ಹದೀಸ್‌ಗಳ ಪಟ್ಟಿ

ಸತ್ಯವಿಶ್ವಾಸವು (ಈಮಾನ್) ಎಪ್ಪತ್ತಕ್ಕಿಂತಲೂ — ಅಥವಾ ಅರುವತ್ತಕ್ಕಿಂತಲೂ — ಹೆಚ್ಚು ಶಾಖೆಗಳನ್ನು ಹೊಂದಿದೆ. 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನವು ಅತಿಶ್ರೇಷ್ಠ ಶಾಖೆಯಾಗಿದೆ ಮತ್ತು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು ಅತ್ಯಂತ ಕೆಳಗಿನ ಶಾಖೆಯಾಗಿದೆ
عربي الإنجليزية الأوردية
ನಿಮ್ಮಲ್ಲಿ ಯಾರಾದರೂ ಒಂದು ಕೆಡುಕನ್ನು ಕಂಡರೆ ಅದನ್ನು ತನ್ನ ಕೈಯಿಂದ ಬದಲಾಯಿಸಲಿ. ಅದು ಸಾಧ್ಯವಾಗದಿದ್ದರೆ ನಾಲಿಗೆಯಿಂದ. ಅದು ಕೂಡ ಸಾಧ್ಯವಾಗದಿದ್ದರೆ ಹೃದಯದಿಂದ. ಅದು ಅತಿ ದುರ್ಬಲ ವಿಶ್ವಾಸವಾಗಿದೆ
عربي الإنجليزية الأوردية
ಯಾರು ಇಸ್ಲಾಂ ಧರ್ಮದಲ್ಲಿ ಒಳಿತು ಮಾಡುತ್ತಾನೋ, ಅವನನ್ನು ಅಜ್ಞಾನ ಕಾಲದಲ್ಲಿ ಮಾಡಿದ ದುಷ್ಕರ್ಮಗಳಿಗಾಗಿ ಶಿಕ್ಷಿಸಲಾಗುವುದಿಲ್ಲ. ಆದರೆ ಯಾರು ಇಸ್ಲಾಂ ಧರ್ಮದಲ್ಲಿ ಕೆಡುಕು ಮಾಡುತ್ತಾನೋ, ಅವನನ್ನು ಹಿಂದಿನ ಮತ್ತು ನಂತರದ ದುಷ್ಕರ್ಮಗಳಿಗಾಗಿ ಶಿಕ್ಷಿಸಲಾಗುತ್ತದೆ
عربي الإنجليزية الأوردية
ನನಗಿಂತ ಮೊದಲಿನ ಸಮುದಾಯಗಳಲ್ಲಿ ಅಲ್ಲಾಹು ಕಳುಹಿಸಿದ ಯಾವುದೇ ಪ್ರವಾದಿಗೂ ಅವರ ಸಮುದಾಯದಲ್ಲಿ ಶಿಷ್ಯರು ಮತ್ತು ಸಂಗಡಿಗರು ಇಲ್ಲದೇ ಇರಲಿಲ್ಲ. ಅವರು ಆ ಪ್ರವಾದಿಯ ಚರ್ಯೆಗಳನ್ನು ಬಿಗಿಯಾಗಿ ಹಿಡಿದುಕೊಂಡು ಅವರ ಆಜ್ಞೆಯನ್ನು ಪಾಲಿಸುತ್ತಿದ್ದರು
عربي الإنجليزية الأوردية
“ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ಮುಸ್ಲಿಮ್. ಯಾರು ಅಲ್ಲಾಹು ನಿಷೇಧಿಸಿದ್ದನ್ನು ತೊರೆಯುತ್ತಾನೋ ಅವನೇ ಮುಹಾಜಿರ್
عربي الإنجليزية الأوردية
ನಮ್ಮ ಮನಸ್ಸುಗಳಲ್ಲಿ ನಾವು ಮಾತನಾಡಲು ಭಯಪಡುವಂತಹ ಕೆಲವು ವಿಚಾರಗಳು ಮೂಡುತ್ತವೆ." ಅವರು ಕೇಳಿದರು: "ನೀವು ಅದನ್ನು (ಭಯವನ್ನು) ಅನುಭವಿಸಿದ್ದೀರಾ?" ಅವರು ಹೌದೆಂದು ಉತ್ತರಿಸಿದರು. ಅವರು ಹೇಳಿದರು: "ಅದು ನಿರ್ಮಲ ಸತ್ಯವಿಶ್ವಾಸವಾಗಿದೆ
عربي الإنجليزية الأوردية
ನಿಶ್ಚಯವಾಗಿಯೂ ನಿಮ್ಮ ಬಟ್ಟೆ ಹಳತಾಗುವಂತೆ ನಿಮ್ಮ ಹೃದಯದಲ್ಲಿರುವ ವಿಶ್ವಾಸವು ಕೂಡ ಹಳತಾಗುತ್ತದೆ. ಆದ್ದರಿಂದ ನಿಮ್ಮ ಹೃದಯದಲ್ಲಿರುವ ವಿಶ್ವಾಸವನ್ನು ನವೀಕರಿಸಲು ನೀವು ಅಲ್ಲಾಹನಲ್ಲಿ ಬೇಡಿಕೊಳ್ಳಿರಿ
عربي الإنجليزية الأوردية
ಪರಿಪಾಲಕನಾಗಿ ಅಲ್ಲಾಹನಲ್ಲಿ, ಧರ್ಮವಾಗಿ ಇಸ್ಲಾಮಿನಲ್ಲಿ ಮತ್ತು ಪ್ರವಾದಿಯಾಗಿ ಮುಹಮ್ಮದ್‌ರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಪೂರ್ಣ ಸಂತೃಪ್ತಿಯಿರುವವರು ಸತ್ಯವಿಶ್ವಾಸದ ಮಾಧುರ್ಯವನ್ನು ಸವಿಯುವರು
عربي الإنجليزية الأوردية
ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದೆವು. ಆಗ ನಾವು ಪ್ರೌಢಾವಸ್ಥೆಗೆ ಹತ್ತಿರವಿರುವ (ಬಲಿಷ್ಠ) ಯುವಕರಾಗಿದ್ದೆವು. ನಾವು ಕುರ್‌ಆನ್ ಕಲಿಯುವ ಮೊದಲು 'ಈಮಾನ್' (ವಿಶ್ವಾಸ) ಅನ್ನು ಕಲಿತೆವು. ನಂತರ ನಾವು ಕುರ್‌ಆನ್ ಕಲಿತೆವು, ಅದರಿಂದ ನಮ್ಮ ಈಮಾನ್ ಅನ್ನು ಹೆಚ್ಚಿಸಿಕೊಂಡೆವು
عربي الإنجليزية الأوردية