عَنْ سُلَيْمَانَ بْنِ صُرَدٍ رضي الله عنه قَالَ:
كُنْتُ جَالِسًا مَعَ النَّبِيِّ صَلَّى اللهُ عَلَيْهِ وَسَلَّمَ وَرَجُلاَنِ يَسْتَبَّانِ، فَأَحَدُهُمَا احْمَرَّ وَجْهُهُ، وَانْتَفَخَتْ أَوْدَاجُهُ، فَقَالَ النَّبِيُّ صَلَّى اللهُ عَلَيْهِ وَسَلَّمَ: «إِنِّي لَأَعْلَمُ كَلِمَةً لَوْ قَالَهَا ذَهَبَ عَنْهُ مَا يَجِدُ، لَوْ قَالَ: أَعُوذُ بِاللَّهِ مِنَ الشَّيْطَانِ، ذَهَبَ عَنْهُ مَا يَجِدُ» فَقَالُوا لَهُ: إِنَّ النَّبِيَّ صَلَّى اللهُ عَلَيْهِ وَسَلَّمَ قَالَ: «تَعَوَّذْ بِاللَّهِ مِنَ الشَّيْطَانِ»، فَقَالَ: وَهَلْ بِي جُنُونٌ؟
[صحيح] - [متفق عليه] - [صحيح البخاري: 3282]
المزيــد ...
ಸುಲೈಮಾನ್ ಬಿನ್ ಸುರದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ನಾನು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುಳಿತಿದ್ದೆ. ಆಗ ಅಲ್ಲಿ ಇಬ್ಬರು ಪರಸ್ಪರ ನಿಂದಿಸುತ್ತಿದ್ದರು. ಅವರಲ್ಲೊಬ್ಬನ ಮುಖ ಕೆಂಪಾಯಿತು ಮತ್ತು ಅವನ ಕುತ್ತಿಗೆಯ ರಕ್ತನಾಳಗಳು ಊದಿಕೊಂಡವು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ಒಂದು ಮಾತನ್ನು ಬಲ್ಲೆ. ಅವನೇನಾದರೂ ಅದನ್ನು ಹೇಳಿದರೆ, ಅವನಲ್ಲುಂಟಾಗುತ್ತಿರುವ ಕೋಪವು ದೂರವಾಗುತ್ತದೆ. ಅವನು ‘ಅಊದು ಬಿಲ್ಲಾಹಿ ಮಿನಶ್ಶೈತಾನ್’ ಎಂದು ಹೇಳಿದರೆ ಅವನಲ್ಲುಂಟಾಗುತ್ತಿರುವ ಕೋಪವು ದೂರವಾಗುತ್ತದೆ." ಆಗ ಅವರು ಆ ವ್ಯಕ್ತಿಯೊಡನೆ ಹೇಳಿದರು: "ಶೈತಾನನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡು" ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದಾರೆ. ಆಗ ಅವನು ಕೇಳಿದನು: "ನನಗೇನು ಹುಚ್ಚು ಹಿಡಿದಿದೆಯೇ?"
[صحيح] - [متفق عليه] - [صحيح البخاري - 3282]
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದೆ ಇಬ್ಬರು ವ್ಯಕ್ತಿಗಳು ಜಗಳವಾಡುತ್ತಾ ಒಬ್ಬರನ್ನೊಬ್ಬರು ನಿಂದಿಸುತ್ತಿದ್ದರು. ಅವರಲ್ಲೊಬ್ಬನ ಮುಖ ಕೆಂಪಾಯಿತು ಮತ್ತು ಅವನ ಕುತ್ತಿಗೆಯ ಸುತ್ತಲಿನ ರಕ್ತನಾಳಗಳು ಊದಿಕೊಂಡವು.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಾನು ಒಂದು ಮಾತನ್ನು ಬಲ್ಲೆ. ಈ ಕೋಪಗೊಂಡವನು ಅದನ್ನು ಹೇಳಿದರೆ, ಅವನಲ್ಲಿರುವ ಕೋಪವು ದೂರವಾಗುತ್ತದೆ. ಅವನು ‘ಅಊದು ಬಿಲ್ಲಾಹಿ ಮಿನಶ್ಶೈತಾನಿ ರ್ರಜೀಮ್’ ಎಂದು ಹೇಳಿದರೆ.
ಆಗ ಅವರು ಆ ವ್ಯಕ್ತಿಯೊಡನೆ ಹೇಳಿದರು: "ಶೈತಾನನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡು" ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದಾರೆ.
ಆಗ ಅವನು ಕೇಳಿದನು: "ನಾನೇನು ಹುಚ್ಚನೇ?" ಹುಚ್ಚಿರುವವರು ಮಾತ್ರ ಶೈತಾನನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುತ್ತಾರೆ ಎಂದು ಅವನು ಭಾವಿಸಿದ್ದನು.