عَنْ صُهَيْبٍ رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«إِذَا دَخَلَ أَهْلُ الْجَنَّةِ الْجَنَّةَ، قَالَ: يَقُولُ اللهُ تَبَارَكَ وَتَعَالَى: تُرِيدُونَ شَيْئًا أَزِيدُكُمْ؟ فَيَقُولُونَ: أَلَمْ تُبَيِّضْ وُجُوهَنَا؟ أَلَمْ تُدْخِلْنَا الْجَنَّةَ، وَتُنَجِّنَا مِنَ النَّارِ؟ قَالَ: فَيَكْشِفُ الْحِجَابَ، فَمَا أُعْطُوا شَيْئًا أَحَبَّ إِلَيْهِمْ مِنَ النَّظَرِ إِلَى رَبِّهِمْ عَزَّ وَجَلَّ».
[صحيح] - [رواه مسلم] - [صحيح مسلم: 181]
المزيــد ...
ಸುಹೈಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸ್ವರ್ಗವಾಸಿಗಳು ಸ್ವರ್ಗವನ್ನು ಪ್ರವೇಶಿಸಿದಾಗ ಸರ್ವಶಕ್ತನಾದ ಅಲ್ಲಾಹು ಕೇಳುವನು: "ನಾನು ನಿಮಗೆ ಇನ್ನೂ ಏನಾದರೂ ಹೆಚ್ಚಿಗೆ ಕೊಡಬೇಕೆಂದು ನೀವು ಬಯಸುತ್ತೀರಾ?" ಅವರು ಹೇಳುವರು: "ನೀನು ನಮ್ಮ ಮುಖಗಳನ್ನು ಬೆಳಗಿಸಲಿಲ್ಲವೇ? ನೀನು ನಮ್ಮನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಲಿಲ್ಲವೇ? ನೀನು ನಮ್ಮನ್ನು ನರಕದಿಂದ ಪಾರು ಮಾಡಲಿಲ್ಲವೇ?" ಆಗ ಅಲ್ಲಾಹು ಅವನ ಪರದೆಯನ್ನು ಸರಿಸುವನು. ಆಗ ಅವರಿಗೆ ನೀಡಲಾದ ಎಲ್ಲಾ ವಸ್ತುಗಳಲ್ಲಿ ಅವರ ಪರಿಪಾಲಕನ (ಅಲ್ಲಾಹನ) ಕಡೆಗೆ ನೋಡುವುದಕ್ಕಿಂತಲೂ ಹೆಚ್ಚು ಇಷ್ಟವಾದುದು ಅವರಿಗೆ ಬೇರೆ ಇರುವುದಿಲ್ಲ."
[صحيح] - [رواه مسلم] - [صحيح مسلم - 181]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಸ್ವರ್ಗವಾಸಿಗಳು ಸ್ವರ್ಗವನ್ನು ಪ್ರವೇಶಿಸಿದಾಗ ಸರ್ವಶಕ್ತನಾದ ಅಲ್ಲಾಹು ಅವರೊಡನೆ ಕೇಳುವನು:
"ನಾನು ನಿಮಗೆ ಇನ್ನೇನಾದರೂ ಹೆಚ್ಚಿಗೆ ನೀಡಬೇಕೆಂದು ನೀವು ಬಯಸುತ್ತೀರಾ?"
ಆಗ ಸ್ವರ್ಗವಾಸಿಗಳೆಲ್ಲರೂ ಹೇಳುವರು: "ನೀನು ನಮ್ಮ ಮುಖಗಳನ್ನು ಬೆಳಗಿಸಲಿಲ್ಲವೇ? ನೀನು ನಮ್ಮನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಲಿಲ್ಲವೇ? ನೀನು ನಮ್ಮನ್ನು ನರಕದಿಂದ ಪಾರು ಮಾಡಲಿಲ್ಲವೇ?"
ಆಗ ಅಲ್ಲಾಹು ಅವನ ಪರದೆಯನ್ನು ಸರಿಸಿ ಮೇಲೆತ್ತುವನು. ಬೆಳಕು ಅವನ ಪರದೆಯಾಗಿದೆ. ಆಗ ಅವರಿಗೆ ನೀಡಲಾದ ಎಲ್ಲಾ ವಸ್ತುಗಳಲ್ಲಿ ಅವರ ಪರಿಪಾಲಕನ (ಅಲ್ಲಾಹನ) ಕಡೆಗೆ ನೋಡುವುದಕ್ಕಿಂತಲೂ ಹೆಚ್ಚು ಇಷ್ಟವಾದುದು ಅವರಿಗೆ ಬೇರೆ ಇರುವುದಿಲ್ಲ.