عَنْ لَقِيطِ بْنِ صَبِرَةَ رَضيَ اللهُ عنه قَالَ:
كُنْتُ وَافِدَ بَنِي الْمُنْتَفِقِ -أَوْ فِي وَفْدِ بَنِي الْمُنْتَفِقِ- إِلَى رَسُولِ اللَّهِ صَلَّى اللهُ عَلَيْهِ وَسَلَّمَ، قَالَ: فَلَمَّا قَدِمْنَا عَلَى رَسُولِ اللَّهِ صَلَّى اللهُ عَلَيْهِ وَسَلَّمَ، فَلَمْ نُصَادِفْهُ فِي مَنْزِلِهِ، وَصَادَفْنَا عَائِشَةَ أُمَّ الْمُؤْمِنِينَ، قَالَ: فَأَمَرَتْ لَنَا بِخَزِيرَةٍ، فَصُنِعَتْ لَنَا، قَالَ: وَأُتِينَا بِقِنَاعٍ -وَالْقِنَاعُ: الطَّبَقُ فِيهِ تَمْرٌ- ثُمَّ جَاءَ رَسُولُ اللَّهِ صَلَّى اللهُ عَلَيْهِ وَسَلَّمَ، فَقَالَ: «هَلْ أَصَبْتُمْ شَيْئًا؟ أَوْ أُمِرَ لَكُمْ بِشَيْءٍ؟» قَالَ: قُلْنَا: نَعَمْ، يَا رَسُولَ اللَّهِ، قَالَ: فَبَيْنَا نَحْنُ مَعَ رَسُولِ اللَّهِ صَلَّى اللهُ عَلَيْهِ وَسَلَّمَ جُلُوسٌ، إِذْ دَفَعَ الرَّاعِي غَنَمَهُ إِلَى الْمُرَاحِ، وَمَعَهُ سَخْلَةٌ تَيْعَرُ، فَقَالَ: «مَا وَلَّدْتَ يَا فُلَانُ؟»، قَالَ: بَهْمَةً، قَالَ: «فَاذْبَحْ لَنَا مَكَانَهَا شَاةً»، ثُمَّ قَالَ: «لَا تَحْسِبَنَّ» وَلَمْ يَقُلْ: لَا تَحْسَبَنَّ «أَنَّا مِنْ أَجْلِكَ ذَبَحْنَاهَا، لَنَا غَنَمٌ مِائَةٌ لَا نُرِيدُ أَنْ تَزِيدَ، فَإِذَا وَلَّدَ الرَّاعِي بَهْمَةً، ذَبَحْنَا مَكَانَهَا شَاةً» قَالَ: قُلْتُ: يَا رَسُولَ اللَّهِ، إِنَّ لِي امْرَأَةً وَإِنَّ فِي لِسَانِهَا شَيْئًا -يَعْنِي الْبَذَاءَ- قَالَ: «فَطَلِّقْهَا إِذن»، قَالَ: قُلْتُ: يَا رَسُولَ اللَّهِ إِنَّ لَهَا صُحْبَةً، وَلِي مِنْهَا وَلَدٌ، قَالَ: «فَمُرْهَا» يَقُولُ: عِظْهَا، «فَإِنْ يَكُ فِيهَا خَيْرٌ فَسَتَفْعَلْ، وَلَا تَضْرِبْ ظَعِينَتَكَ كَضَرْبِكَ أُمَيَّتَكَ» فَقُلْتُ: يَا رَسُولَ اللَّهِ، أَخْبِرْنِي عَنِ الْوُضُوءِ، قَالَ: «أَسْبِغِ الْوُضُوءَ، وَخَلِّلْ بَيْنَ الْأَصَابِعِ، وَبَالِغْ فِي الِاسْتِنْشَاقِ إِلَّا أَنْ تَكُونَ صَائِمًا».

[صحيح] - [رواه أبو داود والترمذي والنسائي وابن ماجه] - [سنن أبي داود: 142]
المزيــد ...

