عَنْ أَنَسِ بْنِ مَالِكٍ رَضيَ اللهُ عنه عَنِ النَّبِيِّ صَلَّى اللهُ عَلَيْهِ وَسَلَّمَ أَنَّهُ قَالَ:
«اللهُمَّ لَا عَيْشَ إِلَّا عَيْشُ الْآخِرَهْ، فَاغْفِرْ لِلْأَنْصَارِ وَالْمُهَاجِرَهْ».

[صحيح] - [متفق عليه] - [صحيح مسلم: 1805]
المزيــد ...

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದರು:
"ಓ ಅಲ್ಲಾಹನೇ, ಪರಲೋಕದ ಜೀವನವನ್ನು ಹೊರತುಪಡಿಸಿ ಬೇರೆ (ನೈಜ) ಜೀವನವಿಲ್ಲ. ಆದ್ದರಿಂದ, ಅನ್ಸಾರ್‌ಗಳನ್ನು ಮತ್ತು ಮುಹಾಜಿರ್‌ಗಳನ್ನು ಕ್ಷಮಿಸು".

[صحيح] - [متفق عليه] - [صحيح مسلم - 1805]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅಲ್ಲಾಹನ ಸಂತೃಪ್ತಿ, ಕರುಣೆ ಮತ್ತು ಸ್ವರ್ಗದಲ್ಲಿರುವ ಪರಲೋಕದ ಜೀವನವನ್ನು ಹೊರತುಪಡಿಸಿ ಬೇರೆ ನೈಜ ಜೀವನವಿಲ್ಲ; ಏಕೆಂದರೆ ಈ ಪ್ರಪಂಚದ ಜೀವನವು ನಶ್ವರವಾಗಿದೆ, ಮತ್ತು ಪರಲೋಕದ ಜೀವನವೇ ಶಾಶ್ವತ ಮತ್ತು ಚಿರಸ್ಥಾಯಿಯಾಗಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಮತ್ತು ಮುಹಾಜಿರ್‌ಗಳಿಗೆ ಆಶ್ರಯ ನೀಡಿದ, ಅವರಿಗೆ ಸಹಾಯ ಮಾಡಿದ, ಮತ್ತು ತಮ್ಮ ಸಂಪತ್ತನ್ನು ಅವರೊಂದಿಗೆ ಹಂಚಿಕೊಂಡ ಅನ್ಸಾರ್‌ಗಳಿಗಾಗಿ, ಮತ್ತು ಅಲ್ಲಾಹನ ಅನುಗ್ರಹ ಮತ್ತು ಸಂತೃಪ್ತಿಯನ್ನು ಬಯಸಿ ತಮ್ಮ ಮನೆ ಹಾಗೂ ಸಂಪತ್ತನ್ನು ತೊರೆದ ಮುಹಾಜಿರ್‌ಗಳಿಗಾಗಿ ಕ್ಷಮೆ, ಗೌರವ ಮತ್ತು ಸದ್ಗುಣಕ್ಕಾಗಿ ಪ್ರಾರ್ಥಿಸಿದರು.

ಹದೀಸಿನ ಪ್ರಯೋಜನಗಳು

  1. ಇಹಲೋಕದ ಬಗ್ಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ಝುಹ್ದ್' (ವೈರಾಗ್ಯ) ಮತ್ತು ಪರಲೋಕದ ಕಡೆಗಿನ ಅವರ ಒಲವನ್ನು ತಿಳಿಸಲಾಗಿದೆ.
  2. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯಕ್ಕೆ ಈ ಪ್ರಪಂಚದ ನಶ್ವರ ಸುಖಭೋಗಗಳ ಬಗ್ಗೆ ವೈರಾಗ್ಯ ತಾಳಲು ಪ್ರೋತ್ಸಾಹಿಸುತ್ತಿದ್ದರೆಂದು ತಿಳಿಸಲಾಗಿದೆ.
  3. ಮುಹಾಜಿರ್‌ಗಳು ಮತ್ತು ಅನ್ಸಾರ್‌ಗಳ ಶ್ರೇಷ್ಠತೆಯನ್ನು ವಿವರಿಸಲಾಗಿದೆ. ಏಕೆಂದರೆ, ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕ್ಷಮೆಯ ಪ್ರಾರ್ಥನೆಯನ್ನು ಪಡೆಯುವಲ್ಲಿ ವಿಜಯಿಗಳಾದರು.
  4. ದಾಸನು ಇಹಲೋಕದಲ್ಲಿ ತಾನು ಗಳಿಸಿದ್ದಕ್ಕಾಗಿ ಸಂತೋಷಪಡಬಾರದು. ಏಕೆಂದರೆ ಅದು ತೊಂದರೆಗಳಿಂದ ಕೂಡಿದ್ದು, ಶೀಘ್ರವಾಗಿ ನಾಶವಾಗುವಂಥದ್ದಾಗಿದೆ. ಖಂಡಿತವಾಗಿಯೂ, ಶಾಶ್ವತ ಮತ್ತು ಸ್ಥಿರವಾದ ನಿವಾಸವು ಪರಲೋಕವಾಗಿದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ತಮಿಳು ಥಾಯ್ الأسامية الأمهرية الهولندية الغوجاراتية الدرية الرومانية المجرية الجورجية المقدونية الخميرية البنجابية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು