+ -

عَنْ عَمَّارِ بنِ ياسِرٍ رضي الله عنه قال:
بَعَثَنِي رَسُولُ اللهِ صَلَّى اللهُ عَلَيْهِ وَسَلَّمَ فِي حَاجَةٍ، فَأَجْنَبْتُ فَلَمْ أَجِدِ الْمَاءَ، فَتَمَرَّغْتُ فِي الصَّعِيدِ كَمَا تَمَرَّغُ الدَّابَّةُ ثُمَّ أَتَيْتُ النَّبِيَّ صَلَّى اللهُ عَلَيْهِ وَسَلَّمَ، فَذَكَرْتُ ذَلِكَ لَهُ فَقَالَ: «إِنَّمَا كَانَ يَكْفِيكَ أَنْ تَقُولَ بِيَدَيْكَ هَكَذَا» ثُمَّ ضَرَبَ بِيَدَيْهِ الْأَرْضَ ضَرْبَةً وَاحِدَةً، ثُمَّ مَسَحَ الشِّمَالَ عَلَى الْيَمِينِ، وَظَاهِرَ كَفَّيْهِ وَوَجْهَهُ.

[صحيح] - [متفق عليه] - [صحيح مسلم: 368]
المزيــد ...

ಅಮ್ಮಾರ್ ಬಿನ್ ಯಾಸಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಒಂದು ಕಾರ್ಯಕ್ಕೆ ಕಳುಹಿಸಿದರು. ಆಗ ನನಗೆ ಜನಾಬತ್ (ದೊಡ್ಡ ಅಶುದ್ಧಿ) ಉಂಟಾಯಿತು. ನನಗೆ ನೀರು ಸಿಗಲಿಲ್ಲ. ಆದ್ದರಿಂದ ಪ್ರಾಣಿಯು ಹೊರಳಾಡುವಂತೆ ನಾನು ಮಣ್ಣಿನಲ್ಲಿ ಹೊರಳಾಡಿದೆ. ನಂತರ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ನಡೆದ ಸಂಗತಿಯನ್ನು ತಿಳಿಸಿದೆ. ಅವರು ಹೇಳಿದರು: "ನೀನು ನಿನ್ನ ಕೈಗಳಿಂದ ಹೀಗೆ ಮಾಡಿದರೆ ನಿನಗೆ ಸಾಕಾಗುತ್ತಿತ್ತು." ನಂತರ ಅವರು ತಮ್ಮ ಕೈಗಳಿಂದ ಒಂದು ಬಾರಿ ನೆಲಕ್ಕೆ ಬಡಿದರು. ನಂತರ ಎಡಗೈಯಿಂದ ಬಲಗೈಯನ್ನು, ಎರಡು ಅಂಗೈಗಳ ಹೊರಭಾಗವನ್ನು ಮತ್ತು ಮುಖವನ್ನು ಸವರಿದರು.

