عن علي رضي الله عنه عن النبي صلى الله عليه وسلم قال:
«رُفِعَ الْقَلَمُ عن ثلاثة: عن النائم حتى يَسْتَيْقِظَ، وعن الصبي حتى يَحْتَلِمَ، وعن المجنون حتى يَعْقِلَ».
[صحيح] - [رواه أبو داود والترمذي والنسائي في الكبرى وابن ماجه وأحمد] - [سنن أبي داود: 4403]
المزيــد ...
ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಮೂರು ಜನರ ಬಗ್ಗೆ ಲೇಖನಿಯನ್ನು ಎತ್ತಲಾಗಿದೆ. ನಿದ್ರೆ ಮಾಡುವವನು ಎದ್ದೇಳುವ ತನಕ, ಮಗು ಪ್ರೌಢನಾಗುವ ತನಕ ಮತ್ತು ಮಾನಸಿಕ ಅಸ್ವಸ್ಥನು ಸ್ವಸ್ಥ ಬುದ್ಧಿಯವನಾಗುವ ತನಕ."
[صحيح] - [رواه أبو داود والترمذي والنسائي في الكبرى وابن ماجه وأحمد] - [سنن أبي داود - 4403]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮನುಷ್ಯರ ಪೈಕಿ ಮೂರು ವಿಧ ಜನರ ಹೊರತು ಇತರ ಎಲ್ಲರೂ ಧರ್ಮ ನಿಯಮಗಳನ್ನು ಪಾಲಿಸಲು ಬದ್ಧರಾಗಿದ್ದಾರೆ.
ಮಗು ಬೆಳೆದು ಪ್ರೌಢನಾಗುವ ತನಕ.
ಬುದ್ಧಿ ಸ್ತಿಮಿತವನ್ನು ಕಳಕೊಂಡ ಮಾನಸಿಕ ಅಸ್ವಸ್ಥನು ಪುನಃ ಮಾನಸಿಕವಾಗಿ ಸ್ವಸ್ಥನಾಗುವ ತನಕ.
ನಿದ್ರೆ ಮಾಡುವವನು ಎಚ್ಚರವಾಗಿ ಎದ್ದೇಳುವ ತನಕ.
ಇವರು ಧರ್ಮ ನಿಯಮಗಳನ್ನು ಪಾಲಿಸಬೇಕಾಗಿಲ್ಲ. ಇವರು ಮಾಡುವ ಪಾಪಕೃತ್ಯಗಳನ್ನು ದಾಖಲಿಸಲಾಗುವುದಿಲ್ಲ. ಆದರೆ ಮಕ್ಕಳು ಮಾಡುವ ಸತ್ಕರ್ಮಗಳನ್ನು ದಾಖಲಿಸಲಾಗುತ್ತದೆ. ಮಾನಸಿಕ ಅಸ್ವಸ್ಥರು ಮತ್ತು ನಿದ್ರೆ ಮಾಡುವವರು ಮಾಡುವ ಸತ್ಕರ್ಮಗಳನ್ನು ದಾಖಲಿಸಲಾಗುವುದಿಲ್ಲ. ಏಕೆಂದರೆ, ಅವರು ಪ್ರಜ್ಞಾಶೂನ್ಯರಾಗಿದ್ದು ಆರಾಧನೆಗಳು ಸಿಂಧುವಾಗದ ಸ್ಥಿತಿಯಲ್ಲಿದ್ದಾರೆ.