عَنْ أَبِي سَعِيدٍ الخُدْرِيِّ رضي الله عنه قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«إِنَّ اللَّهَ تَبَارَكَ وَتَعَالَى يَقُولُ لِأَهْلِ الجَنَّةِ: يَا أَهْلَ الجَنَّةِ؟ فَيَقُولُونَ: لَبَّيْكَ رَبَّنَا وَسَعْدَيْكَ، فَيَقُولُ: هَلْ رَضِيتُمْ؟ فَيَقُولُونَ: وَمَا لَنَا لاَ نَرْضَى وَقَدْ أَعْطَيْتَنَا مَا لَمْ تُعْطِ أَحَدًا مِنْ خَلْقِكَ؟ فَيَقُولُ: أَنَا أُعْطِيكُمْ أَفْضَلَ مِنْ ذَلِكَ، قَالُوا: يَا رَبِّ، وَأَيُّ شَيْءٍ أَفْضَلُ مِنْ ذَلِكَ؟ فَيَقُولُ: أُحِلُّ عَلَيْكُمْ رِضْوَانِي، فَلاَ أَسْخَطُ عَلَيْكُمْ بَعْدَهُ أَبَدًا».
[صحيح] - [متفق عليه] - [صحيح البخاري: 6549]
المزيــد ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸರ್ವಶಕ್ತನಾದ ಅಲ್ಲಾಹು ಸ್ವರ್ಗವಾಸಿಗಳೊಡನೆ ಕೇಳುವನು: "ಓ ಸ್ವರ್ಗವಾಸಿಗಳೇ!" ಅವರು ಉತ್ತರಿಸುವರು: "ನಾವು ನಿನಗೆ ಓಗೊಡುತ್ತಿದ್ದೇವೆ ಮತ್ತು ನಿನ್ನ ಸೇವೆ ಮಾಡಲು ಸನ್ನದ್ಧರಾಗಿದ್ದೇವೆ." ಅವನು ಕೇಳುವನು: "ನಿಮಗೆ ತೃಪ್ತಿಯಾಗಿದೆಯೇ?" ಅವರು ಉತ್ತರಿಸುವರು: "ನಮಗೆ ತೃಪ್ತಿಯಾಗದಿರಲು ಹೇಗೆ ಸಾಧ್ಯ? ನೀನಂತೂ ನಿನ್ನ ಸೃಷ್ಟಿಗಳಲ್ಲಿ ಯಾರಿಗೂ ನೀಡದೇ ಇರುವುದನ್ನು ನಮಗೆ ನೀಡಿರುವೆ." ಅವನು ಹೇಳುವನು: "ನಾನು ಅದಕ್ಕಿಂತಲೂ ಶ್ರೇಷ್ಠವಾದುದನ್ನು ನಿಮಗೆ ನೀಡುವೆನು." ಅವರು ಕೇಳುವರು: "ಓ ನಮ್ಮ ಪರಿಪಾಲಕನೇ! ಇದಕ್ಕಿಂತಲೂ ಶ್ರೇಷ್ಠವಾದುದು ಇನ್ನೇನಿದೆ?" ಅವನು ಉತ್ತರಿಸುವನು: "ನಾನು ನನ್ನ ಸಂತೃಪ್ತಿಯನ್ನು ನಿಮ್ಮ ಮೇಲೆ ಸುರಿಸುವೆನು. ಇನ್ನು ನಾನು ನಿಮ್ಮೊಂದಿಗೆ ಎಂದಿಗೂ ಕೋಪಿಸಿಕೊಳ್ಳಲಾರೆನು."
[صحيح] - [متفق عليه] - [صحيح البخاري - 6549]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸ್ವರ್ಗವಾಸಿಗಳು ಸ್ವರ್ಗಕ್ಕೆ ಪ್ರವೇಶಿಸಿದ ನಂತರ ಅಲ್ಲಾಹು ಅವರೊಡನೆ ಕೇಳುವನು: "ಓ ಸ್ವರ್ಗವಾಸಿಗಳೇ!" ಆಗ ಅವರು, "ನಾವು ನಿನಗೆ ಓಗೊಡುತ್ತಿದ್ದೇವೆ ಮತ್ತು ನಿನ್ನ ಸೇವೆ ಮಾಡಲು ಸನ್ನದ್ಧರಾಗಿದ್ದೇವೆ" ಎಂದು ಉತ್ತರ ನೀಡುವರು. ಅವನು ಕೇಳುವನು: "ನಿಮಗೆ ತೃಪ್ತಿಯಾಗಿದೆಯೇ?" ಅವರು ಉತ್ತರಿಸುವರು: "ಹೌದು ನಮಗೆ ತೃಪ್ತಿಯಾಗಿದೆ. ನಮಗೆ ತೃಪ್ತಿಯಾಗದಿರಲು ಹೇಗೆ ಸಾಧ್ಯ? ನೀನಂತೂ ನಿನ್ನ ಸೃಷ್ಟಿಗಳಲ್ಲಿ ಯಾರಿಗೂ ನೀಡದೇ ಇರುವುದನ್ನು ನಮಗೆ ನೀಡಿರುವೆ." ಅವನು ಹೇಳುವನು: "ನಾನು ಅದಕ್ಕಿಂತಲೂ ಶ್ರೇಷ್ಠವಾದುದನ್ನು ನಿಮಗೆ ನೀಡಲೇ?" ಅವರು ಕೇಳುವರು: "ಓ ನಮ್ಮ ಪರಿಪಾಲಕನೇ! ಇದಕ್ಕಿಂತಲೂ ಶ್ರೇಷ್ಠವಾದುದು ಇನ್ನೇನಿದೆ?" ಅವನು ಉತ್ತರಿಸುವನು: "ನಾನು ನನ್ನ ಶಾಶ್ವತ ಸಂತೃಪ್ತಿಯನ್ನು ನಿಮ್ಮ ಮೇಲೆ ಸುರಿಸುವೆನು. ಇನ್ನು ಮುಂದೆ ನಾನು ನಿಮ್ಮೊಂದಿಗೆ ಎಂದಿಗೂ ಕೋಪಿಸಿಕೊಳ್ಳಲಾರೆನು."