عَنْ أَنَسِ بْنِ مَالِكٍ رَضِيَ اللَّهُ عَنْهُ قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«انْصُرْ أَخَاكَ ظَالِمًا أَوْ مَظْلُومًا». فَقَالَ رَجُلٌ: يَا رَسُولَ اللَّهِ، أَنْصُرُهُ إِذَا كَانَ مَظْلُومًا، أَفَرَأَيْتَ إِذَا كَانَ ظَالِمًا كَيْفَ أَنْصُرُهُ؟ قَالَ: « تَحْجُزُهُ -أَوْ تَمْنَعُهُ- مِنَ الظُّلْمِ؛ فَإِنَّ ذَلِكَ نَصْرُهُ».
[صحيح] - [رواه البخاري] - [صحيح البخاري: 6952]
المزيــد ...
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿನ್ನ ಸಹೋದರನಿಗೆ ಸಹಾಯ ಮಾಡು, ಅವನು ಅನ್ಯಾಯ ಮಾಡುವವನಾಗಿದ್ದರೂ ಅಥವಾ ಅನ್ಯಾಯಕ್ಕೊಳಗಾದವನಾಗಿದ್ದರೂ ಸಹ". ಆಗ ಒಬ್ಬ ವ್ಯಕ್ತಿ ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಅವನು ಅನ್ಯಾಯಕ್ಕೊಳಗಾದವನಾಗಿದ್ದರೆ ನಾನು ಅವನಿಗೆ ಸಹಾಯ ಮಾಡುತ್ತೇನೆ. ಆದರೆ, ಅವನು ಅನ್ಯಾಯ ಮಾಡುವವನಾಗಿದ್ದರೆ ನಾನು ಅವನಿಗೆ ಹೇಗೆ ಸಹಾಯ ಮಾಡಲಿ ಎಂದು ತಿಳಿಸಿರಿ?" ಅವರು (ಪ್ರವಾದಿ) ಹೇಳಿದರು: "ನೀನು ಅವನನ್ನು ಅನ್ಯಾಯದಿಂದ ತಡೆಯುವುದು, ಖಂಡಿತವಾಗಿಯೂ, ಅದೇ ಅವನಿಗೆ ಮಾಡುವ ಸಹಾಯವಾಗಿದೆ".
[صحيح] - [رواه البخاري] - [صحيح البخاري - 6952]
ಮುಸ್ಲಿಂ ವ್ಯಕ್ತಿಯು ತನ್ನ ಸಹೋದರನಾದ ಮುಸ್ಲಿಮನಿಗೆ, ಅವನು ಅನ್ಯಾಯ ಮಾಡುವವನಾಗಿದ್ದರೂ ಅಥವಾ ಅನ್ಯಾಯಕ್ಕೊಳಗಾದವನಾಗಿದ್ದರೂ, ಸಹಾಯ ಮಾಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸಿದರು. ಆಗ ಒಬ್ಬ ವ್ಯಕ್ತಿ ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ಅವನು ಅನ್ಯಾಯಕ್ಕೊಳಗಾದವನಾಗಿದ್ದರೆ, ಅವನ ಮೇಲಿನ ಅನ್ಯಾಯವನ್ನು ದೂರ ಮಾಡುವ ಮೂಲಕ ನಾನು ಅವನಿಗೆ ಸಹಾಯ ಮಾಡುತ್ತೇನೆ. ಆದರೆ, ಅವನು ಅನ್ಯಾಯ ಮಾಡುವವನಾಗಿದ್ದರೆ ನಾನು ಅವನಿಗೆ ಸಹಾಯ ಮಾಡುವುದು ಹೇಗೆ ಎಂದು ತಿಳಿಸಿರಿ? ಅವರು (ಪ್ರವಾದಿ) ಹೇಳಿದರು: ನೀನು ಅವನನ್ನು ತಡೆಯುವುದು, ಅವನ ಕೈಗಳನ್ನು ಹಿಡಿಯುವುದು, ಅವನನ್ನು ತಡೆಗಟ್ಟುವುದು ಮತ್ತು ಅನ್ಯಾಯದಿಂದ ಅವನನ್ನು ದೂರವಿರಿಸುವುದು. ಖಂಡಿತವಾಗಿಯೂ, ಇದು ಅವನ ಪೈಶಾಚಿಕತೆ ಮತ್ತು ಕೆಡುಕನ್ನು ಪ್ರೇರೇಪಿಸುವ ಅವನ ಆತ್ಮದ ವಿರುದ್ಧ ಅವನಿಗೆ ಮಾಡುವ ಸಹಾಯವಾಗಿದೆ.