عن عبد الله بن عمرو رضي الله عنهما عن النبي صلى الله عليه وسلم قال:
«لَيْسَ الْوَاصِلُ بِالْمُكَافِئِ، وَلَكِنِ الْوَاصِلُ الَّذِي إِذَا قُطِعَتْ رَحِمُهُ وَصَلَهَا».
[صحيح] - [رواه البخاري] - [صحيح البخاري: 5991]
المزيــد ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
“ಸಂಬಂಧಿಕರು ಸಂಬಂಧ ಜೋಡಿಸಿದರೆ ಮಾತ್ರ ಸಂಬಂಧ ಜೋಡಿಸುವವನು ಕುಟುಂಬ ಸಂಬಂಧವನ್ನು ಕಾಪಾಡುವವನಲ್ಲ. ಬದಲಿಗೆ, ಸಂಬಂಧಿಕರು ಸಂಬಂಧವನ್ನು ಕಡಿದಾಗ ಅವರೊಡನೆ ಸಂಬಂಧ ಜೋಡಿಸುವವನೇ ಕುಟುಂಬ ಸಂಬಂಧವನ್ನು ಕಾಪಾಡುವವನು.”
[صحيح] - [رواه البخاري] - [صحيح البخاري - 5991]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ: ಸಂಬಂಧಿಕರು ಒಳಿತು ಮಾಡಿದರೆ ಮಾತ್ರ ಒಳಿತು ಮಾಡುವವನು, ಪೂರ್ಣ ರೂಪದಲ್ಲಿ ಕುಟುಂಬ ಸಂಬಂಧವನ್ನು ಜೋಡಿಸುವವನಲ್ಲ ಮತ್ತು ಸಂಬಂಧಿಕರಿಗೆ ಒಳಿತು ಮಾಡುವವನಲ್ಲ. ಬದಲಿಗೆ, ನಿಜವಾದ ಮತ್ತು ಪೂರ್ಣ ರೂಪದಲ್ಲಿ ಸಂಬಂಧ ಜೋಡಿಸುವವನು ಯಾರೆಂದರೆ, ಸಂಬಂಧಿಕನು ಸಂಬಂಧ ಕಡಿದರೂ ಅವನೊಂದಿಗೆ ಸಂಬಂಧ ಜೋಡಿಸುವವನು ಮತ್ತು ಸಂಬಂಧಿಕರು ಕೆಟ್ಟದಾಗಿ ವರ್ತಿಸಿದರೂ ಅವರೊಡನೆ ಉತ್ತಮವಾಗಿ ವರ್ತಿಸುವವನಾಗಿದ್ದಾನೆ.