عَنْ أَبِي هُرَيْرَةَ رضي الله عنه قال:
جَاءَ نَاسٌ مِنْ أَصْحَابِ النَّبِيِّ صَلَّى اللهُ عَلَيْهِ وَسَلَّمَ، فَسَأَلُوهُ: إِنَّا نَجِدُ فِي أَنْفُسِنَا مَا يَتَعَاظَمُ أَحَدُنَا أَنْ يَتَكَلَّمَ بِهِ، قَالَ: «وَقَدْ وَجَدْتُمُوهُ؟» قَالُوا: نَعَمْ، قَالَ: «ذَاكَ صَرِيحُ الْإِيمَانِ».
[صحيح] - [رواه مسلم] - [صحيح مسلم: 132]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರಲ್ಲಿ ಸೇರಿದ ಕೆಲವರು ಅವರ ಬಳಿಗೆ ಬಂದು ಹೇಳಿದರು: "ನಮ್ಮ ಮನಸ್ಸುಗಳಲ್ಲಿ ನಾವು ಮಾತನಾಡಲು ಭಯಪಡುವಂತಹ ಕೆಲವು ವಿಚಾರಗಳು ಮೂಡುತ್ತವೆ." ಅವರು ಕೇಳಿದರು: "ನೀವು ಅದನ್ನು (ಭಯವನ್ನು) ಅನುಭವಿಸಿದ್ದೀರಾ?" ಅವರು ಹೌದೆಂದು ಉತ್ತರಿಸಿದರು. ಅವರು ಹೇಳಿದರು: "ಅದು ನಿರ್ಮಲ ಸತ್ಯವಿಶ್ವಾಸವಾಗಿದೆ."
[صحيح] - [رواه مسلم] - [صحيح مسلم - 132]
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರಲ್ಲಿ ಒಂದು ಗುಂಪು ಜನರು ಅವರ ಬಳಿಗೆ ಬಂದು, ಅವರು ಮಾತನಾಡಲು ಭಯಪಡುವಂತಹ ಅತ್ಯಂತ ಮ್ಲೇಚ್ಛ ಮತ್ತು ಅಸಹ್ಯಕರ ವಿಚಾರಗಳು ಅವರ ಮನಸ್ಸುಗಳಲ್ಲಿ ಮೂಡುತ್ತವೆ ಎಂದು ಹೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಅನುಭವಿಸುತ್ತಿರುವುದು ನಿರ್ಮಲ ಸತ್ಯವಿಶ್ವಾಸ ಮತ್ತು ದೃಢ ವಿಶ್ವಾಸವನ್ನಾಗಿದೆ. ಶೈತಾನನು ನಿಮ್ಮ ಹೃದಯದಲ್ಲಿ ಹಾಕುತ್ತಿರುವ ದುರ್ಭೋದನೆಗಳನ್ನು ತಡಗಟ್ಟಲು ಅದು ನಿಮ್ಮನ್ನು ಉತ್ತೇಜಿಸುತ್ತದೆ ಮತ್ತು ನೀವು ಅದರ ಬಗ್ಗೆ ಮಾತನಾಡಲು ಭಯಪಡುವಂತೆ ಮಾಡುತ್ತದೆ. ಶೈತಾನನಿಗೆ ನಿಮ್ಮ ಹೃದಯಗಳ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಶೈತಾನನ ಹತೋಟಿಯಲ್ಲಿರುವ ಹೃದಯಗಳಲ್ಲಿ ಇಂತಹ ಅನುಭವವಾಗುವುದಿಲ್ಲ."