+ -

عَنْ أَبِي مُوسَى رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ، قَالَ:
«إِنَّ لِلْمُؤْمِنِ فِي الْجَنَّةِ لَخَيْمَةً مِنْ لُؤْلُؤَةٍ وَاحِدَةٍ مُجَوَّفَةٍ، طُولُهَا سِتُّونَ مِيلًا، لِلْمُؤْمِنِ فِيهَا أَهْلُونَ، يَطُوفُ عَلَيْهِمِ الْمُؤْمِنُ فَلَا يَرَى بَعْضُهُمْ بَعْضًا».

[صحيح] - [متفق عليه] - [صحيح مسلم: 2838]
المزيــد ...

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ, ಸ್ವರ್ಗದಲ್ಲಿ ಸತ್ಯವಿಶ್ವಾಸಿಗೆ ಒಂದೇ ಮುತ್ತಿನಿಂದ ಮಾಡಿದ, ಒಳಗೆ ಟೊಳ್ಳಾದ ಒಂದು ಗುಡಾರವಿದೆ. ಅದರ ಉದ್ದ ಅರವತ್ತು ಮೈಲಿಗಳು. ಸತ್ಯವಿಶ್ವಾಸಿಗೆ ಅದರಲ್ಲಿ ಪತ್ನಿಯರು ಇರುತ್ತಾರೆ. ಸತ್ಯವಿಶ್ವಾಸಿ ಅವರನ್ನು ಸರದಿಯಂತೆ ಭೇಟಿ ಮಾಡುತ್ತಾನೆ. ಆದರೆ ಅವರು ಒಬ್ಬರನ್ನೊಬ್ಬರು ನೋಡುವುದಿಲ್ಲ."

[صحيح] - [متفق عليه] - [صحيح مسلم - 2838]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ವರ್ಗದ ಕೆಲವು ಸುಖಗಳ ಬಗ್ಗೆ ತಿಳಿಸಿದ್ದಾರೆ. ಸ್ವರ್ಗದಲ್ಲಿ ಸತ್ಯವಿಶ್ವಾಸಿಗೆ ಬಹಳ ದೊಡ್ಡದಾದ, ಒಳಗೆ ವಿಶಾಲವಾದ, ಒಂದೇ ಮುತ್ತಿನಿಂದ ಮಾಡಿದ ಒಳಗೆ ಟೊಳ್ಳಾದ ಗುಡಾರವಿರುತ್ತದೆ. ಅದರ ಅಗಲ ಮತ್ತು ಉದ್ದ ಆಕಾಶದಲ್ಲಿ ಅರವತ್ತು ಮೈಲಿಗಳು. ಅದರ ನಾಲ್ಕು ಮೂಲೆಗಳ ಪ್ರತಿಯೊಂದು ಬದಿಯಲ್ಲಿ, ದಿಕ್ಕಿನಲ್ಲಿ ಮತ್ತು ಕೋನದಲ್ಲಿ ಅವನಿಗೆ ಪತ್ನಿಯರಿರುತ್ತಾರೆ. ಅವರು ಒಬ್ಬರನ್ನೊಬ್ಬರು ನೋಡುವುದಿಲ್ಲ. ಸತ್ಯವಿಶ್ವಾಸಿ ಅವರನ್ನು ಸರದಿಯಂತೆ ಭೇಟಿ ಮಾಡುತ್ತಾನೆ.

ಹದೀಸಿನ ಪ್ರಯೋಜನಗಳು

  1. ಸ್ವರ್ಗವಾಸಿಗಳ ಸುಖದ ವೈಭವವನ್ನು ವಿವರಿಸಲಾಗಿದೆ.
  2. ಅಲ್ಲಾಹನು ಅವರಿಗಾಗಿ ಸಿದ್ಧಪಡಿಸಿರುವ ಸುಖವನ್ನು ವಿವರಿಸುವ ಮೂಲಕ ಸತ್ಕರ್ಮಗಳನ್ನು ಮಾಡಲು ಪ್ರೋತ್ಸಾಹಿಸಲಾಗಿದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية النيبالية الدرية الرومانية المجرية الموري المالاجاشية الولوف الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು