عَنْ جُنْدُبِ بْنِ عَبْدِ اللَّهِ رَضيَ اللهُ عنهُ قَالَ:
كُنَّا مَعَ النَّبِيِّ صَلَّى اللَّهُ عَلَيْهِ وَسَلَّمَ وَنَحْنُ فِتْيَانٌ حَزَاوِرَةٌ، فَتَعَلَّمْنَا الإِيمَانَ قَبْلَ أَنْ نَتَعَلَّمَ القُرْآنَ، ثُمَّ تَعَلَّمْنَا القُرْآنَ، فَازْدَدْنَا بِهِ إِيمَانًا.
[صحيح] - [رواه ابن ماجه] - [سنن ابن ماجه: 61]
المزيــد ...
ಜುಂದುಬ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದೆವು. ಆಗ ನಾವು ಪ್ರೌಢಾವಸ್ಥೆಗೆ ಹತ್ತಿರವಿರುವ (ಬಲಿಷ್ಠ) ಯುವಕರಾಗಿದ್ದೆವು. ನಾವು ಕುರ್‌ಆನ್ ಕಲಿಯುವ ಮೊದಲು 'ಈಮಾನ್' (ವಿಶ್ವಾಸ) ಅನ್ನು ಕಲಿತೆವು. ನಂತರ ನಾವು ಕುರ್‌ಆನ್ ಕಲಿತೆವು, ಅದರಿಂದ ನಮ್ಮ ಈಮಾನ್ ಅನ್ನು ಹೆಚ್ಚಿಸಿಕೊಂಡೆವು."
[صحيح] - [رواه ابن ماجه] - [سنن ابن ماجه - 61]
ಜುಂದುಬ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದಾಗ, ನಾವು ಪ್ರೌಢಾವಸ್ಥೆಯನ್ನು ಸಮೀಪಿಸುತ್ತಿದ್ದ ಬಲಿಷ್ಠ ಮತ್ತು ಗಟ್ಟಿಮುಟ್ಟಾದ ಯುವಕರಾಗಿದ್ದೆವು. ನಾವು ಕುರ್‌ಆನ್ ಕಲಿಯುವ ಮುನ್ನ ಪ್ರವಾದಿಯವರ ಬಳಿ ಈಮಾನ್ ಅನ್ನು ಕಲಿತೆವು. ತದನಂತರ ನಾವು ಕುರ್‌ಆನ್ ಕಲಿತೆವು; ಅದರಿಂದ ನಾವು ನಮ್ಮ ಈಮಾನ್ ಅನ್ನು ಹೆಚ್ಚಿಸಿದೆವು.