عَنْ أَنَسِ بْنِ مَالِكٍ رَضيَ اللهُ عنهُ أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«إِنَّ فِي الْجَنَّةِ لَسُوقًا، يَأْتُونَهَا كُلَّ جُمُعَةٍ، فَتَهُبُّ رِيحُ الشَّمَالِ فَتَحْثُو فِي وُجُوهِهِمْ وَثِيَابِهِمْ، فَيَزْدَادُونَ حُسْنًا وَجَمَالًا، فَيَرْجِعُونَ إِلَى أَهْلِيهِمْ وَقَدِ ازْدَادُوا حُسْنًا وَجَمَالًا، فَيَقُولُ لَهُمْ أَهْلُوهُمْ: وَاللهِ لَقَدِ ازْدَدْتُمْ بَعْدَنَا حُسْنًا وَجَمَالًا، فَيَقُولُونَ: وَأَنْتُمْ وَاللهِ لَقَدِ ازْدَدْتُمْ بَعْدَنَا حُسْنًا وَجَمَالًا».
[صحيح] - [رواه مسلم] - [صحيح مسلم: 2833]
المزيــد ...
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಸ್ವರ್ಗದಲ್ಲಿ ಒಂದು ಮಾರುಕಟ್ಟೆ ಇದೆ. ಅವರು (ಸ್ವರ್ಗವಾಸಿಗಳು) ಪ್ರತಿ ಶುಕ್ರವಾರ ಅಲ್ಲಿಗೆ ಬರುತ್ತಾರೆ. ಆಗ ಉತ್ತರದಿಂದ ಗಾಳಿ ಬೀಸಿ, ಅವರ ಮುಖ ಮತ್ತು ವಸ್ತ್ರಗಳ ಮೇಲೆ (ಸುವಾಸನೆಯನ್ನು) ಬೀರುತ್ತದೆ. ಆಗ ಅವರ ಸೌಂದರ್ಯ ಮತ್ತು ಅಂದವು ಹೆಚ್ಚಾಗುತ್ತದೆ. ನಂತರ ಅವರು ಆ ಹೆಚ್ಚಾದ ಸೌಂದರ್ಯ ಮತ್ತು ಅಂದದೊಂದಿಗೆ, ತಮ್ಮ ಕುಟುಂಬದವರ ಬಳಿಗೆ ಹಿಂತಿರುಗಿದಾಗ, ಅವರ ಕುಟುಂಬದವರು ಹೇಳುತ್ತಾರೆ: 'ಅಲ್ಲಾಹನಾಣೆ, ನಮ್ಮ (ನ್ನು ಬಿಟ್ಟುಹೋದ) ನಂತರ ನೀವು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'. ಆಗ ಅವರು ಹೇಳುತ್ತಾರೆ: 'ಮತ್ತು ನೀವೂ ಸಹ, ಅಲ್ಲಾಹನಾಣೆ, (ನಾವು ಬಿಟ್ಟುಹೋದ) ನಂತರ ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'".
[صحيح] - [رواه مسلم] - [صحيح مسلم - 2833]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸ್ವರ್ಗದಲ್ಲಿ ಒಂದು ಸ್ಥಳವಿದ್ದು, ಅಲ್ಲಿ ಅವರು (ಸ್ವರ್ಗವಾಸಿಗಳು) ಒಟ್ಟುಗೂಡುತ್ತಾರೆ. ಅಲ್ಲಿ ಯಾವುದೇ ಖರೀದಿ ಅಥವಾ ಮಾರಾಟವಿರುವುದಿಲ್ಲ. ಅಲ್ಲಿ ಅವರು ತಮಗೆ ಬೇಕಾದುದನ್ನು ತೆಗೆದುಕೊಳ್ಳುತ್ತಾರೆ. ಅವರು ಅಥವಾ ಪ್ರತಿ ವಾರಕ್ಕೊಮ್ಮೆ ಅಲ್ಲಿಗೆ ಬರುತ್ತಾರೆ. ಆಗ ಉತ್ತರದಿಂದ ಗಾಳಿ ಬೀಸುತ್ತದೆ. ಅದು ಅವರ ಮುಖ ಮತ್ತು ವಸ್ತ್ರಗಳನ್ನು ಅಲುಗಾಡಿಸುತ್ತದೆ. ಆಗ ಅವರು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಳ್ಳುತ್ತಾರೆ. ನಂತರ ಅವರು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡ ಸ್ಥಿತಿಯಲ್ಲಿ ತಮ್ಮ ಕುಟುಂಬದವರ ಬಳಿಗೆ ಹಿಂತಿರುಗುತ್ತಾರೆ. ಆಗ ಅವರ ಕುಟುಂಬದವರು ಹೇಳುತ್ತಾರೆ: 'ಅಲ್ಲಾಹನಾಣೆ, ನಮ್ಮ ನಂತರ ನೀವು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'. ಆಗ ಅವರು ಹೇಳುತ್ತಾರೆ: 'ಮತ್ತು ನೀವೂ ಸಹ, ಅಲ್ಲಾಹನಾಣೆ, ನಮ್ಮ ನಂತರ ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'.