عَنْ أَبِي سَعِيدٍ الْخُدْرِيِّ وَأَبِي هُرَيْرَةَ رضي الله عنهما عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«يُنَادِي مُنَادٍ: إِنَّ لَكُمْ أَنْ تَصِحُّوا فَلَا تَسْقَمُوا أَبَدًا، وَإِنَّ لَكُمْ أَنْ تَحْيَوْا فَلَا تَمُوتُوا أَبَدًا، وَإِنَّ لَكُمْ أَنْ تَشِبُّوا فَلَا تَهْرَمُوا أَبَدًا، وَإِنَّ لَكُمْ أَنْ تَنْعَمُوا فَلَا تَبْأَسُوا أَبَدًا» فَذَلِكَ قَوْلُهُ عَزَّ وَجَلَّ: {وَنُودُوا أَنْ تِلْكُمُ الْجَنَّةُ أُورِثْتُمُوهَا بِمَا كُنْتُمْ تَعْمَلُونَ} [الأعراف: 43].
[صحيح] - [رواه مسلم] - [صحيح مسلم: 2837]
المزيــد ...
ಅಬೂ ಸಈದ್ ಖುದ್ರಿ ಮತ್ತು ಅಬೂ ಹುರೈರ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಬ್ಬ ಘೋಷಕನು ಘೋಷಿಸುವನು: ನೀವು ಸದಾ ಆರೋಗ್ಯವಂತರಾಗಿರುವಿರಿ. ನೀವೆಂದೂ ರೋಗಿಗಳಾಗುವುದಿಲ್ಲ. ನೀವು ಸದಾ ಜೀವಂತವಾಗಿರುವಿರಿ. ನೀವೆಂದೂ ಮರಣಹೊಂದುವುದಿಲ್ಲ. ನೀವು ಸದಾ ಯುವಕರಾಗಿರುವಿರಿ. ನೀವೆಂದೂ ವೃದ್ಧರಾಗುವುದಿಲ್ಲ. ನೀವು ಸದಾ ಸುಖಭೋಗಿಗಳಾಗುವಿರಿ. ನೀವೆಂದೂ ನೋವು ಅನುಭವಿಸುವುದಿಲ್ಲ. ಇದೇ ಅಲ್ಲಾಹನ ಈ ವಚನದ ಅರ್ಥ: "ಆಗ ಅವರೊಡನೆ ಹೇಳಲಾಗುವುದು: ನೀವು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ." [ಅಅ್‌ರಾಫ್:43]
[صحيح] - [رواه مسلم] - [صحيح مسلم - 2837]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸ್ವರ್ಗವಾಸಿಗಳು ಸ್ವರ್ಗದಲ್ಲಿ ಹಾಯಾಗಿರುವಾಗ ಒಬ್ಬ ಘೋಷಕನು ಅವರನ್ನು ಕರೆದು ಹೇಳುವನು: "ನೀವು ಸ್ವರ್ಗದಲ್ಲಿ ಸದಾ ಆರೋಗ್ಯವಂತರಾಗಿರುವಿರಿ ಮತ್ತು ನಿಮಗೆ ಒಂದು ಚಿಕ್ಕ ಕಾಯಿಲೆ ಕೂಡ ಉಂಟಾಗುವುದಿಲ್ಲ. ನೀವು ಇಲ್ಲಿ ಸದಾ ಜೀವಂತವಾಗಿರುವಿರಿ. ನೀವೆಂದೂ ಇಲ್ಲಿ ಮರಣಹೊಂದುವುದಿಲ್ಲ. ಅದು ಚಿಕ್ಕ ಮರಣವೆಂದು ಕರೆಯಲಾಗುವ ನಿದ್ರೆಯಾಗಿದ್ದರೂ ಸಹ. ನೀವು ಇಲ್ಲಿ ಸದಾ ಯುವಕರಾಗಿರುವಿರಿ. ನೀವೆಂದೂ ಇಲ್ಲಿ ಮುದುಕರಾಗುವುದಿಲ್ಲ. ನೀವು ಇಲ್ಲಿ ಸದಾ ಸುಖಭೋಗಿಗಳಾಗುವಿರಿ. ನೀವೆಂದೂ ದುಃಖಿಸುವುದಿಲ್ಲ ಮತ್ತು ನೋವು ಅನುಭವಿಸುವುದಿಲ್ಲ. ಇದೇ ಅಲ್ಲಾಹನ ಈ ವಚನದ ಅರ್ಥ: "ಆಗ ಅವರೊಡನೆ ಹೇಳಲಾಗುವುದು: ನೀವು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ." [ಅಅ್‌ರಾಫ್:43]