عَنْ أَبِي هُرَيْرَةَ رَضيَ اللهُ عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«الدُّنْيَا سِجْنُ الْمُؤْمِنِ وَجَنَّةُ الْكَافِرِ».
[صحيح] - [رواه مسلم] - [صحيح مسلم: 2956]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಈ ಪ್ರಪಂಚವು ಸತ್ಯವಿಶ್ವಾಸಿಯ ಸೆರೆಮನೆಯಾಗಿದೆ ಮತ್ತು ಸತ್ಯನಿಷೇಧಿಯ ಸ್ವರ್ಗವಾಗಿದೆ".
[صحيح] - [رواه مسلم] - [صحيح مسلم - 2956]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಈ ಲೌಕಿಕ ಜೀವನವು ಸತ್ಯವಿಶ್ವಾಸಿಗೆ ಒಂದು ಸೆರೆಮನೆಯಂತಿದೆ. ಏಕೆಂದರೆ ಅವನು ಶರೀಅತ್‌ನ (ಧಾರ್ಮಿಕ) ಹೊಣೆಗಾರಿಕೆಗಳಿಗೆ, ಅಂದರೆ ಆದೇಶಗಳನ್ನು ಪಾಲಿಸುವುದು ಮತ್ತು ನಿಷಿದ್ಧಗಳಿಂದ ದೂರವಿರುವುದಕ್ಕೆ, ಬದ್ಧನಾಗಿರುತ್ತಾನೆ. ಅವನು ಮರಣ ಹೊಂದಿದಾಗ, ಅವನು ಇದರಿಂದ ವಿಶ್ರಾಂತಿ ಪಡೆಯುತ್ತಾನೆ ಮತ್ತು ಸರ್ವೋನ್ನತನಾದ ಅಲ್ಲಾಹು ಅವನಿಗಾಗಿ ಸಿದ್ಧಪಡಿಸಿರುವ ಶಾಶ್ವತವಾದ ಅನುಗ್ರಹಗಳ ಕಡೆಗೆ ಸಾಗುತ್ತಾನೆ. ಮತ್ತು ಇದು (ಈ ಪ್ರಪಂಚ) ಸತ್ಯನಿಷೇಧಿಗೆ ಸ್ವರ್ಗದಂತಿದೆ. ಏಕೆಂದರೆ ಅವನು ಅದರಲ್ಲಿ ತನ್ನ ಮನಸ್ಸು ಬಯಸಿದ್ದನ್ನೆಲ್ಲಾ ಮತ್ತು ತನ್ನ ಇಚ್ಛೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡುತ್ತಾನೆ. ಅವನು ಮರಣ ಹೊಂದಿದಾಗ, ಅವನು (ಪುನರುತ್ಥಾನ) ದಿನದಂದು ಸರ್ವೋನ್ನತನಾದ ಅಲ್ಲಾಹು ಅವನಿಗಾಗಿ ಸಿದ್ಧಪಡಿಸಿರುವ ಶಾಶ್ವತವಾದ ಶಿಕ್ಷೆಯ ಕಡೆಗೆ ಸಾಗುತ್ತಾನೆ.