عَنْ صَفْوَانَ بْنِ مُحْرِزٍ قَالَ: قَالَ رَجُلٌ لِابْنِ عُمَرَ رضي الله عنهما كَيْفَ سَمِعْتَ رَسُولَ اللهِ صَلَّى اللهُ عَلَيْهِ وَسَلَّمَ، يَقُولُ: فِي النَّجْوَى؟ قَالَ: سَمِعْتُهُ يَقُولُ:
«يُدْنَى الْمُؤْمِنُ يَوْمَ الْقِيَامَةِ مِنْ رَبِّهِ عَزَّ وَجَلَّ، حَتَّى يَضَعَ عَلَيْهِ كَنَفَهُ، فَيُقَرِّرُهُ بِذُنُوبِهِ، فَيَقُولُ: هَلْ تَعْرِفُ؟ فَيَقُولُ: أَيْ رَبِّ أَعْرِفُ، قَالَ: فَإِنِّي قَدْ سَتَرْتُهَا عَلَيْكَ فِي الدُّنْيَا، وَإِنِّي أَغْفِرُهَا لَكَ الْيَوْمَ، فَيُعْطَى صَحِيفَةَ حَسَنَاتِهِ، وَأَمَّا الْكُفَّارُ وَالْمُنَافِقُونَ، فَيُنَادَى بِهِمْ عَلَى رؤُوسِ الْخَلَائِقِ هَؤُلَاءِ الَّذِينَ كَذَبُوا عَلَى اللهِ».
[صحيح] - [متفق عليه] - [صحيح مسلم: 2768]
المزيــد ...
ಸಫ್ವಾನ್ ಬಿನ್ ಮುಹ್ರಿಝ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಬ್ಬ ವ್ಯಕ್ತಿ ಇಬ್ನ್ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಕೇಳಿದರು: "ರಹಸ್ಯ ಸಂಭಾಷಣೆಯ ಬಗ್ಗೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏನು ಹೇಳುವುದನ್ನು ನೀವು ಕೇಳಿದ್ದೀರಿ?" ಅವರು ಉತ್ತರಿಸಿದರು: "ಅವರು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯನ್ನು ಅವನ ಪರಿಪಾಲಕನ (ಅಲ್ಲಾಹನ) ಹತ್ತಿರಕ್ಕೆ ತರಲಾಗುವುದು. ಆಗ ಅವನು ಆತನ ಮೇಲೆ ತನ್ನ ಪರದೆಯನ್ನು ಹಾಕುವನು. ನಂತರ ಆತ ತನ್ನ ಪಾಪಗಳನ್ನು ಒಪ್ಪಿಕೊಳ್ಳುವಂತೆ ಮಾಡುವನು. ನಂತರ ಅಲ್ಲಾಹು ಹೇಳುವನು: "ನೀನು (ನಿನ್ನ ಪಾಪಗಳನ್ನು) ಗುರುತಿಸುತ್ತೀಯಾ?" ಆತ ಉತ್ತರಿಸುವನು: "ಹೌದು, ನನ್ನ ಪರಿಪಾಲಕನೇ ನಾನು ಗುರುತಿಸುತ್ತೇನೆ." ಅಲ್ಲಾಹು ಹೇಳುವನು: "ಇಹಲೋಕದಲ್ಲಿ ನಾನು ಈ ಪಾಪಗಳನ್ನು ಯಾರಿಗೂ ತಿಳಿಯದಂತೆ ಮುಚ್ಚಿಟ್ಟಿದ್ದೆ. ಮತ್ತು ಇಂದು ನಾನು ನಿನಗೆ ಅದನ್ನು ಕ್ಷಮಿಸುತ್ತೇನೆ." ನಂತರ ಅವನ ಪುಣ್ಯಗಳ ಪುಸ್ತಕವನ್ನು ಅವನಿಗೆ ನೀಡಲಾಗುವುದು. ಆದರೆ ಸತ್ಯನಿಷೇಧಿಗಳು ಮತ್ತು ಕಪಟವಿಶ್ವಾಸಿಗಳ ಬಗ್ಗೆ ಹೇಳುವುದಾದರೆ, ಅವರನ್ನು ಸೃಷ್ಟಿಗಳೆಲ್ಲರ ಮುಂದೆ ಕರೆದು ಘೋಷಿಸಲಾಗುವುದು: "ಇವರೇ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳಿದವರು."
