عَن أَبِي هُرَيْرَةَ رضي الله عنه قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«يُسَلِّمُ الرَّاكِبُ عَلَى المَاشِي، وَالمَاشِي عَلَى القَاعِدِ، وَالقَلِيلُ عَلَى الكَثِيرِ».
وَلِلبُخَارِي: «يُسَلِّمُ الصَّغِيرُ عَلَى الكَبِيرِ، وَالمَارُّ عَلَى القَاعِدِ، وَالقَلِيلُ عَلَى الكَثِيرِ».
[صحيح] - [متفق عليه] - [صحيح البخاري: 6232]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸವಾರಿ ಮಾಡುವವನು ಪಾದಚಾರಿಗೆ ಸಲಾಂ ಹೇಳಬೇಕು, ಪಾದಚಾರಿ ಕುಳಿತಿರುವವನಿಗೆ ಸಲಾಂ ಹೇಳಬೇಕು ಮತ್ತು ಸಣ್ಣ ಗುಂಪಿನ ಜನರು ದೊಡ್ಡ ಗುಂಪಿನ ಜನರಿಗೆ ಸಲಾಂ ಹೇಳಬೇಕು."
[صحيح] - [متفق عليه] - [صحيح البخاري - 6232]
ಜನರಿಗೆ "ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು" ಎಂದು ಸಲಾಂ ಹೇಳುವುದರ ಶಿಷ್ಟಾಚಾರವನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕಲಿಸುತ್ತಿದ್ದಾರೆ. ಕಿರಿಯರು ಹಿರಿಯರಿಗೆ ಸಲಾಂ ಹೇಳಬೇಕು, ಸವಾರಿ ಮಾಡುವವನು ಪಾದಚಾರಿಗೆ ಸಲಾಂ ಹೇಳಬೇಕು, ಪಾದಚಾರಿ ಕುಳಿತಿರುವವನಿಗೆ ಸಲಾಂ ಹೇಳಬೇಕು, ಸಣ್ಣ ಸಂಖ್ಯೆಯ ಜನರು ದೊಡ್ಡ ಸಂಖ್ಯೆಯ ಜನರಿಗೆ ಸಲಾಂ ಹೇಳಬೇಕು.