عن أنس رضي الله عنه قال:
كُنَّا عِنْدَ عُمَرَ فَقَالَ: «نُهِينَا عَنِ التَّكَلُّفِ».
[صحيح] - [رواه البخاري] - [صحيح البخاري: 7293]
المزيــد ...
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ನಾವು ಉಮರ್ ರವರ ಜೊತೆಗಿದ್ದಾಗ ಅವರು ಹೇಳಿದರು: "(ಅನಗತ್ಯ) ಹೊರೆ ಹೊರುವುದನ್ನು ನಮಗೆ ವಿರೋಧಿಸಲಾಗಿದೆ."
[صحيح] - [رواه البخاري] - [صحيح البخاري - 7293]
ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ತಿಳಿಸುವುದೇನೆಂದರೆ, ಅನಗತ್ಯವಾಗಿ ನಮ್ಮನ್ನು ನಾವೇ ತೊಂದರೆಗೊಳಪಡಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ವಿರೋಧಿಸಿದ್ದಾರೆ. ಅದು ಮಾತುಗಳಲ್ಲಾದರೂ ಕೆಲಸಗಳಲ್ಲಾದರೂ ಸಹ.