عَنْ عَائِشَةَ أُمِّ المُؤْمِنينَ رَضِيَ اللهُ عَنْها قَالَتْ:
كَانَ رَسُولُ اللَّهِ صَلَّى اللهُ عَلَيْهِ وَسَلَّمَ إِذَا أَمَرَهُمْ أَمَرَهُمْ مِنَ الأَعْمَالِ بِمَا يُطِيقُونَ، قَالُوا: إِنَّا لَسْنَا كَهَيْئَتِكَ يَا رَسُولَ اللَّهِ، إِنَّ اللَّهَ قَدْ غَفَرَ لَكَ مَا تَقَدَّمَ مِنْ ذَنْبِكَ وَمَا تَأَخَّرَ، فَيَغْضَبُ حَتَّى يُعْرَفَ الغَضَبُ فِي وَجْهِهِ، ثُمَّ يَقُولُ: «إِنَّ أَتْقَاكُمْ وَأَعْلَمَكُمْ بِاللَّهِ أَنَا».
[صحيح] - [رواه البخاري] - [صحيح البخاري: 20]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಿಗೆ ಯಾವುದೇ ಕಾರ್ಯಗಳನ್ನು ಆದೇಶಿಸುವಾಗ, ಅವರಿಗೆ ನಿರ್ವಹಿಸಲು ಸಾಧ್ಯವಾಗುವಂತಹ ಕಾರ್ಯಗಳನ್ನು ಆದೇಶಿಸುತ್ತಿದ್ದರು. ಜನರು ಹೇಳುತ್ತಿದ್ದರು: "ಓ ಅಲ್ಲಾಹನ ಸಂದೇಶವಾಹಕರೇ, ನಾವು ನಿಮ್ಮಂತೆ ಅಲ್ಲ . ಖಂಡಿತವಾಗಿಯೂ ಅಲ್ಲಾಹು ನಿಮ್ಮ ಹಿಂದಿನ ಮತ್ತು ಮುಂದಿನ ಪಾಪಗಳನ್ನು ಕ್ಷಮಿಸಿದ್ದಾನೆ". ಆಗ ಅವರು (ಪ್ರವಾದಿ) ಕೋಪಗೊಳ್ಳುತ್ತಿದ್ದರು. ಎಷ್ಟರಮಟ್ಟಿಗೆಂದರೆ ಆ ಕೋಪವು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ನಂತರ ಅವರು ಹೇಳುತ್ತಿದ್ದರು: "ನಾನೇ ನಿಮ್ಮ ಪೈಕಿ ಅಲ್ಲಾಹನ ಬಗ್ಗೆ ಅತ್ಯಂತ ಭಯಭಕ್ತಿಯುಳ್ಳವನು ಮತ್ತು ಅವನ ಬಗ್ಗೆ ಅತಿ ಹೆಚ್ಚು ತಿಳಿದವನು".
[صحيح] - [رواه البخاري] - [صحيح البخاري - 20]
ಸತ್ಯವಿಶ್ವಾಸಿಗಳ ಮಾತೆ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಿಗೆ ಯಾವುದಾದರೂ ಕೆಲಸವನ್ನು ಆದೇಶಿಸಿದರೆ, ಅವರಿಗೆ ಕಷ್ಟವಾಗದಂತಹ ಸುಲಭವಾದ ಕಾರ್ಯವನ್ನೇ ಆದೇಶಿಸುತ್ತಿದ್ದರು. ಜನರು ಅದನ್ನು ನಿರಂತರವಾಗಿ ಮಾಡಲು ಸಾಧ್ಯವಾಗದೆ ಬಿಟ್ಟುಬಿಡಬಹುದು ಎಂಬ ಭಯದಿಂದ ಅವರು ಹೀಗೆ ಮಾಡುತ್ತಿದ್ದರು. ಪ್ರವಾದಿಯವರು ಕೂಡ ಅಂತಹ ಸುಲಭವಾದ (ಮಿತವಾದ) ಕಾರ್ಯವನ್ನೇ ಮಾಡುತ್ತಿದ್ದರು. ಆದರೆ ಸಹಾಬಾಗಳು ಪ್ರವಾದಿಯವರಿಗಿಂತ ಹೆಚ್ಚು ಕಷ್ಟಕರವಾದ ಕಾರ್ಯಗಳನ್ನು ಮಾಡಲು ಬಯಸುತ್ತಿದ್ದರು. ಅವರ ನಂಬಿಕೆಯೇನೆಂದರೆ, ತಮ್ಮ ಸ್ಥಾನಮಾನಗಳನ್ನು ಏರಿಸಿಕೊಳ್ಳಲು ಅವರು ಆರಾಧನೆಯಲ್ಲಿ ಹೆಚ್ಚು ಶ್ರಮಪಡುವ ಅಗತ್ಯವಿದೆ. ಆದರೆ ಪ್ರವಾದಿಯವರಿಗೆ ಅದರ ಅಗತ್ಯವಿಲ್ಲ (ಏಕೆಂದರೆ ಅವರ ಪಾಪಗಳನ್ನು ಅಲ್ಲಾಹು ಕ್ಷಮಿಸಿದ್ದಾನೆ). ಆದ್ದರಿಂದ ಅವರು ಹೇಳುತ್ತಿದ್ದರು: "ಓ ಅಲ್ಲಾಹನ ಸಂದೇಶವಾಹಕರೇ, ನಮ್ಮ ಸ್ಥಿತಿ ನಿಮ್ಮಂತಲ್ಲ. ಅಲ್ಲಾಹು ನಿಮ್ಮ ಪಾಪಗಳನ್ನು ಕ್ಷಮಿಸಿದ್ದಾನೆ." ಇದನ್ನು ಕೇಳಿ ಪ್ರವಾದಿಯವರು ಕೋಪಗೊಳ್ಳುತ್ತಿದ್ದರು ಮತ್ತು ಅದು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ನಂತರ ಅವರು ಹೇಳುತ್ತಿದ್ದರು: "ನಾನು ನಿಮಗಿಂತ ಹೆಚ್ಚು ಅಲ್ಲಾಹನ ಭಯವುಳ್ಳವನು ಮತ್ತು ತಿಳಿದವನು. ಆದ್ದರಿಂದ ನಾನು ಏನನ್ನು ಆದೇಶಿಸುತ್ತೇನೆಯೋ ಅದನ್ನೇ ಮಾಡಿರಿ."