ಲಖೀತ್ ಇಬ್ನ್ ಸಬಿರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ನಾನು ಬನೂ ಮುಂತಫಿಖ್ ಗೋತ್ರದ ನಿಯೋಗಿಯಾಗಿ - ಅಥವಾ ಬನೂ ಮುಂತಫಿಖ್‌ನ ನಿಯೋಗದಲ್ಲಿ - ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದೆನು. ಅವರು (ಲಖೀತ್) ಹೇಳಿದರು: ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಅವರು ತಮ್ಮ ಮನೆಯಲ್ಲಿ ನಮಗೆ ಸಿಗಲಿಲ್ಲ. ನಮಗೆ ಸತ್ಯವಿಶ್ವಾಸಿಗಳ ಮಾತೆ ಆಯಿಷಾ ಸಿಕ್ಕರು. ಅವರು (ಲಖೀತ್) ಹೇಳಿದರು: ಆಗ ಅವರು ನಮಗಾಗಿ 'ಖಝೀರಾ' (ಮಾಂಸ ಮತ್ತು ಹಿಟ್ಟಿನಿಂದ ಮಾಡಿದ ಒಂದು ರೀತಿಯ ಸೂಪ್) ತಯಾರಿಸಲು ಆದೇಶಿಸಿದರು. ಅದನ್ನು ನಮಗಾಗಿ ತಯಾರಿಸಲಾಯಿತು. ಅವರು (ಲಖೀತ್) ಹೇಳಿದರು: ಮತ್ತು ನಮಗೆ ಒಂದು 'ಖಿನಾಅ್' ತರಲಾಯಿತು. 'ಖಿನಾಅ್' ಎಂದರೆ ಖರ್ಜೂರಗಳಿದ್ದ ಒಂದು ತಟ್ಟೆ. ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದರು. ಅವರು ಹೇಳಿದರು: "ನಿಮಗೆ ಏನಾದರೂ ಸಿಕ್ಕಿತೇ? ಅಥವಾ ನಿಮಗಾಗಿ ಯಾವುದಕ್ಕಾದರೂ ಆದೇಶಿಸಲಾಗಿತ್ತೇ?" ಅವರು (ಲಖೀತ್) ಹೇಳಿದರು: ನಾವು ಹೇಳಿದೆವು: "ಹೌದು, ಓ ಅಲ್ಲಾಹನ ಸಂದೇಶವಾಹಕರೇ". ಅವರು (ಲಖೀತ್) ಹೇಳಿದರು: ನಾವು ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುಳಿತಿರುವಷ್ಟರಲ್ಲಿ ಕುರಿಗಾಹಿಯು ತನ್ನ ಕುರಿಗಳನ್ನು ಅವುಗಳ ವಿಶ್ರಾಂತಿ ಸ್ಥಳಕ್ಕೆ ಓಡಿಸಿಕೊಂಡು ಬಂದನು. ಅವನೊಂದಿಗೆ ಒಂದು ಆಡಿನ ಮರಿ ಇತ್ತು, ಅದು ಅರಚುತ್ತಿತ್ತು. ಅವರು (ಪ್ರವಾದಿ) ಕೇಳಿದರು: "ಓ ಇಂಥವನೇ, ಏನು ಹುಟ್ಟಿದೆ?" ಅವನು ಹೇಳಿದನು: "ಒಂದು ಹೆಣ್ಣು ಮರಿ". ಅವರು (ಪ್ರವಾದಿ) ಹೇಳಿದರು: "ಹಾಗಾದರೆ ಅದರ ಬದಲು ನಮಗಾಗಿ ಒಂದು ಕುರಿಯನ್ನು ವಧಿಸಿರಿ". ನಂತರ ಅವರು ಹೇಳಿದರು: "ನೀನು ಹೀಗೆ ಭಾವಿಸಬೇಡ" - 'ತಹ್ಸಬನ್ನ' ಎಂದು ಹೇಳಲಿಲ್ಲ - "ನಾವು ನಿನಗಾಗಿ ಇದನ್ನು ವಧಿಸಿದ್ದೇವೆ ಎಂದು. ನಮಗೆ ನೂರು ಕುರಿಗಳಿವೆ, ಅದು ಹೆಚ್ಚಾಗುವುದನ್ನು ನಾವು ಬಯಸುವುದಿಲ್ಲ. ಆದ್ದರಿಂದ, ಯಾವಾಗ ಕುರಿಗಾಹಿಯು ಒಂದು ಮರಿಯನ್ನು ತರುತ್ತಾನೋ, ನಾವು ಅದರ ಬದಲು ಒಂದು (ಬೆಳೆದ) ಕುರಿಯನ್ನು ಕಡಿಯುತ್ತೇವೆ". ಅವರು (ಲಖೀತ್) ಹೇಳಿದರು: ನಾನು ಹೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ, ನನಗೆ ಒಬ್ಬ ಹೆಂಡತಿಯಿದ್ದಾಳೆ. ಅವಳ ನಾಲಿಗೆಯಲ್ಲಿ ಏನೋ ಇದೆ - ಅಂದರೆ, ಕೆಟ್ಟ ಮಾತು". ಅವರು (ಪ್ರವಾದಿ) ಹೇಳಿದರು: "ಹಾಗಾದರೆ ಅವಳಿಗೆ ವಿಚ್ಛೇದನ ನೀಡು". ಅವರು (ಲಖೀತ್) ಹೇಳಿದರು: ನಾನು ಹೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ, ಅವಳೊಂದಿಗೆ (ದೀರ್ಘಕಾಲದ) ಒಡನಾಟವಿದೆ, ಮತ್ತು ಅವಳಿಂದ ನನಗೆ ಮಕ್ಕಳಿದ್ದಾರೆ". ಅವರು (ಪ್ರವಾದಿ) ಹೇಳಿದರು: "ಹಾಗಾದರೆ ಅವಳಿಗೆ ಆಜ್ಞಾಪಿಸು" - ಅಂದರೆ, ಉಪದೇಶಿಸು - "ಒಂದು ವೇಳೆ ಅವಳಲ್ಲಿ ಒಳಿತಿದ್ದರೆ, ಅವಳು ಖಂಡಿತವಾಗಿಯೂ (ಹೇಳಿದಂತೆ) ಮಾಡುತ್ತಾಳೆ. ಆದರೆ ನಿನ್ನ ಚಿಕ್ಕ ದಾಸಿಯನ್ನು ಹೊಡೆಯುವಂತೆ ನಿನ್ನ ಪತ್ನಿಯನ್ನು ಹೊಡೆಯಬೇಡ". ಆಗ ನಾನು ಹೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ, ನನಗೆ ವುಝೂವಿನ ಬಗ್ಗೆ ತಿಳಿಸಿರಿ". ಅವರು ಹೇಳಿದರು: "ವುಝೂವನ್ನು ಪೂರ್ಣವಾಗಿ ನಿರ್ವಹಿಸು, ಬೆರಳುಗಳ ನಡುವೆ ನೀರು ಹರಿಸಿ ತಿಕ್ಕು, ಮತ್ತು ನಿನಗೆ ಉಪವಾಸ ಇಲ್ಲದಿದ್ದರೆ ಮೂಗಿಗೆ ನೀರು ಹಾಕಿ ಚೆನ್ನಾಗಿ ಆಳಕ್ಕೆ ಎಳೆದುಕೊ."

