عن ابن مسعود رضي الله عنه قال: قال النبي صلى الله عليه وسلم:
«الْجَنَّةُ أَقْرَبُ إِلَى أَحَدِكُمْ مِنْ شِرَاكِ نَعْلِهِ، وَالنَّارُ مِثْلُ ذَلِكَ».
[صحيح] - [رواه البخاري] - [صحيح البخاري: 6488]
المزيــد ...
ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಹೇಳಿದರು:
“ನಿಮ್ಮಲ್ಲೊಬ್ಬನಿಗೆ ಸ್ವರ್ಗವು ಅವನ ಚಪ್ಪಲಿಯ ತೊಗಲಪಟ್ಟಿಗಿಂತಲೂ ಹತ್ತಿರದಲ್ಲಿದೆ; ಹಾಗೆಯೇ ನರಕವೂ ಕೂಡ.”
[صحيح] - [رواه البخاري] - [صحيح البخاري - 6488]
ಮನುಷ್ಯನ ಚಪ್ಪಲಿಯ ಮೇಲಿರುವ ತೊಗಲಪಟ್ಟಿಗಿಂತಲೂ ಸ್ವರ್ಗ ಮತ್ತು ನರಕ ಅವನಿಗೆ ಹತ್ತಿರದಲ್ಲಿದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸಿದ್ದಾರೆ. ಏಕೆಂದರೆ, ಅವನು ಅಲ್ಲಾಹನನ್ನು ಸಂಪ್ರೀತಗೊಳಿಸುವ ಒಂದು ಸತ್ಕರ್ಮವನ್ನು ಮಾಡಿ ಸ್ವರ್ಗವನ್ನು ಪ್ರವೇಶಿಸಬಹುದು, ಅಥವಾ ಒಂದು ಪಾಪವನ್ನು ಮಾಡಿ ಅದು ಅವನ ನರಕ ಪ್ರವೇಶಕ್ಕೆ ಕಾರಣವಾಗಬಹುದು.