عَنْ أَبِي سَعِيدٍ الْخُدْرِيِّ رَضيَ اللهُ عنهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«إِنَّ فِي الْجَنَّةِ شَجَرَةً يَسِيرُ الرَّاكِبُ الْجَوَادَ الْمُضَمَّرَ السَّرِيعَ مِائَةَ عَامٍ مَا يَقْطَعُهَا».
[صحيح] - [متفق عليه] - [صحيح مسلم: 2828]
المزيــد ...
ಅಬೂ ಸಈದ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಸ್ವರ್ಗದಲ್ಲಿ ಒಂದು ಮರವಿದೆ, (ಓಟಕ್ಕಾಗಿ) ಸಿದ್ಧಪಡಿಸಲಾದ ವೇಗದ ಕುದುರೆಯ ಸವಾರನು ನೂರು ವರ್ಷಗಳ ಕಾಲ (ಅದರ ನೆರಳಿನಲ್ಲಿ) ಪ್ರಯಾಣಿಸಿದರೂ ಅದನ್ನು ದಾಟಲು ಸಾಧ್ಯವಾಗುವುದಿಲ್ಲ".
[صحيح] - [متفق عليه] - [صحيح مسلم - 2828]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸ್ವರ್ಗದಲ್ಲಿ ಒಂದು ಮರವಿದೆ, ಅದರ ಕೆಳಗೆ ಓಟಕ್ಕಾಗಿ ಸಿದ್ಧಪಡಿಸಲಾದ, ವೇಗವಾಗಿ ಓಡುವ ಕುದುರೆಯ ಸವಾರನು ನೂರು ವರ್ಷಗಳ ಕಾಲ ಪ್ರಯಾಣಿಸಿದರೂ, ಅದರ ಕೊಂಬೆಗಳು ವಾಲಿಕೊಂಡಿರುವ ಕೊನೆಯನ್ನು ಅವನು ತಲುಪುವುದಿಲ್ಲ.