عَنْ أَبِي هُرَيْرَةَ رضي الله عنه قَالَ: قَالَ النَّبِيُّ صَلَّى اللهُ عَلَيْهِ وَسَلَّمَ:
«لاَ يُصَلِّي أَحَدُكُمْ فِي الثَّوْبِ الوَاحِدِ لَيْسَ عَلَى عَاتِقَيْهِ شَيْءٌ».
[صحيح] - [متفق عليه] - [صحيح البخاري: 359]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲಿ ಯಾರೂ ಕೂಡ ಒಂದೇ ವಸ್ತ್ರದಲ್ಲಿ ತಮ್ಮ ಭುಜಗಳ ಮೇಲೆ ಏನೂ ಇಲ್ಲದೆ ನಮಾಝ್ ಮಾಡಬಾರದು."
[صحيح] - [متفق عليه] - [صحيح البخاري - 359]
ಒಂದೇ ವಸ್ತ್ರದಲ್ಲಿ ನಮಾಝ್ ಮಾಡುವವರು ತಮ್ಮ ಭುಜಗಳನ್ನು ತೆರೆದಿಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಅಂದರೆ ಹೆಗಲು ಮತ್ತು ಕುತ್ತಿಗೆಯ ನಡುವಿನ ಭಾಗದ ಮೇಲೆ ಅವುಗಳನ್ನು ಮುಚ್ಚುವಂತಹ ಏನನ್ನೂ ಹಾಕದೆ ಇರುವುದನ್ನು. ಏಕೆಂದರೆ ಭುಜಗಳು ಔರತ್ (ಮುಚ್ಚಬೇಕಾದ ಖಾಸಗಿ ಭಾಗ) ಅಲ್ಲದಿದ್ದರೂ, ಅವುಗಳನ್ನು ಮುಚ್ಚುವುದು ಔರತ್ ಅನ್ನು ಮುಚ್ಚುವಲ್ಲಿ ಹೆಚ್ಚು ಪರಿಪೂರ್ಣವಾಗಿದೆ. ಇದು ನಮಾಝ್‌ನಲ್ಲಿ ಅಲ್ಲಾಹನ ಮುಂದೆ ನಿಲ್ಲುವಾಗ ಅವನನ್ನು ಮಹಿಮೆಪಡಿಸಲು ಮತ್ತು ಅವನಿಗೆ ಗೌರವವನ್ನು ಸಲ್ಲಿಸಲು ಹೆಚ್ಚು ಹತ್ತಿರವಾಗಿದೆ.