عَن أَبِي هُرَيْرَةَ رضي الله عنه قَالَ:
سَأَلَ رَجُلٌ رَسُولَ اللهِ صَلَّى اللَّهُ عَلَيْهِ وَسَلَّمَ، فَقَالَ: يَا رَسُولَ اللهِ، إِنَّا نَرْكَبُ البَحْرَ، وَنَحْمِلُ مَعَنَا القَلِيلَ مِنَ الْمَاءِ، فَإِنْ تَوَضَّأْنَا بِهِ عَطِشْنَا، أَفَنَتَوَضَّأُ مِنَ الْبَحْرِ؟ فَقَالَ رَسُولُ اللهِ صَلَّى اللَّهُ عَلَيْهِ وَسَلَّمَ: «هُوَ الطَّهُورُ مَاؤُهُ، الحِلُّ مَيْتَتُهُ».
[صحيح] - [رواه أبو داود والترمذي والنسائي وابن ماجه وأحمد] - [سنن الترمذي: 69]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಕಡಲಿನಲ್ಲಿ ಪ್ರಯಾಣ ಮಾಡುವವರು. ನಾವು ನಮ್ಮೊಂದಿಗೆ ಸ್ವಲ್ಪ ನೀರನ್ನು ಒಯ್ಯುತ್ತೇವೆ. ಆ ನೀರಿನಿಂದ ನಾವು ವುದೂ ನಿರ್ವಹಿಸಿದರೆ ನಮಗೆ ಕುಡಿಯಲು ನೀರು ಇರುವುದಿಲ್ಲ. ನಾವು ಸಮುದ್ರದ ನೀರಿನಿಂದ ವುದೂ ಮಾಡಬಹುದೇ?" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅದರ ನೀರು ಶುದ್ಧವಾಗಿದೆ ಮತ್ತು ಅದರ ಶವವು ಧರ್ಮಸಮ್ಮತವಾಗಿದೆ."
[صحيح] - - [سنن الترمذي - 69]
ಒಬ್ಬ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: ನಾವು ಮೀನುಗಾರಿಕೆ, ವ್ಯಾಪಾರ ಅಥವಾ ಇತರ ಉದ್ದೇಶಗಳಿಗಾಗಿ ನಾವೆಯಲ್ಲಿ ಪ್ರಯಾಣ ಮಾಡುತ್ತೇವೆ. ನಾವು ನಮ್ಮೊಂದಿಗೆ ಕುಡಿಯಲು ಯೋಗ್ಯವಾದ ಸ್ವಲ್ಪ ನೀರನ್ನು ಒಯ್ಯುತ್ತೇವೆ. ನಾವು ಕುಡಿಯುವ ನೀರನ್ನು ವುದೂ ಮತ್ತು ಸ್ನಾನಕ್ಕಾಗಿ ಬಳಸಿದರೆ ನಮಗೆ ಕುಡಿಯಲು ನೀರು ದೊರೆಯುವುದಿಲ್ಲ. ಆದ್ದರಿಂದ ನಾವು ಸಮುದ್ರದ ನೀರಿನಿಂದ ವುದೂ ನಿರ್ವಹಿಸಬಹುದೇ?
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮುದ್ರದ ನೀರಿನ ಬಗ್ಗೆ ಹೀಗೆ ಹೇಳಿದರು: ಅದರ ನೀರು ಸ್ವಯಂ ಶುದ್ಧವಾಗಿದ್ದು ಇತರ ವಸ್ತುಗಳನ್ನೂ ಶುದ್ಧೀಕರಿಸುತ್ತದೆ. ಅದರಿಂದ ವುದೂ ಮತ್ತು ಸ್ನಾನ ಮಾಡಬಹುದು. ಅದರಿಂದ ಉತ್ಪಾದನೆಯಾಗುವ ಮೀನು ಮುಂತಾದವುಗಳನ್ನು ಸೇವಿಸುವುದು ಧರ್ಮಸಮ್ಮತವಾಗಿದೆ. ಅದು ಅದನ್ನು ಹಿಡಿಯುವುದಕ್ಕೆ ಮೊದಲೇ ಸತ್ತು ಸಮುದ್ರದಲ್ಲಿ ತೇಲುತ್ತಿದ್ದರೂ ಸಹ.