+ -

عن ابن عباس رضي الله عنهما قال:
جاءَ رجُلُ إلى النبي صلى الله عليه وسلم فقال: يا رسولَ اللهِ، إن أحدنا يجدُ في نفسِهِ -يُعرِّضُ بالشَّيءِ- لأَن يكونَ حُمَمَةً أحَبُّ إليه من أن يتكلَّم بِهِ، فقال: «اللهُ أكبرُ، اللهُ أكبرُ، الحمدُ لله الذي ردَّ كيدَه إلى الوسوسَةِ».

[صحيح] - [رواه أبو داود والنسائي في الكبرى] - [سنن أبي داود: 5112]
المزيــد ...

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲೊಬ್ಬನ ಮನಸ್ಸಿನಲ್ಲಿ ಕೆಲವು ದುರ್ವಿಚಾರಗಳು ಮೂಡುತ್ತವೆ. ಅವುಗಳ ಬಗ್ಗೆ ಮಾತನಾಡುವುದಕ್ಕಿಂತಲೂ ಇದ್ದಿಲುಗಳಾಗಿ ಮಾರ್ಪಡುವುದೇ ಅವನಿಗೆ ಹೆಚ್ಚು ಇಷ್ಟವಾಗಿದೆ." ಆಗ ಅವರು ಹೇಳಿದರು: "ಅಲ್ಲಾಹು ಮಹಾನನು, ಅಲ್ಲಾಹು ಮಹಾನನು. ಶೈತಾನನ ಕುತಂತ್ರವನ್ನು ದುರ್ಬೋಧನೆಯಾಗಿ ಮಾರ್ಪಡಿಸಿದ ಅಲ್ಲಾಹನಿಗೆ ಸರ್ವಸ್ತುತಿ."

[صحيح] - [رواه أبو داود والنسائي في الكبرى] - [سنن أبي داود - 5112]

ವಿವರಣೆ

ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲೊಬ್ಬನು ತನ್ನ ಮನಸ್ಸಿನಲ್ಲಿ ಕೆಲವು ದುರ್ವಿಚಾರಗಳು ಬಂದು ಹೋಗುವಂತೆ ಅನುಭವಿಸುತ್ತಾನೆ. ಅವುಗಳ ಬಗ್ಗೆ ಮಾತನಾಡುವುದಕ್ಕಿಂತಲೂ ಬೂದಿಯಾಗಿ ಮಾರ್ಪಡುವುದೇ ಅವನಿಗೆ ಹೆಚ್ಚು ಇಷ್ಟವಾಗಿದೆ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಬಾರಿ ಅಲ್ಲಾಹು ಮಹಾನನು ಎಂದು ಹೇಳಿದರು. ನಂತರ, ಶೈತಾನನ ಕುತಂತ್ರವನ್ನು ಕೇವಲ ದುರ್ಭೋದನೆಯಾಗಿ ಮಾರ್ಪಡಿಸಿದ ಅಲ್ಲಾಹನಿಗೆ ಸ್ತುತಿಯನ್ನು ಅರ್ಪಿಸಿದರು.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الطاجيكية الكينياروندا الرومانية المجرية التشيكية المالاجاشية الإيطالية الأورومو الأذربيجانية الأوزبكية الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಸತ್ಯವಿಶ್ವಾಸಿಗಳನ್ನು ಸತ್ಯವಿಶ್ವಾಸದಿಂದ ಸತ್ಯನಿಷೇಧಕ್ಕೆ ತಿರುಗಿಸಲು ಶೈತಾನನು ದುರ್ಬೋಧನೆಗಳ ಮೂಲಕ ಕಾಯುತ್ತಲೇ ಇರುತ್ತಾನೆ ಎಂದು ಈ ಹದೀಸ್ ವಿವರಿಸುತ್ತದೆ.
  2. ಸತ್ಯವಿಶ್ವಾಸಿಗಳಿಗೆ ಸಂಬಂಧಿಸಿ ಶೈತಾನನು ದುರ್ಬಲನಾಗಿದ್ದಾನೆಂದು ಈ ಹದೀಸ್ ವಿವರಿಸುತ್ತದೆ. ಏಕೆಂದರೆ ಅವನಿಗೆ ಸಾಧ್ಯವಾಗುವುದು ಅವರ ಮನಸ್ಸುಗಳಲ್ಲಿ ಕೆಲವು ದುರ್ವಿಚಾರಗಳನ್ನು ಮೂಡಿಸಲು ಮಾತ್ರ.
  3. ಸತ್ಯವಿಶ್ವಾಸಿಯು ಶೈತಾನನ ದುರ್ಬೋಧನೆಗಳನ್ನು ನಿರ್ಲಕ್ಷಿಸಬೇಕು ಮತ್ತು ಸಾಧ್ಯವಾದಷ್ಟು ಅದು ಮನಸ್ಸಿಗೆ ಬರದಂತೆ ತಡೆಗಟ್ಟಬೇಕೆಂದು ಈ ಹದೀಸ್ ತಿಳಿಸುತ್ತದೆ.
  4. ಉತ್ತಮವಾದ, ಅದ್ಭುತವಾದ, ಅಥವಾ ಅದರಂತಹ ಘಟನೆ ಸಂಭವಿಸುವಾಗ ಅಲ್ಲಾಹು ಅಕ್ಬರ್ (ಅಲ್ಲಾಹು ಮಹಾನನು) ಎಂದು ತಕ್ಬೀರ್ ಹೇಳಬೇಕೆಂದು ಈ ಹದೀಸ್ ತಿಳಿಸುತ್ತದೆ.
  5. ಧಾರ್ಮಿಕ ವಿಷಯಗಳ ಬಗ್ಗೆ ಸಂಶಯವಿದ್ದರೆ ವಿದ್ವಾಂಸರಲ್ಲಿ ಕೇಳಿ ತಿಳಿಯಬೇಕೆಂದು ಈ ಹದೀಸ್ ತಿಳಿಸುತ್ತದೆ.
ಇನ್ನಷ್ಟು