عَنْ أَنَسِ بْنِ مَالِكٍ رَضِيَ اللَّهُ عَنْهُ قَالَ: مَا خَطَبَنَا نَبِيُّ اللهِ صَلَّى اللهُ عَلَيْهِ وَسَلَّمَ إِلَّا قَالَ:
«لَا إِيمَانَ لِمَنْ لَا أَمَانَةَ لَهُ، وَلَا دِينَ لِمَنْ لَا عَهْدَ لَهُ».
[حسن لغيره] - [رواه أحمد] - [مسند أحمد: 12383]
المزيــد ...
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಪ್ರವಚನ ನೀಡಿದಾಗಲೆಲ್ಲಾ ಹೀಗೆ ಹೇಳದೇ ಇರುತ್ತಿರಲಿಲ್ಲ:
"ಯಾರಲ್ಲಿ ಅಮಾನತ್ (ನಂಬಿಕಸ್ತಿಕೆ/ಪ್ರಾಮಾಣಿಕತೆ) ಇಲ್ಲವೋ ಅವನಲ್ಲಿ ಈಮಾನ್ (ವಿಶ್ವಾಸ) ಇಲ್ಲ. ಮತ್ತು ಯಾರಲ್ಲಿ ಕರಾರು ಪಾಲನೆ ಇಲ್ಲವೋ ಅವನಲ್ಲಿ ಧರ್ಮವಿಲ್ಲ".
[حسن لغيره] - [رواه أحمد] - [مسند أحمد - 12383]
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರು ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನೀಡಿದಾಗ ಅಥವಾ ಉಪದೇಶಿಸಿದಾಗ, ಈ ಎರಡು ವಿಷಯಗಳನ್ನು ಉಲ್ಲೇಖಿಸದೇ ಇರುವುದು ತೀರಾ ಅಪರೂಪವಾಗಿತ್ತು: ಮೊದಲನೆಯದು: ಯಾರ ಮನಸ್ಸಿನಲ್ಲಿ ಸಂಪತ್ತು, ಆತ್ಮ ಅಥವಾ ಕುಟುಂಬದ ವಿಷಯದಲ್ಲಿ ಯಾರಿಗಾದರೂ ದ್ರೋಹ ಬಗೆಯುವ ಆಲೋಚನೆ ಇದೆಯೋ (ಅಥವಾ ದ್ರೋಹ ಬಗೆಯುತ್ತಾನೋ), ಅವನಲ್ಲಿ ಪರಿಪೂರ್ಣ ಈಮಾನ್ ಇರುವುದಿಲ್ಲ. ಎರಡನೆಯದು: ಯಾರು ಒಪ್ಪಂದಗಳು ಮತ್ತು ಕರಾರುಗಳಿಗೆ ದ್ರೋಹ ಬಗೆಯುತ್ತಾರೋ ಮತ್ತು ಅವುಗಳನ್ನು ಮುರಿಯುತ್ತಾರೋ, ಅವರಲ್ಲಿ ಪರಿಪೂರ್ಣ ಧರ್ಮವಿರುವುದಿಲ್ಲ.