عَنْ ابْنِ عَبَّاسٍ رَضِيَ اللهُ عَنْهُمَا أَنَّ النَّبِيَّ صَلَّى اللَّهُ عَلَيْهِ وَسَلَّمَ قَالَ:
«نَحْنُ آخِرُ الأُمَمِ، وَأَوَّلُ مَنْ يُحَاسَبُ، يُقَالُ: أَيْنَ الأُمَّةُ الأُمِّيَّةُ وَنَبِيُّهَا؟ فَنَحْنُ الآخِرُونَ الأَوَّلُونَ».
[صحيح] - [رواه ابن ماجه] - [سنن ابن ماجه: 4290]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಾವು ಕೊನೆಯ ಸಮುದಾಯವಾಗಿದ್ದೇವೆ, ಆದರೆ ವಿಚಾರಣೆ ನಡೆಸಲ್ಪಡುವವರಲ್ಲಿ ಮೊದಲಿಗರಾಗಿದ್ದೇವೆ. (ಪುನರುತ್ಥಾನ ದಿನದಂದು) ಹೇಳಲಾಗುವುದು: 'ಅನಕ್ಷರಸ್ಥ ಸಮುದಾಯ ಮತ್ತು ಅವರ ಪ್ರವಾದಿ ಎಲ್ಲಿದ್ದಾರೆ?'. ಹೀಗೆ ನಾವು ಕೊನೆಯವರು ಮತ್ತು (ವಿಚಾರಣೆಯಲ್ಲಿ) ಮೊದಲಿಗರಾಗಿದ್ದೇವೆ".
[صحيح] - [رواه ابن ماجه] - [سنن ابن ماجه - 4290]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿರುವುದೇನೆಂದರೆ, ಅಸ್ತಿತ್ವ ಮತ್ತು ಕಾಲಘಟ್ಟದ ಆಧಾರದಲ್ಲಿ ಅವರ ಸಮುದಾಯವು (ಉಮ್ಮತ್) ಕೊನೆಯ ಸಮುದಾಯವಾಗಿದೆ. ಆದರೆ, ತೀರ್ಪು ನೀಡುವ ದಿನದಂದು (ಪುನರುತ್ಥಾನ) ವಿಚಾರಣೆಗೆ ಒಳಪಡುವ ಸಮುದಾಯಗಳಲ್ಲಿ ಇದು ಮೊದಲನೆಯದಾಗಿರುತ್ತದೆ. ಆ ದಿನ ಹೀಗೆ ಕರೆಯಲಾಗುತ್ತದೆ: "ಅನಕ್ಷರಸ್ಥ ಸಮುದಾಯ ಮತ್ತು ಅವರ ಪ್ರವಾದಿ ಎಲ್ಲಿದ್ದಾರೆ?". ಇಲ್ಲಿ 'ಉಮ್ಮೀ' (ಅನಕ್ಷರಸ್ಥರು) ಎಂದು ಕರೆಯಲು ಕಾರಣ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಓದು-ಬರಹ ಬಲ್ಲವರಾಗಿರಲಿಲ್ಲ. ಅವರಿಗೆ ಸೇರಿಸಿ ಅವರ ಸಮುದಾಯವನ್ನು ಕೂಡ ಹಾಗೆಯೇ ಕರೆಯಲಾಗಿದೆ. ಹೀಗೆ ಅವರನ್ನು ವಿಚಾರಣೆಗಾಗಿ ಮೊದಲು ಕರೆಯಲಾಗುತ್ತದೆ. ಆದ್ದರಿಂದ ನಾವು ಕಾಲದಲ್ಲಿ ಕೊನೆಯವರಾಗಿದ್ದರೂ, ಪುನರುತ್ಥಾನ ದಿನದ ವಿಚಾರಣೆಯಲ್ಲಿ ಮತ್ತು ಸ್ವರ್ಗ ಪ್ರವೇಶಿಸುವುದರಲ್ಲಿ ಮೊದಲಿಗರಾಗಿದ್ದೇವೆ.