عَنْ أَبِي هُرَيْرَةَ رضي الله عنه قَالَ: قَالَ رَسُولُ اللهِ صَلَّى اللَّهُ عَلَيْهِ وَسَلَّمَ:
«رَغِمَ أَنْفُ رَجُلٍ ذُكِرْتُ عِنْدَهُ فَلَمْ يُصَلِّ عَلَيَّ، وَرَغِمَ أَنْفُ رَجُلٍ دَخَلَ عَلَيْهِ رَمَضَانُ ثُمَّ انْسَلَخَ قَبْلَ أَنْ يُغْفَرَ لَهُ، وَرَغِمَ أَنْفُ رَجُلٍ أَدْرَكَ عِنْدَهُ أَبَوَاهُ الكِبَرَ فَلَمْ يُدْخِلاَهُ الجَنَّةَ».
[صحيح] - [رواه الترمذي وأحمد] - [سنن الترمذي: 3545]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವ ವ್ಯಕ್ತಿಯ ಬಳಿ ನನ್ನ ಹೆಸರನ್ನು ಉಲ್ಲೇಖಿಸಲಾಗಿಯೂ ಅವನು ನನ್ನ ಮೇಲೆ ದುರೂದ್ (ಸಲಾತ್) ಹೇಳಲಿಲ್ಲವೋ ಅವನ ಮೂಗು ಮಣ್ಣಾಗಲಿ (ಅವನು ನಾಶವಾಗಲಿ). ಯಾವ ವ್ಯಕ್ತಿ ರಮದಾನ್ ತಿಂಗಳನ್ನು ಪಡೆದೂ ಸಹ ಅವನ ಪಾಪಗಳು ಕ್ಷಮಿಸಲ್ಪಡುವ ಮೊದಲು ಅದು ಮುಗಿದುಹೋಯಿತೋ ಅವನ ಮೂಗು ಮಣ್ಣಾಗಲಿ. ಯಾವ ವ್ಯಕ್ತಿಯ ಬಳಿ ಅವನ ತಂದೆತಾಯಿ ವೃದ್ಧಾಪ್ಯವನ್ನು ತಲುಪಿಯೂ ಅವರು ಅವನನ್ನು ಸ್ವರ್ಗಕ್ಕೆ ಸೇರಿಸಲಿಲ್ಲವೋ ಅವನ ಮೂಗು ಮಣ್ಣಾಗಲಿ."
[صحيح] - [رواه الترمذي وأحمد] - [سنن الترمذي - 3545]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೂರು ರೀತಿಯ ಜನರಿಗೆ ಅವಮಾನ, ಅಧೋಗತಿ ಮತ್ತು ನಷ್ಟದಿಂದ ಅವರ ಮೂಗು ಮಣ್ಣಾಗಲಿ ಎಂದು ಪ್ರಾರ್ಥಿಸಿದರು: ಮೊದಲನೆಯ ರೀತಿಯ ಜನರು: ಅವರ ಬಳಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಸರನ್ನು ಉಲ್ಲೇಖಿಸಲಾಗಿದ್ದರೂ ಅವರು "ಸಲ್ಲಲ್ಲಾಹು ಅಲೈಹಿ ವಸಲ್ಲಮ್" ಅಥವಾ ಅಂತಹ ಯಾವುದೇ ದುರೂದ್ (ಸಲಾತ್) ಹೇಳಲಿಲ್ಲ. ಎರಡನೆಯ ರೀತಿಯ ಜನರು: ಅವರು ರಮದಾನ್ ತಿಂಗಳನ್ನು ಪಡೆದೂ ಸಹ ಸತ್ಕರ್ಮಗಳನ್ನು ನಿರ್ವಹಿಸದ ಕಾರಣ ಅವರ ಪಾಪಗಳು ಕ್ಷಮಿಸಲ್ಪಡುವ ಮೊದಲೇ ತಿಂಗಳು ಮುಗಿದುಹೋಯಿತು. ಮೂರನೆಯ ರೀತಿ: ಅವರ ಬಳಿ ಅವರ ತಂದೆತಾಯಿಯರು ವೃದ್ಧಾಪ್ಯವನ್ನು ತಲುಪಿದರು, ಆದರೆ ಅವರು ತಂದೆತಾಯಿಗಳಿಗೆ ಯಾವುದೇ ಒಳಿತು ಮಾಡಲು ಮತ್ತು ಅವರ ಹಕ್ಕುಗಳನ್ನು ನೆರವೇರಿಸಲು ವಿಫಲರಾದ ಕಾರಣ ಅವರ ಸ್ವರ್ಗ ಪ್ರವೇಶಕ್ಕೆ ಇವರು ತಡೆಯಾದರು.