[صحيح] - [متفق عليه] - [صحيح مسلم - 2768]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪುನರುತ್ಥಾನ ದಿನದಂದು ಅಲ್ಲಾಹು ತನ್ನ ದಾಸನೊಂದಿಗೆ ನಡೆಸುವ ರಹಸ್ಯ ಸಂಭಾಷಣೆಯ ಬಗ್ಗೆ ತಿಳಿಸುತ್ತಾ ಹೇಳುತ್ತಾರೆ:
ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಯನ್ನು ಅವನ ಪರಿಪಾಲಕನ (ಅಲ್ಲಾಹನ) ಹತ್ತಿರಕ್ಕೆ ತರಲಾಗುವುದು. ಆಗ ಅಲ್ಲಾಹು ಅಲ್ಲಿ ನೆರೆದ ಜನರ ಕಣ್ಣುಗಳಿಂದ ಅವನನ್ನು ಮುಚ್ಚಿಡಲು ಮತ್ತು ಅವನ ರಹಸ್ಯವನ್ನು ಯಾರೂ ತಿಳಿಯದಿರಲು ತನ್ನ ಪರದೆಯನ್ನು ಅವನ ಮೇಲೆ ಹಾಕುವನು. ನಂತರ ಅವನೊಡನೆ ಕೇಳುವನು:
"ಇಂತಿಂತಹ ಪಾಪದ ಬಗ್ಗೆ ನಿನಗೆ ತಿಳಿದಿದೆಯೇ... ದಾಸ ಮತ್ತು ಅಲ್ಲಾಹನಿಗೆ ಸಂಬಂಧಿಸಿದ ಪಾಪಗಳನ್ನು ಅವನು ಒಪ್ಪಿಕೊಳ್ಳುವಂತೆ ಮಾಡುವನು.
ಆತ ಉತ್ತರಿಸುವನು: ಹೌದು, ನನ್ನ ಪರಿಪಾಲಕನೇ.
ಸತ್ಯವಿಶ್ವಾಸಿಯು ಗಾಬರಿಗೊಂಡು ಭಯಭೀತನಾದಾಗ, ಅಲ್ಲಾಹು ಹೇಳುವನು: ನಾನು ಈ ಪಾಪಗಳನ್ನು ನಿನಗಾಗಿ ಇಹಲೋಕದಲ್ಲಿ ಮುಚ್ಚಿಟ್ಟಿದ್ದೆ. ಇಂದು ನಾನು ನಿನಗೆ ಅವುಗಳನ್ನು ಕ್ಷಮಿಸುತ್ತೇನೆ. ನಂತರ ಅವನ ಪುಣ್ಯಗಳ ಪುಸ್ತಕವನ್ನು ಅವನಿಗೆ ನೀಡಲಾಗುವುದು.
ಆದರೆ ಸತ್ಯನಿಷೇಧಿಗಳು ಮತ್ತು ಕಪಟವಿಶ್ವಾಸಿಗಳ ಬಗ್ಗೆ ಹೇಳುವುದಾದರೆ, ಅವರನ್ನು ಅಲ್ಲಿ ನೆರೆದವರೆಲ್ಲರ ಮುಂದೆ ಕೂಗಿ ಕರೆದು ಘೋಷಿಸಲಾಗುವುದು: ಇವರೇ ತಮ್ಮ ಪರಿಪಾಲಕನ ಹೆಸರಲ್ಲಿ ಸುಳ್ಳು ಹೇಳಿದವರು. ತಿಳಿಯಿರಿ! ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿರಲಿ.