عَنْ أَبِي هُرَيْرَةَ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«إِنَّ اللَّهَ تَجَاوَزَ عَنْ أُمَّتِي مَا حَدَّثَتْ بِهِ أَنْفُسَهَا، مَا لَمْ تَعْمَلْ أَوْ تَتَكَلَّمْ».
[صحيح] - [متفق عليه] - [صحيح البخاري: 5269]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನನ್ನ ಸಮುದಾಯಕ್ಕೆ ಅವರ ಮನದಲ್ಲಿ ಮೂಡುವ ದುರ್ವಿಚಾರಗಳನ್ನು, ಅವರು ಅವುಗಳನ್ನು ಕಾರ್ಯಗತಗೊಳಿಸದಿರುವ ತನಕ ಅಥವಾ ಮಾತನಾಡದಿರುವ ತನಕ ಅಲ್ಲಾಹು ಕ್ಷಮಿಸಿದ್ದಾನೆ."
[صحيح] - [متفق عليه] - [صحيح البخاري - 5269]
ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಬ್ಬ ಮುಸಲ್ಮಾನನ ಮನಸ್ಸಿನಲ್ಲಿ ಉಂಟಾಗುವ ದುಷ್ಟ ಯೋಚನೆಗಳಿಗಾಗಿ, ಅವನು ಅದನ್ನು ಕಾರ್ಯಗತಗೊಳಿಸದಿರುವ ತನಕ ಅಥವಾ ಮಾತನಾಡದಿರುವ ತನಕ ಅಲ್ಲಾಹು ಅವನನ್ನು ಶಿಕ್ಷಿಸುವುದಿಲ್ಲ. ಏಕೆಂದರೆ, ಅಲ್ಲಾಹು ಆ ಕಷ್ಟವನ್ನು ನಿವಾರಿಸಿ ಕ್ಷಮಿಸಿದ್ದಾನೆ. ಅವನು ಮುಹಮ್ಮದರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮುದಾಯವನ್ನು ಅವರ ಮನಸ್ಸಿನಲ್ಲಿ ಉಂಟಾಗುವ ಸಂಶಯಗಳಿಗಾಗಿ, ಅವು ಅವರ ಮನಸ್ಸಿನಲ್ಲಿ ದೃಢವಾಗಿ ನೆಲೆಯೂರಿ ಅವರು ಅವುಗಳ ಬಗ್ಗೆ ನಿಶ್ಚಿಂತರಾಗುವ ತನಕ ಶಿಕ್ಷಿಸುವುದಿಲ್ಲ. ಆದರೆ, ಅಹಂಕಾರ, ಅಹಂಭಾವ, ಕಾಪಟ್ಯಗಳಂತೆ ಅವು ಅವರ ಮನಸ್ಸಿನಲ್ಲಿ ದೃಢವಾಗಿ ನೆಲೆಯೂರಿದರೆ, ಅಥವಾ ಅವು ಅವರ ಅಂಗಾಂಗಗಳಿಂದ ಪ್ರಕಟವಾದರೆ, ಅಥವಾ ಅವರ ಮಾತಿನಿಂದ ಹೊರಹೊಮ್ಮಿದರೆ ಅಲ್ಲಾಹು ಅವರನ್ನು ಅದಕ್ಕಾಗಿ ಶಿಕ್ಷಿಸುತ್ತಾನೆ.