+ -

عَنْ أَبِي هُرَيْرَةَ رضي الله عنه أَنَّ النَّبِيَّ صَلَّى اللهُ عَلَيْهِ وَسَلَّمَ قَالَ:
«إِذَا اسْتَيْقَظَ أَحَدُكُمْ مِنْ مَنَامِهِ فَلْيَسْتَنْثِرْ ثَلَاثَ مَرَّاتٍ، فَإِنَّ الشَّيْطَانَ يَبِيتُ عَلَى خَيَاشِيمِهِ».

[صحيح] - [متفق عليه] - [صحيح مسلم: 238]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲೊಬ್ಬರು ನಿದ್ರೆಯಿಂದ ಎದ್ದರೆ ಮೂರು ಬಾರಿ ಮೂಗಿನೊಳಗೆ ನೀರನ್ನು ಎಳೆದು ಹೊರಬಿಡಲಿ. ಏಕೆಂದರೆ ನಿಶ್ಚಯವಾಗಿಯೂ ಶೈತಾನನು ಅವರ ಮೂಗಿನ ಹೊಳ್ಳೆಯಲ್ಲಿ ರಾತ್ರಿಯನ್ನು ಕಳೆಯುತ್ತಾನೆ."

[صحيح] - [متفق عليه] - [صحيح مسلم - 238]

ವಿವರಣೆ

ನಿದ್ರೆಯಿಂದ ಎದ್ದರೆ ಮೂರು ಬಾರಿ 'ಇಸ್ತಿನ್ಸಾರ್' ಮಾಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒತ್ತಾಯಿಸುತ್ತಿದ್ದಾರೆ. 'ಇಸ್ತಿನ್ಸಾರ್' ಎಂದರೆ ಮೂಗಿಗೆ ನೀರೆಳೆದು ಹೊರ ಬಿಡುವುದು. ಅದೇಕೆಂದರೆ, ಶೈತಾನನು ಮೂಗಿನ ಹೊಳ್ಳೆಯಲ್ಲಿ ರಾತ್ರಿಯನ್ನು ಕಳೆಯುತ್ತಾನೆ.

ಹದೀಸಿನ ಪ್ರಯೋಜನಗಳು

  1. ನಿದ್ರೆಯಿಂದ ಎದ್ದವರೆಲ್ಲರೂ ಮೂಗಿನಲ್ಲಿರುವ ಶೈತಾನನ ಕುರುಹನ್ನು ತೊಲಗಿಸುವುದಕ್ಕಾಗಿ ಮೂಗಿಗೆ ನೀರೆಳೆದು ಹೊರ ಬಿಡಬೇಕೆಂದು ಧರ್ಮಶಾಸ್ತ್ರವು ನಿರ್ದೇಶಿಸುತ್ತದೆ. ವುದೂ ಮಾಡುವುದಾಗಿದ್ದರೆ, ಮೂಗಿಗೆ ನೀರೆಳೆದು ಹೊರಬಿಡಬೇಕೆಂಬ ಆಜ್ಞೆ ಹೆಚ್ಚು ಪ್ರಬಲವಾಗುತ್ತದೆ.
  2. ಇಸ್ತಿನ್ಸಾರ್ ಇಸ್ತಿನ್‌ಶಾಕ್‌ನ ಪೂರ್ಣ ಪ್ರಯೋಜನವನ್ನು ನೀಡುತ್ತದೆ. ಇಸ್ತಿನ್‌ಶಾಕ್ ಎಂದರೆ ಮೂಗಿನ ಒಳಭಾಗವನ್ನು ಶುಚೀಕರಿಸುವುದು. ಇಸ್ತಿನ್ಸಾರ್ ಎಂದರೆ ಮೂಗಿನ ಒಳಗಿರುವ ಕೊಳೆಯನ್ನು ತೊಲಗಿಸುವುದು.
  3. ಇದು ನಿರ್ದಿಷ್ಟವಾಗಿ ರಾತ್ರಿಯ ನಿದ್ರೆಗೆ ಅನ್ವಯವಾಗುತ್ತದೆ. ಏಕೆಂದರೆ, ಇಲ್ಲಿ 'ಯಬೀತು' ಎಂಬ ಪದವನ್ನು ಬಳಸಲಾಗಿದೆ. ಇದು ರಾತ್ರಿಯ ನಿದ್ರೆಗೆ ಮಾತ್ರ ಬಳಸುವ ಪದವಾಗಿದೆ. ಅಷ್ಟೇ ಅಲ್ಲದೆ, ರಾತ್ರಿಯ ನಿದ್ರೆಯು ದೀರ್ಘ ಮತ್ತು ಗಾಢವಾಗಿರುತ್ತದೆ.
  4. ಶೈತಾನನು ಸದಾ ಮನುಷ್ಯರೊಡನೆ ತಂಗಿರುತ್ತಾನೆ ಎಂಬುದಕ್ಕೆ ಈ ಹದೀಸ್ ಪುರಾವೆಯಾಗಿದೆ. ಆದರೆ ಮನುಷ್ಯನಿಗೆ ಅದರ ಅರಿವಾಗುವುದಿಲ್ಲ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الهولندية الغوجاراتية القيرقيزية النيبالية الرومانية المجرية الموري الأورومو الجورجية
ಅನುವಾದಗಳನ್ನು ತೋರಿಸಿ