عَنْ عَبْدِ اللهِ بْنِ مَسْعُودٍ رضي الله عنه أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«مَا مِنْ نَبِيٍّ بَعَثَهُ اللهُ فِي أُمَّةٍ قَبْلِي إِلَّا كَانَ لَهُ مِنْ أُمَّتِهِ حَوَارِيُّونَ، وَأَصْحَابٌ يَأْخُذُونَ بِسُنَّتِهِ وَيَقْتَدُونَ بِأَمْرِهِ، ثُمَّ إِنَّهَا تَخْلُفُ مِنْ بَعْدِهِمْ خُلُوفٌ يَقُولُونَ مَا لَا يَفْعَلُونَ، وَيَفْعَلُونَ مَا لَا يُؤْمَرُونَ، فَمَنْ جَاهَدَهُمْ بِيَدِهِ فَهُوَ مُؤْمِنٌ، وَمَنْ جَاهَدَهُمْ بِلِسَانِهِ فَهُوَ مُؤْمِنٌ، وَمَنْ جَاهَدَهُمْ بِقَلْبِهِ فَهُوَ مُؤْمِنٌ، وَلَيْسَ وَرَاءَ ذَلِكَ مِنَ الْإِيمَانِ حَبَّةُ خَرْدَلٍ».
[صحيح] - [رواه مسلم] - [صحيح مسلم: 50]
المزيــد ...
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನನಗಿಂತ ಮೊದಲಿನ ಸಮುದಾಯಗಳಲ್ಲಿ ಅಲ್ಲಾಹು ಕಳುಹಿಸಿದ ಯಾವುದೇ ಪ್ರವಾದಿಗೂ ಅವರ ಸಮುದಾಯದಲ್ಲಿ ಶಿಷ್ಯರು ಮತ್ತು ಸಂಗಡಿಗರು ಇಲ್ಲದೇ ಇರಲಿಲ್ಲ. ಅವರು ಆ ಪ್ರವಾದಿಯ ಚರ್ಯೆಗಳನ್ನು ಬಿಗಿಯಾಗಿ ಹಿಡಿದುಕೊಂಡು ಅವರ ಆಜ್ಞೆಯನ್ನು ಪಾಲಿಸುತ್ತಿದ್ದರು. ನಂತರ ಅವರ ತಲೆಮಾರುಗಳು ಕಳೆದುಹೋದಂತೆ, ಜನರು ತಾವು ಮಾಡದಿರುವುದನ್ನು ಹೇಳತೊಡಗಿದರು ಮತ್ತು ತಮಗೆ ಆಜ್ಞಾಪಿಸಿರದವುಗಳನ್ನು ಮಾಡತೊಡಗಿದರು. ಆಗ ಯಾರು ತನ್ನ ಕೈಯ ಮೂಲಕ ಅವರೊಂದಿಗೆ ಹೋರಾಡುತ್ತಾನೋ ಅವನು ಸತ್ಯವಿಶ್ವಾಸಿಯಾಗಿದ್ದಾನೆ. ಯಾರು ತನ್ನ ನಾಲಗೆಯ ಮೂಲಕ ಅವರೊಂದಿಗೆ ಹೋರಾಡುತ್ತಾನೋ ಅವನು ಸತ್ಯವಿಶ್ವಾಸಿಯಾಗಿದ್ದಾನೆ. ಯಾರು ತನ್ನ ಹೃದಯದ ಮೂಲಕ ಅವರೊಂದಿಗೆ ಹೋರಾಡುತ್ತಾನೋ ಅವನು ಸತ್ಯವಿಶ್ವಾಸಿಯಾಗಿದ್ದಾನೆ. ಆದರಾಚೆಗೆ, ಸಾಸಿವೆ ಕಾಳಿನಷ್ಟು ಸತ್ಯವಿಶ್ವಾಸವೂ ಇಲ್ಲ."
[صحيح] - [رواه مسلم] - [صحيح مسلم - 50]
ಪ್ರವಾದಿಯವರು ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಅವರಿಗಿಂತ ಮೊದಲಿನ ಸಮುದಾಯಗಳಲ್ಲಿ ಕಳುಹಿಸಿದ ಯಾವುದೇ ಪ್ರವಾದಿಗೂ, ಅವರ ಸಮುದಾಯದಲ್ಲಿ ಅವರ ನಂತರ ಖಲೀಫತ್ವವನ್ನು ವಹಿಸಿಕೊಳ್ಳಲು ಯೋಗ್ಯರಾದ ಆಪ್ತಶಿಷ್ಯರು, ಸಂಗಡಿಗರು, ಹೋರಾಟಗಾರರು ಮತ್ತು ಪ್ರಾಮಾಣಿಕರು ಇಲ್ಲದೇ ಇರಲಿಲ್ಲ. ಅವರು ಆ ಪ್ರವಾದಿಯ ಚರ್ಯೆಗಳನ್ನು ಬಿಗಿಯಾಗಿ ಹಿಡಿದುಕೊಂಡು ಅವರ ಆಜ್ಞೆಯನ್ನು ಪಾಲಿಸುತ್ತಿದ್ದರು. ನಂತರ, ಆ ಸಜ್ಜನ ಪೂರ್ವಿಕರ ಕಾಲದ ಬಳಿಕ, ಅಯೋಗ್ಯ ಜನರು ಬರತೊಡಗಿದರು. ಅವರು ತಾವು ಮಾಡದಿರುವುದನ್ನು ಹೇಳತೊಡಗಿದರು ಮತ್ತು ತಮಗೆ ಆಜ್ಞಾಪಿಸಿರದವುಗಳನ್ನು ಮಾಡತೊಡಗಿದರು. ಆಗ ಯಾರು ತನ್ನ ಕೈಯ ಮೂಲಕ ಅವರೊಂದಿಗೆ ಹೋರಾಡುತ್ತಾನೋ ಅವನು ಸತ್ಯವಿಶ್ವಾಸಿಯಾಗಿದ್ದಾನೆ. ಯಾರು ತನ್ನ ನಾಲಗೆಯ ಮೂಲಕ ಅವರೊಂದಿಗೆ ಹೋರಾಡುತ್ತಾನೋ ಅವನು ಸತ್ಯವಿಶ್ವಾಸಿಯಾಗಿದ್ದಾನೆ. ಯಾರು ತನ್ನ ಹೃದಯದ ಮೂಲಕ ಅವರೊಂದಿಗೆ ಹೋರಾಡುತ್ತಾನೋ ಅವನು ಸತ್ಯವಿಶ್ವಾಸಿಯಾಗಿದ್ದಾನೆ. ಆದರಾಚೆಗೆ, ಸಾಸಿವೆ ಕಾಳಿನಷ್ಟು ಸತ್ಯವಿಶ್ವಾಸವೂ ಇಲ್ಲ.