عَنْ سَعْدِ بنِ أبي وَقَّاصٍ رَضيَ اللهُ عنه قَالَ:
كُنَّا عِنْدَ رَسُولِ اللهِ صَلَّى اللهُ عَلَيْهِ وَسَلَّمَ، فَقَالَ: «أَيَعْجِزُ أَحَدُكُمْ أَنْ يَكْسِبَ، كُلَّ يَوْمٍ أَلْفَ حَسَنَةٍ؟» فَسَأَلَهُ سَائِلٌ مِنْ جُلَسَائِهِ: كَيْفَ يَكْسِبُ أَحَدُنَا أَلْفَ حَسَنَةٍ؟ قَالَ: «يُسَبِّحُ مِائَةَ تَسْبِيحَةٍ، فَيُكْتَبُ لَهُ أَلْفُ حَسَنَةٍ، أَوْ يُحَطُّ عَنْهُ أَلْفُ خَطِيئَةٍ».
[صحيح] - [رواه مسلم] - [صحيح مسلم: 2698]
المزيــد ...
ಸ'ಅದ್ ಇಬ್ನ್ ಅಬೀ ವಖ್ಖಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಇದ್ದೆವು. ಆಗ ಅವರು ಹೇಳಿದರು: "ನಿಮ್ಮಲ್ಲೊಬ್ಬನಿಗೆ ಪ್ರತಿದಿನ ಒಂದು ಸಾವಿರ ಪುಣ್ಯಗಳನ್ನು ಗಳಿಸಲು ಸಾಧ್ಯವಿಲ್ಲವೇ?" ಆಗ ಅವರೊಂದಿಗೆ ಕುಳಿತಿದ್ದವರಲ್ಲಿ ಒಬ್ಬರು ಕೇಳಿದರು: "ನಮ್ಮಲ್ಲೊಬ್ಬನು ಒಂದು ಸಾವಿರ ಪುಣ್ಯಗಳನ್ನು ಹೇಗೆ ಗಳಿಸಬಹುದು?" ಅವರು (ಪ್ರವಾದಿ) ಹೇಳಿದರು: "ಅವನು ನೂರು ಬಾರಿ ತಸ್ಬೀಹ್ (ಸುಬ್‌ಹಾನಲ್ಲಾಹ್) ಹೇಳುತ್ತಾನೆ. ಆಗ ಅವನಿಗಾಗಿ ಒಂದು ಸಾವಿರ ಪುಣ್ಯಗಳು ಬರೆಯಲ್ಪಡುತ್ತವೆ, ಅಥವಾ ಅವನಿಂದ ಒಂದು ಸಾವಿರ ಪಾಪಗಳು ಅಳಿಸಿಹಾಕಲ್ಪಡುತ್ತವೆ".
[صحيح] - [رواه مسلم] - [صحيح مسلم - 2698]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳೊಡನೆ ಕೇಳಿದರು: ನಿಮ್ಮಲ್ಲೊಬ್ಬನಿಗೆ ಪ್ರತಿದಿನ ಒಂದು ಸಾವಿರ ಪುಣ್ಯಗಳನ್ನು ಪಡೆಯಲು ಸಾಧ್ಯವಿಲ್ಲವೇ?! ಆಗ ಅವರೊಂದಿಗೆ ಕುಳಿತಿದ್ದವರಲ್ಲಿ ಒಬ್ಬರು ಕೇಳಿದರು: ಒಬ್ಬ ವ್ಯಕ್ತಿಯು ಒಂದು ದಿನದಲ್ಲಿ ಸುಲಭವಾಗಿ ಒಂದು ಸಾವಿರ ಪುಣ್ಯಗಳನ್ನು ಹೇಗೆ ಪಡೆಯಬಹುದು? ಅವರು (ಪ್ರವಾದಿ) ಹೇಳಿದರು: ಅವನು ನೂರು ಬಾರಿ "ಸುಬ್‌ಹಾನಲ್ಲಾಹ್" ಎಂದು ಹೇಳುತ್ತಾನೆ; ಆಗ ಅವನಿಗಾಗಿ ಒಂದು ಸಾವಿರ ಪುಣ್ಯಗಳು ಬರೆಯಲ್ಪಡುತ್ತವೆ; ಏಕೆಂದರೆ ಒಂದು ಪುಣ್ಯಕ್ಕೆ ಅದರ ಹತ್ತು ಪಟ್ಟು ಪ್ರತಿಫಲವಿದೆ. ಅಥವಾ ಅವನ ಪಾಪಗಳಿಂದ ಒಂದು ಸಾವಿರ ಪಾಪಗಳು ಅಳಿಸಿಹಾಕಲ್ಪಡುತ್ತವೆ.