[صحيح] - [رواه أبو داود والترمذي والنسائي وابن ماجه] - [سنن أبي داود - 142]

ವಿವರಣೆ

ಲಖೀತ್ ಇಬ್ನ್ ಸಬಿರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅವರು ತಮ್ಮ ಜನಾಂಗ ಬನೂ ಮುಂತಫಿಖ್‌ನ ಇತರ ಜನರೊಂದಿಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ನಿಯೋಗಿಯಾಗಿ ಬಂದರು. ಅವರು ಹೇಳಿದರು: ನಾವು ಅವರನ್ನು ಅವರ ಮನೆಯಲ್ಲಿ ಕಾಣಲಿಲ್ಲ. ಬದಲಿಗೆ, ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನು ಕಂಡೆವು. ಅವರು ನಮಗೋಸ್ಕರ ಹಿಟ್ಟು ಮತ್ತು ಕೊಬ್ಬಿನಿಂದ ಮಾಡಿದ ಒಂದು ಗಂಜಿ ತಯಾರಿಸಲು ಆದೇಶಿಸಿದರು, ಮತ್ತು ನಮಗೆ ಖರ್ಜೂರಗಳಿದ್ದ ಒಂದು ತಟ್ಟೆಯನ್ನು ನೀಡಲಾಯಿತು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದರು. ಅವರು ಕೇಳಿದರು: ನಿಮಗೆ ಊಟಕ್ಕಾಗಿ ಏನಾದರೂ ನೀಡಲಾಯಿತೇ? ನಾವು ಹೇಳಿದೆವು: ಹೌದು. ಲಖೀತ್ ಹೇಳಿದರು: ನಾವು ಅವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುಳಿತಿರುವಾಗ, ಪ್ರವಾದಿಯವರ ಕುರಿಗಾಹಿಯು ಕುರಿಗಳನ್ನು ಅವುಗಳ ರಾತ್ರಿ ತಂಗುವ ಸ್ಥಳಕ್ಕೆ ಓಡಿಸಿಕೊಂಡು ಬಂದನು, ಮತ್ತು ಅವನು ತನ್ನೊಂದಿಗೆ ಒಂದು ಕೂಗುವ ಕುರಿ ಮರಿಯನ್ನು ಹೊತ್ತುಕೊಂಡಿದ್ದನು. ಪ್ರವಾದಿಯವರು ಕೇಳಿದರು: ಏನು ಹುಟ್ಟಿದೆ? ಅವನು ಹೇಳಿದನು: ಒಂದು ಹೆಣ್ಣು ಮರಿ. ಪ್ರವಾದಿಯವರು ಹೇಳಿದರು: ಹಾಗಾದರೆ ಅದರ ಬದಲು ನಮಗಾಗಿ ಒಂದು ಬೆಳೆದ ಕುರಿಯನ್ನು ವಧಿಸು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಾವು ನಿಮಗಾಗಿ ಕಷ್ಟಪಟ್ಟು ಇದನ್ನು ವಧಿಸಿದ್ದೇವೆ ಎಂದು ಭಾವಿಸಬೇಡಿ. ನಮಗೆ ನೂರು ಕುರಿಗಳಿವೆ, ಮತ್ತು ಈ ಸಂಖ್ಯೆಗಿಂತ ಹೆಚ್ಚಾಗುವುದನ್ನು ನಾವು ಬಯಸುವುದಿಲ್ಲ. ಆದ್ದರಿಂದ, ಯಾವಾಗ ಒಂದು ಹೊಸ ಮರಿ ಹುಟ್ಟುತ್ತದೆಯೋ, ನಾವು ಅದರ ಬದಲು (ಒಂದು ಬೆಳೆದ ಕುರಿಯನ್ನು) ವಧಿಸುತ್ತೇವೆ. ಲಖೀತ್ ಹೇಳಿದರು: ನಾನು ಹೇಳಿದೆನು: ಓ ಅಲ್ಲಾಹನ ಸಂದೇಶವಾಹಕರೇ, ನನ್ನ ಪತ್ನಿಯ ನಾಲಿಗೆ ಉದ್ದವಾಗಿದೆ ಮತ್ತು ಅಶ್ಲೀಲವಾಗಿದೆ, ಅವಳೊಂದಿಗೆ ನಾನು ಹೇಗೆ ವರ್ತಿಸಲಿ? ಪ್ರವಾದಿಯವರು ಹೇಳಿದರು: ಹಾಗಾದರೆ ಅವಳಿಗೆ ವಿಚ್ಛೇದನ ನೀಡು. ಅವರು (ಲಖೀತ್) ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ಅವಳೊಂದಿಗೆ ನನಗೆ ಹಳೆಯ ಒಡನಾಟವಿದೆ, ಮತ್ತು ಅವಳಿಂದ ನನಗೆ ಮಕ್ಕಳಿದ್ದಾರೆ. ಪ್ರವಾದಿಯವರು ಹೇಳಿದರು: ಹಾಗಾದರೆ ಅವಳಿಗೆ ಉಪದೇಶಿಸು, ಒಂದು ವೇಳೆ ಅವಳಲ್ಲಿ ಒಳಿತಿದ್ದರೆ, ಅವಳು ನಿನ್ನ ಉಪದೇಶವನ್ನು ಖಂಡಿತವಾಗಿಯೂ ಸ್ವೀಕರಿಸುತ್ತಾಳೆ. ಮತ್ತು ಅವಳು ಸ್ವೀಕರಿಸದಿದ್ದರೆ, ಅವಳಿಗೆ ತೀವ್ರವಲ್ಲದ ರೀತಿಯಲ್ಲಿ ಹೊಡೆ. ನಿಮ್ಮ ಗುಲಾಮರನ್ನು ಹೊಡೆಯುವಂತೆ ಅವಳನ್ನು ಹೊಡೆಯಬೇಡಿ. ನಂತರ ಲಖೀತ್ ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ವುಝೂವಿನ ಬಗ್ಗೆ ನನಗೆ ತಿಳಿಸಿರಿ. ಪ್ರವಾದಿಯವರು ಹೇಳಿದರು: ವುಝೂ ಮಾಡುವಾಗ ನೀರನ್ನು ಅದರ ಸ್ಥಳಗಳಿಗೆ ತಲುಪಿಸು. ಪ್ರತಿಯೊಂದು ಅಂಗಕ್ಕೂ ಅದರ ಹಕ್ಕನ್ನು ನೀಡು. ಅದರ ಕಡ್ಡಾಯ ಮತ್ತು ಸುನ್ನತ್‌ಗಳಲ್ಲಿ ಯಾವುದನ್ನೂ ಬಿಡಬೇಡ. ನಿನ್ನ ಕೈ ಮತ್ತು ಕಾಲುಗಳನ್ನು ತೊಳೆಯುವಾಗ ಬೆರಳುಗಳನ್ನು ಬೇರ್ಪಡಿಸಿ (ನಡುವೆ ನೀರು ತಲುಪುವಂತೆ) ಮಾಡು. ವುಝೂ ಮಾಡುವಾಗ ಮೂಗಿನೊಳಗೆ ನೀರನ್ನು ಚೆನ್ನಾಗಿ ಆಳಕ್ಕೆ ಎಳೆದುಕೊಂಡು ಅದನ್ನು ಹೊರಹಾಕು. ಆದರೆ ಇದು ನಿನಗೆ ಉಪವಾಸವಿಲ್ಲದಿದ್ದರೆ ಮಾತ್ರ. ಏಕೆಂದರೆ ನೀರು ಗಂಟಲಿನೊಳಗೆ ಹೋಗಬಹುದು.

ಹದೀಸಿನ ಪ್ರಯೋಜನಗಳು

  1. ಅತಿಥಿಯನ್ನು ಗೌರವಿಸುವುದು ನಿಯಮಗೊಳಿಸಲಾಗಿದೆ.
  2. 'ಇಸ್ಬಾಗ್' (ವುಝೂವನ್ನು ಪೂರ್ಣವಾಗಿ ನಿರ್ವಹಿಸುವುದು) ಎರಡು ವಿಧವಿದೆ: 1. ಕಡ್ಡಾಯವಾದ 'ಇಸ್ಬಾಗ್'. ಇದರ ಹೊರತು ವುಝೂ ಪೂರ್ಣಗೊಳ್ಳುವುದಿಲ್ಲ, ಇದರ ಅರ್ಥ (ವುಝೂವಿನ ಅಂಗಕ್ಕೆ) ಪೂರ್ಣವಾಗಿ ನೀರು ಹಾಯಿಸಿ ತೊಳೆಯುವುದು. 2. ಅಪೇಕ್ಷಣೀಯ 'ಇಸ್ಬಾಗ್'. ಇದರ ಹೊರತು ವುಝೂ ಪೂರ್ಣಗೊಳ್ಳುತ್ತದೆ. ಇದರ ಉದ್ದೇಶ (ಒಂದು ಬಾರಿ) ಕಡ್ಡಾಯವಾಗಿ ತೊಳೆದ ಮೇಲೆ ಹೆಚ್ಚುವರಿಯಾಗಿ ಎರಡನೇ ಮತ್ತು ಮೂರನೇ ಬಾರಿ ತೊಳೆಯುವುದು. ಇದು ಪ್ರೋತ್ಸಾಹನೀಯವಾಗಿದೆ.
