عَنِ الْعَبَّاسِ بْنِ عَبْدِ الْمُطَّلِبِ رضي الله عنه أَنَّهُ سَمِعَ رَسُولَ اللهِ صَلَّى اللهُ عَلَيْهِ وَسَلَّمَ، يَقُولُ:
«ذَاقَ طَعْمَ الْإِيمَانِ مَنْ رَضِيَ بِاللهِ رَبًّا، وَبِالْإِسْلَامِ دِينًا، وَبِمُحَمَّدٍ رَسُولًا».
[صحيح] - [رواه مسلم] - [صحيح مسلم: 34]
المزيــد ...
ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು:
"ಪರಿಪಾಲಕನಾಗಿ ಅಲ್ಲಾಹನಲ್ಲಿ, ಧರ್ಮವಾಗಿ ಇಸ್ಲಾಮಿನಲ್ಲಿ ಮತ್ತು ಪ್ರವಾದಿಯಾಗಿ ಮುಹಮ್ಮದ್‌ರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಪೂರ್ಣ ಸಂತೃಪ್ತಿಯಿರುವವರು ಸತ್ಯವಿಶ್ವಾಸದ ಮಾಧುರ್ಯವನ್ನು ಸವಿಯುವರು."
[صحيح] - [رواه مسلم] - [صحيح مسلم - 34]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನಿಜವಾದ ಸತ್ಯವಿಶ್ವಾಸವನ್ನು ಹೊಂದಿರುವ ಮತ್ತು ಅದರಲ್ಲಿ ಹೃದಯವು ನೆಮ್ಮದಿಯಾಗಿರುವ ಸತ್ಯವಿಶ್ವಾಸಿಯು ತನ್ನ ಹೃದಯದಲ್ಲಿ ವಿಶಾಲತೆಯನ್ನು, ಸಂತೋಷವನ್ನು, ಮಾಧುರ್ಯವನ್ನು ಮತ್ತು ಅಲ್ಲಾಹನಿಗೆ ಸಮೀಪವಾಗುವ ಸವಿಯನ್ನು ಅನುಭವಿಸುತ್ತಾನೆ. ಅವನು ಮೂರು ವಿಷಯಗಳ ಬಗ್ಗೆ ಸಂತೃಪ್ತನಾಗಿದ್ದರೆ:
ಒಂದು: ಪರಿಪಾಲಕನಾಗಿ ಅಲ್ಲಾಹನಲ್ಲಿ ಸಂತೃಪ್ತನಾಗುವುದು. ಅಂದರೆ ಅಲ್ಲಾಹು ಅವನ ಪ್ರಭುತ್ವವು ಆವಶ್ಯಪಡುವ ರೀತಿಯಲ್ಲಿ ವಿಭಾಗಿಸಿಕೊಟ್ಟ ಉಪಜೀವನ ಮತ್ತು ಪರಿಸ್ಥಿತಿಗಳಲ್ಲಿ ತನ್ನ ಪಾಲಿಗೆ ಏನು ಬಂದಿದೆಯೋ ಅದರಲ್ಲಿ ಮನಸಂತೃಪ್ತಿಯನ್ನು ಹೊಂದಿರುವುದು. ಅದರ ಬಗ್ಗೆ ಯಾವುದೇ ಆಕ್ಷೇಪವು ಅವನ ಮನಸ್ಸಿನಲ್ಲಿರುವುದಿಲ್ಲ. ಅಲ್ಲಾಹನ ಹೊರತು ಬೇರೆಯವರನ್ನು ಅವನು ಪರಿಪಾಲಕನಾಗಿ ಹುಡುಕುವುದೂ ಇಲ್ಲ.
ಎರಡು: ಧರ್ಮವಾಗಿ ಇಸ್ಲಾಂನಲ್ಲಿ ಸಂತೃಪ್ತನಾಗುವುದು. ಅಂದರೆ ಇಸ್ಲಾಂ ಧರ್ಮದಲ್ಲಿರುವ ನಿಯಮಗಳು ಮತ್ತು ಕಡ್ಡಾಯ ಕರ್ತವ್ಯಗಳ ಬಗ್ಗೆ ಮನಸಂತೃಪ್ತಿಯನ್ನು ಹೊಂದಿರುವುದು. ಇಸ್ಲಾಂ ಅಲ್ಲದ ದಾರಿಯಲ್ಲಿ ಚಲಿಸದಿರುವುದು.
ಮೂರು: ಪ್ರವಾದಿಯಾಗಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಲ್ಲಿ ಸಂತೃಪ್ತನಾಗುವುದು. ಅಂದರೆ ಅವರು ಏನು ತಂದಿದ್ದಾರೋ ಅದರಲ್ಲಿ ಯಾವುದೇ ಹಿಂಜರಿಕೆ ಅಥವಾ ಸಂಶಯವನ್ನು ಇಟ್ಟುಕೊಳ್ಳದೆ ಮನಸಂತೃಪ್ತಿಯಿಂದ ಮತ್ತು ಸಂತೋಷದಿಂದ ಸ್ವೀಕರಿಸುವುದು. ಅವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚರ್ಯೆಯಲ್ಲದ ಬೇರೆ ಚರ್ಯೆಗಳನ್ನು ಸ್ವೀಕರಿಸದಿರುವುದು.