ಉಪವರ್ಗಗಳು

ಹದೀಸ್‌ಗಳ ಪಟ್ಟಿ

ಯಾರು ಒಂದು ಸ್ಥಳದಲ್ಲಿ ಇಳಿದು, 'ಅಊದು ಬಿಕಲಿಮಾತಿಲ್ಲಾಹಿ ತ್ತಾಮ್ಮಾತಿ ಮಿನ್ ಶರ್‍ರಿ ಮಾ ಖಲಕ್' (ಅರ್ಥ: ಅಲ್ಲಾಹನ ಪರಿಪೂರ್ಣ ವಚನಗಳೊಂದಿಗೆ ಅವನು ಸೃಷ್ಟಿಸಿದ ಎಲ್ಲಾ ಕೆಡುಕುಗಳಿಂದ ನಾನು ರಕ್ಷೆ ಬೇಡುತ್ತೇನೆ) ಎಂದು ಹೇಳುತ್ತಾನೋ ಅವನು ಆ ಸ್ಥಳದಿಂದ ತೆರಳುವ ತನಕ ಅವನಿಗೆ ಯಾವುದೇ ವಸ್ತು ತೊಂದರೆ ಕೊಡುವುದಿಲ್ಲ
عربي ಆಂಗ್ಲ ಉರ್ದು
ನಾನು ಒಂದು ಮಾತನ್ನು ಬಲ್ಲೆ. ಅವನೇನಾದರೂ ಅದನ್ನು ಹೇಳಿದರೆ, ಅವನಲ್ಲುಂಟಾಗುತ್ತಿರುವ ಕೋಪವು ದೂರವಾಗುತ್ತದೆ. ಅವನು ‘ಅಊದು ಬಿಲ್ಲಾಹಿ ಮಿನಶ್ಶೈತಾನ್’ ಎಂದು ಹೇಳಿದರೆ ಅವನಲ್ಲುಂಟಾಗುತ್ತಿರುವ ಕೋಪವು ದೂರವಾಗುತ್ತದೆ
عربي ಆಂಗ್ಲ ಉರ್ದು
ಯಾರ ಬಳಿ ನನ್ನ ಹೆಸರು ಹೇಳಲಾಗಿಯೂ ನನ್ನ ಮೇಲೆ ಸಲಾತ್ ಹೇಳುವುದಿಲ್ಲವೋ ಅವನೇ ನಿಜವಾದ ಜಿಪುಣ
عربي ಆಂಗ್ಲ ಉರ್ದು
ಯಾರು ಆಹಾರ ಸೇವಿಸಿದ ನಂತರ, “ಅಲ್-ಹಮ್ದುಲಿಲ್ಲಾಹಿಲ್ಲದೀ ಅತ್‌ಅಮನೀ ಹಾದಾ ವರಝಕನೀಹಿ ಮಿನ್ ಗೈರಿ ಹೌಲಿನ್ ಮಿನ್ನೀ ವಲಾ ಕುವ್ವ.” (ಸ್ವಶಕ್ತಿಯಾಗಲಿ, ಸ್ವಸಾಮರ್ಥ್ಯವಾಗಲಿ ಇಲ್ಲದ ನನಗೆ ಈ ಆಹಾರವನ್ನು ಉಣಿಸಿದ ಮತ್ತು ಇದನ್ನು ನನಗೆ ಒದಗಿಸಿದ ಅಲ್ಲಾಹನಿಗೆ ಸರ್ವಸ್ತುತಿ) ಎಂದು ಹೇಳುತ್ತಾನೋ, ಅವನ ಗತ ಪಾಪಗಳನ್ನು ಕ್ಷಮಿಸಲಾಗುವುದು
عربي ಆಂಗ್ಲ ಉರ್ದು
ನೀವಿಬ್ಬರು ಕೇಳಿದ್ದಕ್ಕಿಂತಲೂ ಉತ್ತಮವಾದ ಒಂದನ್ನು ನಾನು ನಿಮಗೆ ತಿಳಿಸಿಕೊಡಲೇ? ನೀವು ನಿದ್ದೆ ಮಾಡಲು ಹೋಗುವಾಗ ಮೂವತ್ತಮೂರು ಬಾರಿ ಸುಬ್‌ಹಾನಲ್ಲಾಹ್, ಮೂವತ್ತಮೂರು ಬಾರಿ ಅಲ್-ಹಮ್ದುಲಿಲ್ಲಾಹ್, ಮೂವತ್ತನಾಲ್ಕು ಬಾರಿ ಅಲ್ಲಾಹು ಅಕ್ಬರ್ ಹೇಳಿರಿ. ಇದು ನಿಮಗೆ ಒಬ್ಬ ಸೇವಕ ದೊರೆಯುವುದಕ್ಕಿಂತಲೂ ಉತ್ತಮವಾಗಿದೆ
عربي ಆಂಗ್ಲ ಉರ್ದು
ಅವನು ಖಿನ್‌ಝಬ್ ಎಂಬ ಹೆಸರಿನ ಶೈತಾನ್. ನಿಮಗೆ ಅವನ ಅನುಭವವಾದರೆ, ಅವನ ವಿರುದ್ಧ ಅಲ್ಲಾಹನಲ್ಲಿ ರಕ್ಷೆ ಬೇಡಿರಿ, ಮತ್ತು ನಿಮ್ಮ ಎಡಭಾಗಕ್ಕೆ ಮೂರು ಸಲ ಹಗುರವಾಗಿ ಉಗಿಯಿರಿ
عربي ಆಂಗ್ಲ ಉರ್ದು