عَنْ أُبَيِّ بْنِ كَعْبٍ رضي الله عنه قَالَ: قَالَ رَسُولُ اللهِ صَلَّى اللَّهُ عَلَيْهِ وَسَلَّمَ:
«لاَ تَسُبُّوا الرِّيحَ، فَإِذَا رَأَيْتُمْ مَا تَكْرَهُونَ فَقُولُوا: اللَّهُمَّ إِنَّا نَسْأَلُكَ مِنْ خَيْرِ هَذِهِ الرِّيحِ وَخَيْرِ مَا فِيهَا وَخَيْرِ مَا أُمِرَتْ بِهِ، وَنَعُوذُ بِكَ مِنْ شَرِّ هَذِهِ الرِّيحِ وَشَرِّ مَا فِيهَا وَشَرِّ مَا أُمِرَتْ بِهِ».
[صحيح] - [رواه الترمذي] - [سنن الترمذي: 2252]
المزيــد ...
ಉಬೈ ಬಿನ್ ಕಅಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು:
"ಗಾಳಿಯನ್ನು ನಿಂದಿಸಬೇಡಿ. ನಿಮಗೆ ಇಷ್ಟವಿಲ್ಲದ್ದನ್ನು ನೋಡಿದರೆ ಹೀಗೆ ಹೇಳಿರಿ: ಓ ಅಲ್ಲಾಹ್, ಈ ಗಾಳಿಯ ಒಳಿತು, ಅದರಲ್ಲಿರುವ ಒಳಿತು ಮತ್ತು ಅದನ್ನು ಯಾವುದಕ್ಕಾಗಿ ಆಜ್ಞಾಪಿಸಲಾಗಿದೆಯೋ ಅದರ ಒಳಿತನ್ನು ನಾವು ನಿನ್ನಲ್ಲಿ ಬೇಡುತ್ತೇವೆ. ಈ ಗಾಳಿಯ ಕೆಡುಕು, ಅದರಲ್ಲಿರುವ ಕೆಡುಕು ಮತ್ತು ಅದನ್ನು ಯಾವುದಕ್ಕಾಗಿ ಆಜ್ಞಾಪಿಸಲಾಗಿದೆಯೋ ಅದರ ಕೆಡುಕಿನಿಂದ ನಾವು ನಿನ್ನಲ್ಲಿ ಅಭಯ ಯಾಚಿಸುತ್ತೇವೆ."
[صحيح] - [رواه الترمذي] - [سنن الترمذي - 2252]
ಗಾಳಿಯನ್ನು ಶಪಿಸುವುದು ಅಥವಾ ನಿಂದಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಏಕೆಂದರೆ ಅದು ತನ್ನ ಸೃಷ್ಟಿಕರ್ತನ ಆಜ್ಞೆಯಂತೆ ವರ್ತಿಸುತ್ತದೆ. ಅದು ಕೆಲವೊಮ್ಮೆ ಕರುಣೆಯನ್ನು ಮತ್ತು ಕೆಲವೊಮ್ಮೆ ಶಿಕ್ಷೆಯನ್ನು ತರುತ್ತದೆ. ಅದನ್ನು ನಿಂದಿಸುವುದು ಅದರ ಸೃಷ್ಟಿಕರ್ತನಾದ ಅಲ್ಲಾಹನನ್ನು ನಿಂದಿಸಿದಂತೆ ಮತ್ತು ಅವನ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದಂತೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರ ಸೃಷ್ಟಿಕರ್ತನಾದ ಅಲ್ಲಾಹನ ಕಡೆಗೆ ಮರಳಲು ಮತ್ತು ಅದರ ಒಳಿತು, ಅದರಲ್ಲಿರುವ ಒಳಿತು ಹಾಗೂ ಮಳೆಯನ್ನು ತರುವುದು, ಪರಾಗಸ್ಪರ್ಶವನ್ನು ಸಾಗಿಸುವುದು ಮುಂತಾದವುಗಳಿಗಾಗಿ ಅದನ್ನು ಕಳುಹಿಸಲಾದ ಒಳಿತನ್ನು ಬೇಡಲು ನಿರ್ದೇಶಿಸುತ್ತಾರೆ. ಹಾಗೆಯೇ ಅದರ ಕೆಡುಕು, ಅದರಲ್ಲಿರುವ ಕೆಡುಕು ಮತ್ತು ಸಸ್ಯಗಳು ಹಾಗೂ ಮರಗಳನ್ನು ನಾಶಪಡಿಸುವುದು, ಜಾನುವಾರುಗಳನ್ನು ನಾಶಪಡಿಸುವುದು ಮತ್ತು ಕಟ್ಟಡಗಳನ್ನು ಕೆಡುವುದು ಮುಂತಾದವುಗಳಿಗಾಗಿ ಅದನ್ನು ಕಳುಹಿಸಲಾದ ಕೆಡುಕಿನಿಂದ ಅಲ್ಲಾಹನಲ್ಲಿ ಅಭಯ ಯಾಚಿಸಲು ನಿರ್ದೇಶಿಸುತ್ತಾರೆ. ಅಲ್ಲಾಹನಲ್ಲಿ ಈ ರೀತಿ ಬೇಡುವುದು ಅಲ್ಲಾಹನಿಗಿರುವ ದಾಸ್ಯತ್ವವನ್ನು ನಿಜಪಡಿಸುವುದಾಗಿದೆ.