು ಮುಗಿಸುವವರೆಗೆ ಅವನನ್ನು ಬಿಟ್ಟರು.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು ಕರೆದು ಹೇಳಿದರು: ಖಂಡಿತವಾಗಿಯೂ ಮಸೀದಿಗಳು ಇಂತಹ ಯಾವುದೇ ಮೂತ್ರಕ್ಕಾಗಲಿ, ಅಥವಾ ಯಾವುದೇ ರೀತಿಯ ಹೊಲಸಿಗಾಗಲಿ ಇರುವಂಥದ್ದಲ್ಲ. ಅವು ಕೇವಲ ಅಲ್ಲಾಹನ ಸ್ಮರಣೆ, ನಮಾಝ್, ಮತ್ತು ಕುರ್‌ಆನ್ ಪಾರಾಯಣ ಮುಂತಾದವುಗಳಿಗೆ ಇರುವುದಾಗಿವೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳಲ್ಲಿ ಒಬ್ಬ ವ್ಯಕ್ತಿಗೆ ಆದೇಶಿಸಿದರು. ಅವನು ನೀರಿನಿಂದ ತುಂಬಿದ ಒಂದು ಬಕೆಟ್‌ನೊಂದಿಗೆ ಬಂದು ಅದನ್ನು ಆ ಮೂತ್ರದ ಮೇಲೆ ಸುಸೂತ್ರವಾಗಿ ಸುರಿದನು.