عَنْ وَحْشِيِّ بْنِ حَرْبٍ رَضيَ اللهُ عنه:
أَنَّهُمْ قَالُوا: يَا رَسُولَ اللَّهِ، إِنَّا نَأْكُلُ وَلَا نَشْبَعُ، قَالَ: «فَلَعَلَّكُمْ تَأْكُلُونَ مُتَفَرِّقِينَ؟» قَالُوا: نَعَمْ. قَالَ: «فَاجْتَمِعُوا عَلَى طَعَامِكُمْ، وَاذْكُرُوا اسْمَ اللَّهِ عَلَيْهِ، يُبَارَكْ لَكُمْ فِيهِ».
[حسن] - [رواه أبو داود وابن ماجه وأحمد] - [سنن ابن ماجه: 3764]
المزيــد ...
ವಹ್ಶೀ ಇಬ್ನ್ ಹರ್ಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಅವರು (ಸಹಾಬಿಗಳು) ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಖಂಡಿತವಾಗಿಯೂ ನಾವು ತಿನ್ನುತ್ತೇವೆ, ಆದರೆ ನಮಗೆ ಹೊಟ್ಟೆ ತುಂಬುವುದಿಲ್ಲ". ಅವರು (ಪ್ರವಾದಿ) ಹೇಳಿದರು: "ಬಹುಶಃ ನೀವು ಬೇರೆ ಬೇರೆಯಾಗಿ ತಿನ್ನುತ್ತೀರಾ?". ಅವರು (ಸಹಾಬಿಗಳು) ಹೇಳಿದರು: "ಹೌದು". ಅವರು (ಪ್ರವಾದಿ) ಹೇಳಿದರು: "ನೀವು ನಿಮ್ಮ ಆಹಾರವನ್ನು ಒಟ್ಟುಗೂಡಿ ಸೇವಿಸಿರಿ, ಮತ್ತು ಅದರ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಿರಿ. ನಿಮಗೆ ಅದರಲ್ಲಿ ಬರಕತ್ (ಸಮೃದ್ಧಿ) ನೀಡಲಾಗುವುದು".
[حسن] - [رواه أبو داود وابن ماجه وأحمد] - [سنن ابن ماجه - 3764]
ಕೆಲವು ಸಹಾಬಿಗಳು ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಾವು ತಿನ್ನುತ್ತೇವೆ, ಆದರೆ ನಮಗೆ ಹೊಟ್ಟೆ ತುಂಬುವುದಿಲ್ಲ.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಹೇಳಿದರು: ಬಹುಶಃ ನೀವು ಊಟ ಮಾಡುವಾಗ ಬೇರೆ ಬೇರೆಯಾಗುತ್ತೀರಿ; ಪ್ರತಿಯೊಬ್ಬನೂ ಒಂಟಿಯಾಗಿ ತಿನ್ನುತ್ತಾನೆಯೇ? ಅವರು ಹೇಳಿದರು: ಹೌದು. ಪ್ರವಾದಿಯವರು ಹೇಳಿದರು: ಹಾಗಾದರೆ ಒಟ್ಟುಗೂಡಿರಿ ಮತ್ತು ಬೇರೆ ಬೇರೆಯಾಗಿ ತಿನ್ನಬೇಡಿ, ಮತ್ತು ಊಟದ ಆರಂಭದಲ್ಲಿ 'ಬಿಸ್ಮಿಲ್ಲಾಹ್' ಎಂದು ಹೇಳುವ ಮೂಲಕ ಅಲ್ಲಾಹನ ಹೆಸರನ್ನು ಉಚ್ಛರಿಸಿರಿ. ನಿಮಗೆ ಅದರಲ್ಲಿ ಬರಕತ್ ನೀಡಲಾಗುವುದು ಮತ್ತು ನಿಮಗೆ ಹೊಟ್ಟೆ ತುಂಬುವುದು.