عَنْ أَبِي قَتَادَةَ رضي الله عنه قَالَ: قَالَ النَّبِيُّ صَلَّى اللهُ عَلَيْهِ وَسَلَّمَ:
«الرُّؤْيَا الصَّالِحَةُ مِنَ اللَّهِ، وَالحُلُمُ مِنَ الشَّيْطَانِ، فَإِذَا حَلَمَ أَحَدُكُمْ حُلُمًا يَخَافُهُ فَلْيَبْصُقْ عَنْ يَسَارِهِ، وَلْيَتَعَوَّذْ بِاللَّهِ مِنْ شَرِّهَا، فَإِنَّهَا لاَ تَضُرُّهُ».
[صحيح] - [متفق عليه] - [صحيح البخاري: 3292]
المزيــد ...
ಅಬೂ ಕತಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಳ್ಳೆಯ ಕನಸುಗಳು ಅಲ್ಲಾಹನಿಂದ ಬರುತ್ತವೆ, ಮತ್ತು ಕೆಟ್ಟ ಕನಸುಗಳು ಶೈತಾನನಿಂದ ಬರುತ್ತವೆ. ನಿಮ್ಮಲ್ಲಿ ಯಾರಾದರೂ ತಾವು ಇಷ್ಟಪಡದ ಕೆಟ್ಟ ಕನಸನ್ನು ಕಂಡರೆ, ಅವರು ತಮ್ಮ ಎಡಕ್ಕೆ ಉಗುಳಲಿ ಮತ್ತು ಅದರ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡಲಿ. ಏಕೆಂದರೆ ಅದು ಅವರಿಗೆ ಹಾನಿ ಮಾಡುವುದಿಲ್ಲ."
[صحيح] - [متفق عليه] - [صحيح البخاري - 3292]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಒಳ್ಳೆಯ ಮತ್ತು ಸಂತೋಷದಾಯಕ ಕನಸು ಅಲ್ಲಾಹನಿಂದಾಗಿದೆ. ಕೆಟ್ಟ ಕನಸುಗಳು, ಅಂದರೆ ಒಬ್ಬರು ಇಷ್ಟಪಡದ ಮತ್ತು ಅವರಿಗೆ ದುಃಖವನ್ನುಂಟುಮಾಡುವ ಕನಸುಗಳು ಶೈತಾನನಿಂದ ಬರುತ್ತವೆ.
ಆದ್ದರಿಂದ, ಯಾರಾದರೂ ತಾವು ಇಷ್ಟಪಡದ ಕನಸನ್ನು ಕಂಡರೆ, ಅವರು ತಮ್ಮ ಎಡಭಾಗಕ್ಕೆ ಉಗುಳಲಿ ಮತ್ತು ಅದರ ಕೆಡುಕಿನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡಲಿ. ಹೀಗೆ ಮಾಡಿದರೆ ಅದು ಅವನಿಗೆ ಹಾನಿ ಮಾಡುವುದಿಲ್ಲ. ಅಲ್ಲಾಹು ಈ ವಿಷಯವನ್ನು ಕನಸಿನಿಂದ ಉಂಟಾಗುವ ದುಷ್ಪರಿಣಾಮಕ್ಕೆ ಸುರಕ್ಷತೆಯಾಗಿ ಮಾಡಿದ್ದಾನೆ.