+ -

عَن عَبْدِ اللَّهِ بْنِ عُمَرَ رضي الله عنهما قَالَ: سُئِلَ رَسُولُ اللَّهِ صَلَّى اللهُ عَلَيْهِ وَسَلَّمَ عَنِ الْمَاءِ وَمَا يَنُوبُهُ مِنَ الدَّوَابِّ وَالسِّبَاعِ، فَقَالَ صَلَّى اللهُ عَلَيْهِ وَسَلَّمَ:
«إِذَا كَانَ الْمَاءُ قُلَّتَيْنِ لَمْ يَحْمِلِ الْخَبَثَ».

[صحيح] - [رواه أبو داود والترمذي والنسائي وابن ماجه وأحمد] - [سنن أبي داود: 63]
المزيــد ...

ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾಣಿಗಳು ಮತ್ತು ವನ್ಯಮೃಗಗಳು ಸರದಿಯಾಗಿ ಬಂದು ಕುಡಿಯುವ ನೀರಿನ ಬಗ್ಗೆ ಕೇಳಲಾದಾಗ, ಅವರು ಹೇಳಿದರು:
"ನೀರು ಎರಡು ಕುಲ್ಲತ್‌ನಷ್ಟಿದ್ದರೆ ಅದು ಮಾಲಿನ್ಯವನ್ನು ವಹಿಸುವುದಿಲ್ಲ."

[صحيح] - - [سنن أبي داود - 63]

ವಿವರಣೆ

ಪ್ರಾಣಿಗಳು, ವನ್ಯಮೃಗಗಳು ಮುಂತಾದವುಗಳು ಸಾಮಾನ್ಯವಾಗಿ ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದೇನೆಂದರೆ, ನೀರಿನ ಪ್ರಮಾಣವು ಎರಡು ದೊಡ್ಡ ಮಡಕೆಗಳಷ್ಟಿದ್ದರೆ, ಅಂದರೆ ಸುಮಾರು 210 ಲೀಟರ್ ನೀರಿದ್ದರೆ, ಅದು ಹೆಚ್ಚು ಪ್ರಮಾಣದಲ್ಲಿರುವ ನೀರಾಗಿದ್ದು ಅದು ಅಶುದ್ಧವಾಗುವುದಿಲ್ಲ. ಆದರೆ ಅದರ ಬಣ್ಣ, ರುಚಿ ಮತ್ತು ಪರಿಮಳ ಎಂಬ ಅದರ ಮೂರು ಗುಣಗಳಲ್ಲಿ ಯಾವುದಾದರೂ ಒಂದು ಬದಲಾದರೆ ಅದು ಅಶುದ್ಧವಾಗುತ್ತದೆ.

ಹದೀಸಿನ ಪ್ರಯೋಜನಗಳು

  1. ನೀರಿನ ಮೂರು ಗುಣಗಳಾದ ಬಣ್ಣ, ರುಚಿ ಮತ್ತು ಪರಿಮಳದಲ್ಲಿ ಯಾವುದಾದರೂ ಒಂದು ಬದಲಾದರೆ ನೀರು ಅಶುದ್ಧವಾಗುತ್ತದೆ. ಈ ಹದೀಸ್ ಒಂದು ಸಾಮಾನ್ಯ ತತ್ವವನ್ನು ವಿವರಿಸುತ್ತದೆಯೇ ಹೊರತು ನಿರ್ದಿಷ್ಟ ತತ್ವವನ್ನಲ್ಲ.
  2. ಅಶುದ್ಧ ವಸ್ತು ನೀರನ್ನು ಬದಲಾಯಿಸಿದರೆ ನೀರು ಅಶುದ್ಧವಾಗುತ್ತದೆ ಎಂಬ ವಿಷಯದಲ್ಲಿ ವಿದ್ವಾಂಸರಿಗೆ ಒಮ್ಮತವಿದೆ. ನೀರು ಕಡಿಮೆಯಾಗಿದ್ದರೂ ಹೆಚ್ಚಾಗಿದ್ದರೂ ಸಹ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية السويدية الهولندية الغوجاراتية القيرقيزية النيبالية الرومانية المجرية الموري الأورومو الجورجية
ಅನುವಾದಗಳನ್ನು ತೋರಿಸಿ