عَنْ جَابِرٍ رضي الله عنه قال: أَخْبَرَنِي عُمَرُ بْنُ الْخَطَّابِ:
أَنَّ رَجُلًا تَوَضَّأَ فَتَرَكَ مَوْضِعَ ظُفُرٍ عَلَى قَدَمِهِ فَأَبْصَرَهُ النَّبِيُّ صَلَّى اللهُ عَلَيْهِ وَسَلَّمَ فَقَالَ: «ارْجِعْ فَأَحْسِنْ وُضُوءَكَ» فَرَجَعَ، ثُمَّ صَلَّى.
[صحيح بشواهده] - [رواه مسلم] - [صحيح مسلم: 243]
المزيــد ...
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಉಮರ್ ಬಿನ್ ಖತ್ತಾಬ್ ನನಗೆ ತಿಳಿಸಿದರು:
ಒಬ್ಬ ವ್ಯಕ್ತಿ ವುದೂ ನಿರ್ವಹಿಸಿದರು ಮತ್ತು ತನ್ನ ಪಾದದಲ್ಲಿ ಉಗುರಿನ ಗಾತ್ರದ ಸ್ಥಳವನ್ನು ಬಿಟ್ಟುಬಿಟ್ಟರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ನೋಡಿ ಹೇಳಿದರು: "ಹಿಂದಿರುಗಿ ಹೋಗು ಮತ್ತು ಅತ್ಯುತ್ತಮವಾಗಿ ವುದೂ ನಿರ್ವಹಿಸು." ಆ ವ್ಯಕ್ತಿ ಹಿಂದಿರುಗಿ ಹೋಗಿ, ನಂತರ ನಮಾಝ್ ನಿರ್ವಹಿಸಿದರು.
[صحيح بشواهده] - [رواه مسلم] - [صحيح مسلم - 243]
ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ವ್ಯಕ್ತಿ ವುದೂ ಮುಗಿಸಿದಾಗ ಅವನ ಪಾದದಲ್ಲಿ ಉಗುರಿನ ಗಾತ್ರದ ಸ್ಥಳವನ್ನು ನೀರು ತಾಗಿಸದೆ ಬಿಟ್ಟದ್ದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಮನಿಸಿದರು. ಆತ ಅಪೂರ್ಣವಾಗಿ ವುದೂ ನಿರ್ವಹಿಸಿದ ಆ ಸ್ಥಳವನ್ನು ತೋರಿಸುತ್ತಾ ಅವರು ಹೇಳಿದರು: "ಹಿಂದಿರುಗಿ ಹೋಗು ಮತ್ತು ಅತ್ಯುತ್ತಮವಾಗಿ ಮತ್ತು ಪೂರ್ಣವಾಗಿ ವುದೂ ನಿರ್ವಹಿಸು. ಪ್ರತಿಯೊಂದು ಅಂಗಕ್ಕೂ ಅದರ ನೀರಿನ ಹಕ್ಕನ್ನು ನೀಡು." ಆ ವ್ಯಕ್ತಿ ಹಿಂದಿರುಗಿ ಹೋಗಿ, ವುದೂವನ್ನು ಪೂರ್ಣಗೊಳಿಸಿ, ನಂತರ ನಮಾಝ್ ನಿರ್ವಹಿಸಿದರು.