عَنْ أَبِي هُرَيْرَةَ رَضيَ اللهُ عنه قَالَ:
إِنَّ النَّبِيَّ صَلَّى اللهُ عَلَيْهِ وَسَلَّمَ نَهَى أَنْ يُسْتَنْجَى بِرَوْثٍ أَوْ عَظْمٍ، وَقَالَ: «إِنَّهُمَا لَا تُطَهِّرَانِ».
[صحيح] - [رواه الدارقطني] - [سنن الدارقطني: 152]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
"ಖಂಡಿತವಾಗಿಯೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಲದ್ದಿ ಅಥವಾ ಮೂಳೆಯಿಂದ 'ಇಸ್ತಿಂಜಾ' (ಶುದ್ಧೀಕರಣ) ಮಾಡುವುದನ್ನು ನಿಷೇಧಿಸಿದರು, ಮತ್ತು ಹೇಳಿದರು: 'ಖಂಡಿತವಾಗಿಯೂ ಅವೆರಡೂ ಶುದ್ಧೀಕರಿಸುವುದಿಲ್ಲ' ".
[صحيح] - [رواه الدارقطني] - [سنن الدارقطني - 152]
ಮೂತ್ರ ಅಥವಾ ಮಲ ವಿಸರ್ಜಿಸಿ ತನ್ನ ಅಗತ್ಯವನ್ನು ಪೂರೈಸಿದವನು, ಪ್ರಾಣಿಯ ಮೂಳೆ ಅಥವಾ ಅದರ ಲದ್ದಿ ಮತ್ತು ಒಣ ಹಿಕ್ಕೆಗಳಿಂದ 'ಇಸ್ತಿಜ್ಮಾರ್' (ಕಲ್ಲು ಇತ್ಯಾದಿಗಳಿಂದ ಶುದ್ಧೀಕರಿಸುವುದು) ಮಾಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದರು; ಮತ್ತು ಹೇಳಿದರು: ಅವುಗಳು 'ನಜಾಸತ್' (ಅಶುದ್ಧತೆ) ಯನ್ನು ನಿವಾರಿಸುವುದಿಲ್ಲ, ಮತ್ತು ಅದನ್ನು ಶುದ್ಧ ಮಾಡುವುದಿಲ್ಲ.