  3. ಕೈ ಮತ್ತು ಕಾಲುಗಳ ಬೆರಳುಗಳನ್ನು ತೊಳೆಯುವಾಗ ಅವುಗಳ ನಡುವೆ ನೀರು ಹರಿಯುವಂತೆ ಮಾಡುವುದು (ತಖ್ಲೀಲ್) ಅಪೇಕ್ಷಣೀಯವಾಗಿದೆ.
  4. ತೀಬೀ ಹೇಳುತ್ತಾರೆ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುಝೂವಿನ ಕೆಲವು ಸುನ್ನತ್‌ಗಳ ಬಗ್ಗೆ ಮಾತ್ರ ಉತ್ತರಿಸಿದರು; ಏಕೆಂದರೆ ಕೇಳುಗನಿಗೆ ವುಝೂವಿನ ಮೂಲಭೂತ ಜ್ಞಾನವಿತ್ತು."
  5. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುಂದರವಾದ ಗುಣಲಕ್ಷಣಗಳಲ್ಲಿ ಒಂದು ಏನೆಂದರೆ, ಅವರು ಇತರರ ಭಾವನೆಗಳಿಗೆ ಗಮನ ನೀಡುತ್ತಿದ್ದರು ಮತ್ತು ಅವರ ಮನಸ್ಥಿತಿಯನ್ನು ಪರಿಗಣಿಸುತ್ತಿದ್ದರು.
  6. ಈ ಹದೀಸ್ ವುಝೂವಿನಲ್ಲಿ ಬಾಯಿ ಮುಕ್ಕಳಿಸುವುದು ಕಡ್ಡಾಯವಾಗಿದೆ ಎಂಬುದಕ್ಕೆ ಪುರಾವೆಯಾಗಿದೆ.
  7. ಮೂಗಿಗೆ ನೀರು ಹಾಕಿ ಆಳಕ್ಕೆ ಎಳೆದುಕೊಳ್ಳುವುದು ಅಪೇಕ್ಷಣೀಯವಾಗಿದೆ. ಉಪವಾಸ ಇರುವವರ ಹೊರತು. ಏಕೆಂದರೆ ಇದನ್ನು ಅತಿಯಾಗಿ ಮಾಡುವುದು ಮೂಗಿನಿಂದ ಗಂಟಲಿಗೆ ನೀರು ಹೋಗಿ ಉಪವಾಸವನ್ನು ಮುರಿಯಲು ಕಾರಣವಾಗಬಹುದು.
  8. ಇಸ್ಲಾಂ ಸ್ವೀಕರಿಸಿದ ಪ್ರತಿಯೊಬ್ಬನಿಗೂ ಹಿಜ್ರ (ವಲಸೆ) ಮಾಡುವುದು ಕಡ್ಡಾಯವಲ್ಲ ಎಂಬುದಕ್ಕೆ ಇದರಲ್ಲಿ ಪುರಾವೆಯಿದೆ; ಏಕೆಂದರೆ ಬನೂ ಮುಂತಫಿಖ್ ಮತ್ತು ಇತರರು ವಲಸೆ ಮಾಡದೆ ತಮ್ಮ ನಿಯೋಗಗಳನ್ನು ಕಳುಹಿಸಿದರು. ಒಬ್ಬನು ತನ್ನ ಧರ್ಮವನ್ನು ಪ್ರಕಟಪಡಿಸಲು ಸಮರ್ಥನಾಗಿರುವ ಸ್ಥಳದಲ್ಲಿದ್ದರೆ ನಿಯಮವು ಹೀಗೆಯೇ ಇರುತ್ತದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الجورجية المقدونية الخميرية البنجابية الماراثية
ಅನುವಾದಗಳನ್ನು ತೋರಿಸಿ