عن عُثْمَانَ بْنَ أَبِي الْعَاصِ رضي الله عنه:
أنه أَتَى النَّبِيَّ صَلَّى اللهُ عَلَيْهِ وَسَلَّمَ فَقَالَ: يَا رَسُولَ اللهِ، إِنَّ الشَّيْطَانَ قَدْ حَالَ بَيْنِي وَبَيْنَ صَلَاتِي وَقِرَاءَتِي يَلْبِسُهَا عَلَيَّ، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «ذَاكَ شَيْطَانٌ يُقَالُ لَهُ خِنْزَِبٌ، فَإِذَا أَحْسَسْتَهُ فَتَعَوَّذْ بِاللهِ مِنْهُ، وَاتْفُلْ عَلَى يَسَارِكَ ثَلَاثًا»، قَالَ: فَفَعَلْتُ ذَلِكَ فَأَذْهَبَهُ اللهُ عَنِّي.
[صحيح] - [رواه مسلم] - [صحيح مسلم: 2203]
المزيــد ...
ಉಸ್ಮಾನ್ ಬಿನ್ ಅಬುಲ್ ಆಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಶೈತಾನನು ನನ್ನ ಮತ್ತು ನನ್ನ ನಮಾಝ್ ಹಾಗೂ ಕುರ್‌ಆನ್ ಪಠಣದ ನಡುವೆ ಬಂದು ಗಲಿಬಿಲಿಗೊಳಿಸುತ್ತಾನೆ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು ಖಿನ್‌ಝಬ್ ಎಂಬ ಹೆಸರಿನ ಶೈತಾನ್. ನಿಮಗೆ ಅವನ ಅನುಭವವಾದರೆ, ಅವನ ವಿರುದ್ಧ ಅಲ್ಲಾಹನಲ್ಲಿ ರಕ್ಷೆ ಬೇಡಿರಿ, ಮತ್ತು ನಿಮ್ಮ ಎಡಭಾಗಕ್ಕೆ ಮೂರು ಸಲ ಹಗುರವಾಗಿ ಉಗಿಯಿರಿ." ಅವರು ಹೇಳುತ್ತಾರೆ: "ನಾನು ಹಾಗೆ ಮಾಡಿದೆ. ಆಗ ಅಲ್ಲಾಹು ಅವನನ್ನು ನನ್ನಿಂದ ದೂರವಿರಿಸಿದನು."
[صحيح] - [رواه مسلم] - [صحيح مسلم - 2203]
ಉಸ್ಮಾನ್ ಬಿನ್ ಅಬುಲ್ ಆಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಶೈತಾನನು ನನ್ನ ಹಾಗೂ ನನ್ನ ನಮಾಝಿನ ಮಧ್ಯೆ ಅಡ್ಢವಾಗಿ ನಿಂತು, ನನ್ನ ವಿನಮ್ರತೆಗೆ ತೊಂದರೆ ಕೊಡುತ್ತಿದ್ದಾನೆ ಮತ್ತು ಕುರ್‌ಆನ್ ಪಠಣದಲ್ಲಿ ಗಲಿಬಿಲಿಗೊಳಿಸಿ ಸಂಶಯವುಂಟಾಗುವಂತೆ ಮಾಡುತ್ತಿದ್ದಾನೆ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು ಖಿನ್‌ಝಬ್ ಎಂಬ ಹೆಸರಿನ ಶೈತಾನ್. ನಿಮಗೆ ಇಂತಹ ಸ್ಥಿತಿಯು ಅನುಭವವಾದರೆ ಅಲ್ಲಾಹನಲ್ಲಿ ರಕ್ಷೆಯನ್ನು ಬೇಡಿರಿ ಮತ್ತು ನಿಮ್ಮ ಎಡಭಾಗಕ್ಕೆ ಹಗುರವಾಗಿ ಮೂರು ಸಲ ಉಗಿಯಿರಿ." ಉಸ್ಮಾನ್ ಹೇಳುತ್ತಾರೆ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸಿದಂತೆ ನಾನು ಮಾಡಿದಾಗ, ಅಲ್ಲಾಹು ಅವನನ್ನು ನನ್ನಿಂದ ದೂರ ಸರಿಸಿದನು."