+ -

عَنِ ابْنِ عُمَرَ رضي الله عنهما أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«أُمِرْتُ أَنْ أُقَاتِلَ النَّاسَ حَتَّى يَشْهَدُوا أَنْ لاَ إِلَهَ إِلَّا اللَّهُ، وَأَنَّ مُحَمَّدًا رَسُولُ اللَّهِ، وَيُقِيمُوا الصَّلاَةَ، وَيُؤْتُوا الزَّكَاةَ، فَإِذَا فَعَلُوا ذَلِكَ عَصَمُوا مِنِّي دِمَاءَهُمْ وَأَمْوَالَهُمْ إِلَّا بِحَقِّ الإِسْلاَمِ، وَحِسَابُهُمْ عَلَى اللَّهِ».

[صحيح] - [متفق عليه] - [صحيح البخاري: 25]
المزيــد ...

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುವ, ನಮಾಝ್ ಸಂಸ್ಥಾಪಿಸುವ ಮತ್ತು ಝಕಾತ್ ನೀಡುವ ತನಕ ಜನರೊಂದಿಗೆ ಹೋರಾಡಲು ನನಗೆ ಆಜ್ಞಾಪಿಸಲಾಗಿದೆ. ಅವರು ಇವುಗಳನ್ನು ಮಾಡಿದರೆ, ಅವರು ನನ್ನಿಂದ ಅವರ ರಕ್ತ ಮತ್ತು ಸಂಪತ್ತನ್ನು ರಕ್ಷಿಸಿದರು. ಆದರೆ ಇಸ್ಲಾಮಿನ ಹಕ್ಕಿನ ಹೊರತು. ಅವರ ವಿಚಾರಣೆ ಮಾಡಬೇಕಾದ ಹೊಣೆ ಅಲ್ಲಾಹನದ್ದು."

[صحيح] - [متفق عليه] - [صحيح البخاري - 25]

ವಿವರಣೆ

ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ,ಬಹುದೇವವಿಶ್ವಾಸಿಗಳು ಅಲ್ಲಾಹನ ಹೊರತು ಆರಾಧನೆಗೆ ನೈಜ ಅರ್ಹತೆಯಿರುವ ಬೇರೆ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು ಎಂದು ಸಾಕ್ಷ್ಯವಹಿಸುವ ತನಕ ಮತ್ತು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಪ್ರವಾದಿತ್ವಕ್ಕೆ ಸಾಕ್ಷ್ಯವಹಿಸುವ ತನಕ, ಮತ್ತು ಈ ಸಾಕ್ಷ್ಯಕ್ಕೆ ಬದ್ಧವಾಗಿ ದಿನ-ರಾತ್ರಿಗಳಲ್ಲಿ ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸುವ ಮತ್ತು ಕಡ್ಡಾಯ ಝಕಾತನ್ನು ಅದರ ಹಕ್ಕುದಾರರಿಗೆ ನೀಡುವ ತನಕ ಅವರೊಡನೆ ಹೋರಾಡಲು ಅಲ್ಲಾಹು ಪ್ರವಾದಿಯವರಿಗೆ ಆಜ್ಞಾಪಿಸಿದ್ದಾನೆ. ಅವರು ಈ ಕಾರ್ಯಗಳನ್ನು ನೆರವೇರಿಸಿದರೆ, ಇಸ್ಲಾಂ ಧರ್ಮವು ಅವರ ರಕ್ತ ಮತ್ತು ಆಸ್ತಿಗಳನ್ನು ರಕ್ಷಿಸುತ್ತದೆ. ಆದರೆ ಅವರು ಇಸ್ಲಾಮಿ ನಿಯಮಗಳ ಪ್ರಕಾರ ಮರಣದಂಡನೆಗೆ ಅರ್ಹವಾಗುವ ಯಾವುದಾದರೂ ಅಪರಾಧ ಅಥವಾ ಪಾತಕಗಳನ್ನು ಎಸಗಿದರೆ ಹೊರತು. ನಂತರ ಪುನರುತ್ಥಾನ ದಿನದಂದು ಅಲ್ಲಾಹು ಅವರನ್ನು ವಿಚಾರಣೆ ಮಾಡುವನು. ಏಕೆಂದರೆ ಅವರ ಆಂತರಿಕ ವಿಚಾರಗಳ ಬಗ್ಗೆ ಅವನಿಗೆ ಚೆನ್ನಾಗಿ ತಿಳಿದಿದೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الدرية الصربية الصومالية الكينياروندا الرومانية التشيكية المالاجاشية الأورومو
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಬಾಹ್ಯ ಕರ್ಮಗಳ ಆಧಾರದಲ್ಲಿ ತೀರ್ಪು ನೀಡಲಾಗುತ್ತದೆ. ಆಂತರಿಕ ವಿಷಯಗಳನ್ನು ಅಲ್ಲಾಹನಿಗೆ ಬಿಟ್ಟುಬಿಡಲಾಗುತ್ತದೆ.
  2. ಏಕದೇವವಿಶ್ವಾಸದ ಕಡೆಗೆ ಆಮಂತ್ರಿಸುವುದರ ಪ್ರಾಮುಖ್ಯತೆಯನ್ನು ಮತ್ತು ಆಮಂತ್ರಿಸುವಾಗ ಮೊತ್ತಮೊದಲು ಏಕದೇವಾರಾಧನೆಯನ್ನು ಬೋಧಿಸುವುದರಿಂದಲೇ ಆರಂಭಿಸಬೇಕೆಂದು ತಿಳಿಸಲಾಗಿದೆ.
  3. ಬಹುದೇವವಿಶ್ವಾಸಿಗಳನ್ನು ಬಲವಂತದಿಂದ ಇಸ್ಲಾಮಿಗೆ ಸೇರಿಸಬೇಕೆಂದು ಈ ಹದೀಸಿನ ಅರ್ಥವಲ್ಲ. ಬದಲಿಗೆ ಅವರಿಗೆ ಇಸ್ಲಾಂ ಸ್ವೀಕರಿಸುವ ಅಥವಾ ಜಿಝ್ಯ (ತೆರಿಗೆ) ನೀಡುವ ಆಯ್ಕೆಯಿದೆ. ಆದರೆ ಅವರು ಎರಡನ್ನೂ ಒಪ್ಪಿಕೊಳ್ಳದೆ ಇಸ್ಲಾಮಿ ಆಮಂತ್ರಣವನ್ನು ವಿರೋಧಿಸಿದರೆ ಇಸ್ಲಾಮಿ ನಿಯಮಗಳ ಪ್ರಕಾರ ಅವರೊಡನೆ ಯುದ್ಧ ಮಾಡಬಹುದು.
ಇನ್ನಷ್ಟು