[صحيح] - [متفق عليه] - [صحيح مسلم - 368]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಮ್ಮಾರ್ ಬಿನ್ ಯಾಸಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನು ಯಾವುದೋ ಅಗತ್ಯಕ್ಕಾಗಿ ಯಾತ್ರೆ ಕಳುಹಿಸಿದರು. ಆಗ ಅವರಿಗೆ ಸಂಭೋಗ ಅಥವಾ ಕಾಮೋದ್ರೇಕದಿಂದ ವೀರ್ಯ ಸ್ಖಲನವಾಗಿ ಜನಾಬತ್ (ದೊಡ್ಡ ಅಶುದ್ಧಿ) ಉಂಟಾಯಿತು. ಅವರಿಗೆ ಸ್ನಾನ ಮಾಡಲು ನೀರು ಸಿಗಲಿಲ್ಲ. ಜನಾಬತ್ (ದೊಡ್ಡ ಅಶುದ್ಧಿ) ನಿವಾರಿಸಲು ತಯಮ್ಮುಮ್ ಮಾಡುವ ವಿಧಿ ಅವರಿಗೆ ತಿಳಿದಿರಲಿಲ್ಲ. ಅವರು ಸಣ್ಣ ಅಶುದ್ಧಿಗಾಗಿ ಮಾತ್ರ ಅದರ ವಿಧಿಯನ್ನು ತಿಳಿದಿದ್ದರು. ಸಣ್ಣ ಅಶುದ್ಧಿಗಾಗಿ ವುದೂವಿನ ಕೆಲವು ಅಂಗಗಳನ್ನು ಭೂಮಿಯ ಮೇಲಿನ ಮಣ್ಣಿಗೆ ಸವರುವಂತೆ, ಜನಾಬತ್ (ದೊಡ್ಡ ಅಶುದ್ಧಿ) ಗಾಗಿ ತಯಮ್ಮುಮ್ ಮಾಡುವಾಗ ಸಂಪೂರ್ಣ ದೇಹಕ್ಕೆ ಮಣ್ಣು ಸವರುವುದು ಕಡ್ಡಾಯವೆಂದು ಅವರು ಭಾವಿಸಿದರು. ಅವರು ಇದನ್ನು ನೀರಿನೊಂದಿಗೆ ಹೋಲಿಕೆ ಮಾಡಿದ್ದರು. ಆದ್ದರಿಂದ ದೇಹವು ಸಂಪೂರ್ಣ ಮಣ್ಣಾಗುವ ತನಕ ಅವರು ಮಣ್ಣಿನಲ್ಲಿ ಹೊರಳಾಡಿ ನಂತರ ನಮಾಝ್ ಮಾಡಿದರು. ನಂತರ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ತಾನು ಮಾಡಿದ್ದು ಸರಿಯೋ ಅಥವಾ ತಪ್ಪೋ ಎಂದು ತಿಳಿಯಲು ಅವರು ನಡೆದ ಸಂಗತಿಯನ್ನು ಅವರಿಗೆ ತಿಳಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಮೂತ್ರ ಮುಂತಾದ ಸಣ್ಣ ಅಶುದ್ಧಿ ಮತ್ತು ಜನಾಬತ್ ಮುಂತಾದ ದೊಡ್ಡ ಅಶುದ್ಧಿಯಿಂದ ಶುದ್ಧೀಕರಿಸುವ ವಿಧಾನವನ್ನು ವಿವರಿಸಿಕೊಟ್ಟರು: ಅದೇನೆಂದರೆ ಎರಡು ಅಂಗೈಗಳಿಂದ ಮಣ್ಣಿ ನ ಮೇಲೆ ಒಂದು ಬಾರಿ ಬಡಿಯುವುದು, ನಂತರ ಎಡಗೈಯಿಂದ ಬಲಗೈಯನ್ನು, ಅಂಗೈಗಳ ಹೊರಭಾಗವನ್ನು ಮತ್ತು ಮುಖವನ್ನು ಸವರುವುದು.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية التشيكية المالاجاشية الأورومو الولوف الأوكرانية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ತಯಮ್ಮುಮ್ ಮಾಡುವುದಕ್ಕೆ ಮೊದಲು ನೀರನ್ನು ಹುಡುಕುವುದು ಕಡ್ಡಾಯವಾಗಿದೆ.
  2. ದೊಡ್ಡ ಅಶುದ್ಧಿಯಲ್ಲಿದ್ದು ನೀರು ಸಿಗದಿದ್ದರೆ ತಯಮ್ಮುಮ್ ಮಾಡುವುದು ಶಾಸ್ತ್ರೋಕ್ತವಾಗಿದೆ.
  3. ಸಣ್ಣ ಅಶುದ್ಧಿಗೆ ತಯಮ್ಮುಮ್ ಮಾಡುವಂತೆಯೇ ದೊಡ್ಡ ಅಶುದ್ಧಿಗಾಗಿಯೂ ತಯಮ್ಮುಮ್ ಮಾಡಬೇಕು.
ಇನ್ನಷ್ಟು