عَنِ ابْنِ مَسْعُودٍ رضي الله عنه قَالَ: قَالَ رَسُولُ اللهِ صَلَّى اللَّهُ عَلَيْهِ وَسَلَّمَ:
«لَقِيتُ إِبْرَاهِيمَ لَيْلَةَ أُسْرِيَ بِي فَقَالَ: يَا مُحَمَّدُ، أَقْرِئْ أُمَّتَكَ مِنِّي السَّلاَمَ، وَأَخْبِرْهُمْ أَنَّ الجَنَّةَ طَيِّبَةُ التُّرْبَةِ عَذْبَةُ الْمَاءِ، وَأَنَّهَا قِيعَانٌ، وَأَنَّ غِرَاسَهَا سُبْحَانَ اللهِ وَالحَمْدُ لِلَّهِ وَلاَ إِلَهَ إِلاَّ اللَّهُ وَاللَّهُ أَكْبَرُ».
[حسن بشواهده] - [رواه الترمذي] - [سنن الترمذي: 3462]
المزيــد ...
ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನನ್ನನ್ನು ನಿಶಾಯಾತ್ರೆ (ಇಸ್ರಾ) ಮಾಡಿಸಲಾದ ರಾತ್ರಿ ನಾನು ಇಬ್ರಾಹೀಮ್ ರನ್ನು ಭೇಟಿಯಾದೆ. ಅವರು ಹೇಳಿದರು: "ಓ ಮುಹಮ್ಮದ್! ನನ್ನಿಂದ ನಿಮ್ಮ ಸಮುದಾಯಕ್ಕೆ ಸಲಾಂ ತಿಳಿಸಿರಿ. ಸ್ವರ್ಗದ ಮಣ್ಣು ಅತ್ಯಂತ ಶುದ್ಧವಾಗಿದೆ ಮತ್ತು ಅದರ ನೀರು ಅತ್ಯಂತ ಸಿಹಿಯಾಗಿದೆ, ಅದು ವಿಶಾಲ ಬಯಲು ಸೀಮೆಯಾಗಿದ್ದು ಅಲ್ಲಿನ ಸಸಿಗಳು ಸುಬ್‌ಹಾನಲ್ಲಾಹ್, ವಲ್-ಹಮ್ದುಲಿಲ್ಲಾಹ್, ವಲಾಇಲಾಹ ಇಲ್ಲಲ್ಲಾಹ್, ವಲ್ಲಾಹು ಅಕ್ಬರ್ ಆಗಿದೆಯೆಂದು ಅವರಿಗೆ ತಿಳಿಸಿರಿ."
[حسن بشواهده] - [رواه الترمذي] - [سنن الترمذي - 3462]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಇಸ್ರಾ ಮತ್ತು ಮಿಅರಾಜ್‌ನ ರಾತ್ರಿ ಅವರು ಇಬ್ರಾಹೀಮ್ (ಅವರ ಮೇಲೆ ಶಾಂತಿಯಿರಲಿ) ರನ್ನು ಭೇಟಿಯಾದರು. ಆಗ ಅವರು ಹೇಳಿದರು: "ಓ ಮುಹಮ್ಮದ್! ನನ್ನ ಕಡೆಯಿಂದ ನಿಮ್ಮ ಸಮುದಾಯಕ್ಕೆ ಸಲಾಂ ತಲುಪಿಸಿರಿ. ಸ್ವರ್ಗದ ಮಣ್ಣು ಅತ್ಯಂತ ಶುದ್ಧವಾಗಿದೆ, ಅದರ ನೀರು ಅತ್ಯಂತ ಸಿಹಿಯಾಗಿದೆ, ಅದು ಸ್ವಲ್ಪವೂ ಉಪ್ಪನ್ನು ಹೊಂದಿಲ್ಲ, ಸ್ವರ್ಗವು ವಿಶಾಲ ಬಯಲು ಸೀಮೆಯಾಗಿದ್ದು ಯಾವುದೇ ಮರಗಳಿಲ್ಲದ ಸಮತಟ್ಟಾದ ಪ್ರದೇಶವಾಗಿದೆ, ಅಲ್ಲಿನ ಸಸಿಗಳು ಪರಿಶುದ್ಧವಾದ ವಚನಗಳಾಗಿವೆ, ಅಂದರೆ ಎಂದೆಂದಿಗೂ ಶಾಶ್ವತವಾಗಿ ಉಳಿಯುವ ವಚನಗಳಾದ ಸುಬ್‌ಹಾನಲ್ಲಾಹಿ, ವಲ್‌ಹಂದುಲಿಲ್ಲಾಹಿ, ವಲಾಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್ ಆಗಿವೆ ಮತ್ತು ಮುಸಲ್ಮಾನನು ಇವುಗಳನ್ನು ಪುನರುಚ್ಛರಿಸುವಾಗಲೆಲ್ಲಾ ಸ್ವರ್ಗದಲ್ಲಿ ಒಂದು ಸಸಿಯನ್ನು ನೆಡುತ್ತಾನೆ ಎಂದು ಅವರಿಗೆ ತಿಳಿಸಿರಿ."