+ -

عَنْ عَائِشَةَ أُمِّ المؤمنين رضي الله عنها أَنَّ فَاطِمَةَ بِنْتَ أَبِي حُبَيْشٍ سَأَلَتِ النَّبِيَّ صَلَّى اللهُ عَلَيْهِ وَسَلَّمَ قَالَتْ:
إِنِّي أُسْتَحَاضُ فَلاَ أَطْهُرُ، أَفَأَدَعُ الصَّلاَةَ؟ فَقَالَ: «لَا، إِنَّ ذَلِكِ عِرْقٌ، وَلَكِنْ دَعِي الصَّلاَةَ قَدْرَ الأَيَّامِ الَّتِي كُنْتِ تَحِيضِينَ فِيهَا، ثُمَّ اغْتَسِلِي وَصَلِّي».

[صحيح] - [متفق عليه] - [صحيح البخاري: 325]
المزيــد ...

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಫಾತಿಮ ಬಿಂತ್ ಅಬೂ ಹುಬೈಶ್ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು:
"ನನಗೆ ನಿರಂತರ ರಕ್ತ ಸ್ರವಿಸುತ್ತದೆ. ಆದ್ದರಿಂದ ನಾನು ಶುದ್ಧಿಯಾಗುವುದೇ ಇಲ್ಲ. ಹಾಗಾಗಿ ನಾನು ನಮಾಝ್ ತೊರೆಯಬೇಕೇ?" ಅವರು ಉತ್ತರಿಸಿದರು: "ಬೇಡ, ಅದು ರಕ್ತನಾಳವಾಗಿದೆ. ಆದರೆ ಸಾಮಾನ್ಯವಾಗಿ ನಿಮಗೆ ಮುಟ್ಟಾಗುವ ಅವಧಿಯಲ್ಲಿ ನಮಾಝ್ ತೊರೆಯಿರಿ, ನಂತರ ಗುಸ್ಲ್ (ಕಡ್ಡಾಯ ಸ್ನಾನ) ನಿರ್ವಹಿಸಿ ನಮಾಝ್ ಮುಂದುವರಿಸಿ."

[صحيح] - [متفق عليه] - [صحيح البخاري - 325]

ವಿವರಣೆ

ಫಾತಿಮ ಬಿಂತ್ ಅಬೂ ಹುಬೈಶ್ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನನಗೆ ರಕ್ತ ನಿಲ್ಲುವುದಿಲ್ಲ. ಮುಟ್ಟಿನ ಅವಧಿಯಲ್ಲದ ಸಮಯದಲ್ಲೂ ಅದು ಮುಂದುವರಿಯುತ್ತದೆ. ಹಾಗಾದರೆ ಆ ಸಮಯದಲ್ಲಿ ನಾನು ಮುಟ್ಟಿನಲ್ಲಿರುವ ಮಹಿಳೆಯರ ವಿಧಿಯಂತೆ ನಮಾಝ್ ತೊರೆಯಬೇಕೇ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅದು ರಕ್ತಸ್ರಾವವಾಗಿದೆ. ಅದು ಕಾಯಿಲೆಯಿಂದ ಬರುವ ರಕ್ತವಾಗಿದ್ದು, ಗರ್ಭಕೋಶದಲ್ಲಿ ರಕ್ತನಾಳವು ತುಂಡಾದರೆ ಅದು ಪ್ರಾರಂಭವಾಗುತ್ತದೆ. ಅದು ಮುಟ್ಟಿನ ರಕ್ತವಲ್ಲ. ರಕ್ತಸ್ರಾವದ ಈ ಕಾಯಿಲೆಯು ಆರಂಭವಾಗುವ ಮೊದಲು ನಿಮಗೆ ಪ್ರತಿ ತಿಂಗಳು ಮುಟ್ಟಾಗುತ್ತಿದ್ದ ಅವಧಿಯು ಬಂದರೆ, ನಮಾಝ್, ಉಪವಾಸ ಮುಂತಾದ ಮುಟ್ಟಿನ ಅವಧಿಯಲ್ಲಿ ಮಹಿಳೆಯರು ತೊರೆಯುವುದೆಲ್ಲವನ್ನು ತೊರೆಯಿರಿ. ಆ ಅವಧಿಯು ಮುಗಿದರೆ, ನೀವು ಮುಟ್ಟಿನಿಂದ ಶುದ್ಧಿಯಾಗುತ್ತೀರಿ. ಆಗ ನೀವು ರಕ್ತದ ಸ್ಥಳವನ್ನು ತೊಳೆದು ನಂತರ ದೊಡ್ಡ ಅಶುದ್ಧಿಯನ್ನು ನಿವಾರಿಸಲು ಪೂರ್ಣ ರೂಪದಲ್ಲಿ ಸ್ನಾನ ಮಾಡಿರಿ. ನಂತರ ನಮಾಝ್ ಮುಂದುವರಿಸಿರಿ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಜರ್ಮನ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية الموري المالاجاشية الأورومو الولوف الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಮುಟ್ಟಿನ ಅವಧಿಯು ಮುಗಿದರೆ ಮಹಿಳೆಯರು ಸ್ನಾನ ಮಾಡುವುದು ಕಡ್ಡಾಯವಾಗಿದೆ.
  2. ಇಸ್ತಿಹಾದ (ರಕ್ತಸ್ರಾವ) ದಿಂದ ಬಳಲುತ್ತಿರುವ ಮಹಿಳೆಯರು ನಮಾಝ್ ನಿರ್ವಹಿಸುವುದು ಕಡ್ಡಾಯವಾಗಿದೆ.
  3. ಮುಟ್ಟು (ಹೈದ್) ಎಂದರೆ, ಮಹಿಳೆಯ ಜನನಾಂಗದ ಮೂಲಕ ನಿರ್ದಿಷ್ಟ ಸಮಯದಲ್ಲಿ ಗರ್ಭಾಶಯವು ಹೊರಹಾಕುವ ನೈಸರ್ಗಿಕ ರಕ್ತ.
  4. ರಕ್ತಸ್ರಾವ (ಇಸ್ತಿಹಾದ) ಎಂದರೆ, ಸಾಧಾರಣ ಅವಧಿಯ ಹೊರಗೆ ಗರ್ಭಾಶಯದ ಕೆಳಗಿನ ಭಾಗದಲ್ಲಿರುವ ರಕ್ತನಾಳದಿಂದ ಸ್ರವಿಸುವ ರಕ್ತ.
  5. ಮುಟ್ಟಿನ ರಕ್ತ ಮತ್ತು ರಕ್ತಸ್ರಾವದ ರಕ್ತದ ನಡುವಿನ ವ್ಯತ್ಯಾಸ: ಮುಟ್ಟಿನ ರಕ್ತವು ಸಾಮಾನ್ಯವಾಗಿ ಕಪ್ಪಗೆ, ದಪ್ಪ ಮತ್ತು ಪ್ರಬಲ ವಾಸನೆಯನ್ನು ಹೊಂದಿರುತ್ತದೆ. ಆದರೆ ರಕ್ತಸ್ರಾವದ ರಕ್ತವು ಕೆಂಪು, ತೆಳ್ಳಗಿರುತ್ತದೆ. ಅದಕ್ಕೆ ಪ್ರಬಲ ವಾಸನೆಯಿರುವುದಿಲ್ಲ.