عَنْ أَنَسِ بْنِ مَالِكٍ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«يَقُولُ اللَّهُ تَعَالَى لِأَهْوَنِ أَهْلِ النَّارِ عَذَابًا يَوْمَ القِيَامَةِ: لَوْ أَنَّ لَكَ مَا فِي الأَرْضِ مِنْ شَيْءٍ أَكُنْتَ تَفْتَدِي بِهِ؟ فَيَقُولُ: نَعَمْ، فَيَقُولُ: أَرَدْتُ مِنْكَ أَهْوَنَ مِنْ هَذَا، وَأَنْتَ فِي صُلْبِ آدَمَ: أَلّاَ تُشْرِكَ بِي شَيْئًا، فَأَبَيْتَ إِلَّا أَنْ تُشْرِكَ بِي».
[صحيح] - [متفق عليه] - [صحيح البخاري: 6557]
المزيــد ...
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನರಕದಲ್ಲಿ ಅತ್ಯಂತ ಕಡಿಮೆ ಶಿಕ್ಷೆ ಪಡೆಯುವವನೊಡನೆ ಪುನರುತ್ಥಾನ ದಿನದಂದು ಅಲ್ಲಾಹು ಕೇಳುವನು: "ಒಂದು ವೇಳೆ ಭೂಮಿಯಲ್ಲಿರುವ ಎಲ್ಲಾ ವಸ್ತುಗಳು ನಿನ್ನ ವಶದಲ್ಲಿದ್ದರೆ ನೀನು ಅವುಗಳನ್ನು (ಶಿಕ್ಷೆಯಿಂದ ಪಾರಾಗಲು) ಪರಿಹಾರವಾಗಿ ನೀಡುತ್ತಿದ್ದೆಯಾ?" ಅವನು ಹೇಳುವನು: "ಹೌದು".، ಆಗ ಅಲ್ಲಾಹು ಹೇಳುವನು: "ನೀನು ಆದಮರ ಬೆನ್ನೆಲುಬಿನಲ್ಲಿದ್ದಾಗ ನಾನು ನಿನ್ನಿಂದ ಇದಕ್ಕಿಂತಲೂ ಸುಲಭವಾದುದನ್ನು ಬಯಸಿದ್ದೆ - ಅಂದರೆ ನೀನು ನನ್ನೊಡನೆ ಯಾರನ್ನೂ ಸಹಭಾಗಿಯಾಗಿ ಮಾಡಬಾರದೆಂದು. ಆದರೆ ನೀನು ನನ್ನೊಂದಿಗೆ ಸಹಭಾಗಿತ್ವ ಮಾಡಲು ಹಟ ಹಿಡಿದು ನಿಂತೆ."
[صحيح] - [متفق عليه] - [صحيح البخاري - 6557]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನರಕದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಶಿಕ್ಷೆ ಪಡೆಯುವವನು ನರಕಕ್ಕೆ ಪ್ರವೇಶಿಸಿದ ನಂತರ ಅಲ್ಲಾಹು ಅವನೊಡನೆ ಕೇಳುವನು: "ಇಹಲೋಕ ಮತ್ತು ಅದರಲ್ಲಿರುವುದೆಲ್ಲವೂ ನಿನ್ನ ವಶದಲ್ಲಿದ್ದರೆ, ಈ ಶಿಕ್ಷೆಯಿಂದ ಪಾರಾಗಲು ನೀನು ಅವುಗಳನ್ನು ಪರಿಹಾರವಾಗಿ ನೀಡುತ್ತಿದ್ದೆಯಾ?" ಅವನು ಹೇಳುವನು: "ಹೌದು." ಆಗ ಅಲ್ಲಾಹು ಹೇಳುವನು: "ನೀನು ಆದಮರ ಬೆನ್ನೆಲುಬಿನಲ್ಲಿದ್ದಾಗ ನಾನು ನಿನ್ನಿಂದ ಇದಕ್ಕಿಂತಲೂ ಸರಳವಾದುದನ್ನು ಬಯಸಿದ್ದೆ ಮತ್ತು ಆದೇಶಿಸಿದ್ದೆ - ಅಂದರೆ ನೀನು ನನ್ನೊಡನೆ ಯಾರನ್ನೂ ಸಹಭಾಗಿಯಾಗಿ ಮಾಡಬಾರದೆಂದು. ಆದರೆ ಇಹಲೋಕಕ್ಕೆ ಬಂದ ನಂತರ ನೀನು ನನ್ನೊಂದಿಗೆ ಸಹಭಾಗಿತ್ವ ಮಾಡಲು ಹಟ ಹಿಡಿದು ನಿಂತೆ."