عَنِ النُّعْمَانِ بْنِ بَشِيرٍ رَضِيَ اللَّهُ عَنْهُ قَالَ:
أَلَسْتُمْ فِي طَعَامٍ وَشَرَابٍ مَا شِئْتُمْ؟ لَقَدْ رَأَيْتُ نَبِيَّكُمْ صَلَّى اللهُ عَلَيْهِ وَسَلَّمَ وَمَا يَجِدُ مِنَ الدَّقَلِ مَا يَمْلَأُ بِهِ بَطْنَهُ.
[صحيح] - [رواه مسلم] - [صحيح مسلم: 2977]
المزيــد ...
ನುಅಮಾನ್ ಇಬ್ನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು (ಜನರನ್ನು ಸಂಬೋಧಿಸಿ) ಹೇಳಿದರು:
"ನೀವು ಬಯಸಿದಷ್ಟು ಆಹಾರ ಮತ್ತು ಪಾನೀಯ (ಅದನ್ನು ಹೊಂದುವ ಸ್ಥಿತಿಯಲ್ಲಿ) ಇಲ್ಲವೇ? ಖಂಡಿತವಾಗಿಯೂ ನಾನು ನಿಮ್ಮ ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದ್ದೇನೆ. ಅವರಿಗೆ ತಮ್ಮ ಹೊಟ್ಟೆಯನ್ನು ತುಂಬಿಸಲು ಕಳಪೆ ದರ್ಜೆಯ ಖರ್ಜೂರ ಕೂಡ ದೊರೆಯುತ್ತಿರಲಿಲ್ಲ".
[صحيح] - [رواه مسلم] - [صحيح مسلم - 2977]
ನುಅಮಾನ್ ಇಬ್ನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು ಜನರಿಗೆ, ಅವರಿಗೆ ನೀಡಲಾಗಿರುವ ಅನುಗ್ರಹದ ಸ್ಥಿತಿಯನ್ನು ನೆನಪಿಸುತ್ತಾ ಹೇಳುವುದೇನೆಂದರೆ, ಅವರು ಬಯಸಿದಷ್ಟು ಪ್ರಮಾಣದಲ್ಲಿ ಆಹಾರ ಮತ್ತು ಪಾನೀಯದಲ್ಲಿ (ಅದನ್ನು ಹೊಂದುವ ಸ್ಥಿತಿಯಲ್ಲಿ) ಅವರು ಇದ್ದಾರೆ. ನಂತರ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ಥಿತಿಯ ಬಗ್ಗೆ ತಿಳಿಸುತ್ತಾ, ಪ್ರವಾದಿಯವರಿಗೆ ಹಸಿವಿನಿಂದ ತಮ್ಮ ಹೊಟ್ಟೆಯನ್ನು ತುಂಬಿಸಲು ಕಳಪೆ ದರ್ಜೆಯ ಖರ್ಜೂರ ಕೂಡ ದೊರೆಯುತ್ತಿರಲಿಲ್ಲ ಎಂದು ಹೇಳುತ್ತಾರೆ.